• Home  
  • ಉಚ್ಚಿಲ  ಸರಸ್ವತಿ ಮಂದಿರ ಶಾಲೆಯಲ್ಲಿ ಇಂಟರಾಕ್ಟ್  ಕ್ಲಬ್ ಪದ ಪ್ರಧಾನ (Interact Club is the main activity at Uchilla Saraswati Mandir School.)
- ಸಂಘ, ಸಂಸ್ಥೆಗಳು

ಉಚ್ಚಿಲ  ಸರಸ್ವತಿ ಮಂದಿರ ಶಾಲೆಯಲ್ಲಿ ಇಂಟರಾಕ್ಟ್  ಕ್ಲಬ್ ಪದ ಪ್ರಧಾನ (Interact Club is the main activity at Uchilla Saraswati Mandir School.)

Share: ಉಚ್ಚಿಲ  ಸರಸ್ವತಿ ಮಂದಿರ ಶಾಲೆಯಲ್ಲಿ ಇಂಟರಾಕ್ಟ್  ಕ್ಲಬ್ ಪದ ಪ್ರಧಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ವೈ. ಸುಧೀರ್ ಕುಮಾರ್  (Padubidri) ಪಡುಬಿದ್ರಿ : ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿ ಇಂಟರಾಕ್ಟ್  ಕ್ಲಬ್ ಪದ ಪ್ರಧಾನ ಕಾರ್ಯಕ್ರಮವು ಶನಿವಾರ ಶಾಲಾ ಸಂಭಾಗಣದಲ್ಲಿ ಜರಗಿತು.    2026-27 ನೇ ಸಾಲಿನ ನೂತನ ಅಧ್ಯಕ್ಷ ಮಾನ್ವಿತ್ ಹಾಗೂ ಕಾರ್ಯದರ್ಶಿ ರಫಾ ಹಾಗೂ ಪದಾಧಿಕಾರಿಗಳಿಗೆ ಪಡುಬಿದ್ರಿ ರೋಟರಿ ಕ್ಲಬ್ಬಿನ ಪದ ಪ್ರಧಾನ ಅಧಿಕಾರಿಯಾಗಿ ಆಗಮಿಸಿದ ಪಿ […]

 (Padubidri) ಪಡುಬಿದ್ರಿ : ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿ ಇಂಟರಾಕ್ಟ್  ಕ್ಲಬ್ ಪದ ಪ್ರಧಾನ ಕಾರ್ಯಕ್ರಮವು ಶನಿವಾರ ಶಾಲಾ ಸಂಭಾಗಣದಲ್ಲಿ ಜರಗಿತು.

   2026-27 ನೇ ಸಾಲಿನ ನೂತನ ಅಧ್ಯಕ್ಷ ಮಾನ್ವಿತ್ ಹಾಗೂ ಕಾರ್ಯದರ್ಶಿ ರಫಾ ಹಾಗೂ ಪದಾಧಿಕಾರಿಗಳಿಗೆ ಪಡುಬಿದ್ರಿ ರೋಟರಿ ಕ್ಲಬ್ಬಿನ ಪದ ಪ್ರಧಾನ ಅಧಿಕಾರಿಯಾಗಿ ಆಗಮಿಸಿದ ಪಿ ಎಚ್ ಎಫ್  ಗಣೇಶ್ ಆಚಾರ್ಯ ಪ್ರತಿಜ್ಞಾವಿಧಿ ಬೋಧಿಸಿದರು.

  ಈ ಸಂದರ್ಭ ಅವರು ಉಚ್ಚಿಲ ಇಂಟರಾಕ್ಟ್  ಕ್ಲಬ್ಬಿನ ಮಹತ್ವದ ಬಗ್ಗೆ ತಿಳಿಸಿ, ಇಂದಿನ ವಿದ್ಯಾರ್ಥಿಗಳು ಪ್ರೀತಿ ಸೌಹಾರ್ದತೆ ಹಾಗೂ ಸೇವಾ ಮನೋಭಾವನೆ, ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಜೊತೆಗೆ ರಸ್ತೆ ಸುರಕ್ಷತೆ ಬಗ್ಗೆ ಮಕ್ಕಳಿಗೆ ತಿಳಿಸಿದರು.

  ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ವೈ. ಸುಧೀರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

   ವೇದಿಕೆಯಲ್ಲಿ ಇಂಟರಾಕ್ಟ್  ಶಿಕ್ಷಕಿ ಮಮತಾ ಹಾಗೂ ಪಡುಬಿದ್ರಿ ರೋಟರಿ ಕ್ಲಬ್ಬಿನ ಕಾರ್ಯದರ್ಶಿ  ಕಾರ್ತಿಕ್, ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.

   ಪ್ರೌಢಶಾಲಾ ಮುಖ್ಯ ಶಿಕ್ಷಕ ಬಾಬುರಾಯ ಆಚಾರ್ಯ ಸ್ವಾಗತಿಸಿದರು. ಸಫೀಕ್ ಕಾರ್ಯಕ್ರಮ  ನಿರ್ವಹಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.