• Home  
  • ಮುಕುಂದ ಕೃಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸ್ಥಾಪಕರ ದಿನಾಚರಣೆ (School Founder’s Day Celebration at Mukunda Kripa English Medium School)
- ಶಾಲಾ ಕಾಲೇಜು

ಮುಕುಂದ ಕೃಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸ್ಥಾಪಕರ ದಿನಾಚರಣೆ (School Founder’s Day Celebration at Mukunda Kripa English Medium School)

Share: ಮುಕುಂದ ಕೃಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಕೆ ಶ್ರೀಧರ್ ರಂಗನಾಥ್ ಪೈ (Udupi) ಉಡುಪಿ: ಮುಕುಂದ ಕೃಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸ್ಥಾಪಕರ ದಿನಾಚರಣೆ ಅದ್ದೂರಿಯಿಂದ ಜರುಗಿತು.   ಸಮಾರಂಭದ ಅಧ್ಯಕ್ಷತೆ ವಹಿಸಿದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ್ ಇದರ ಆಡಳಿತ ಅಧಿಕಾರಿ ಡಾಕ್ಟರ್ ಕೆ ಶ್ರೀಧರ್ ರಂಗನಾಥ್ ಪೈ ಇವರು ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, ಡಾಕ್ಟರ್ ಟಿ. ಎಂ. ಎ […]

(Udupi) ಉಡುಪಿ: ಮುಕುಂದ ಕೃಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸ್ಥಾಪಕರ ದಿನಾಚರಣೆ ಅದ್ದೂರಿಯಿಂದ ಜರುಗಿತು.

  ಸಮಾರಂಭದ ಅಧ್ಯಕ್ಷತೆ ವಹಿಸಿದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ್ ಇದರ ಆಡಳಿತ ಅಧಿಕಾರಿ ಡಾಕ್ಟರ್ ಕೆ ಶ್ರೀಧರ್ ರಂಗನಾಥ್ ಪೈ ಇವರು ಅಧ್ಯಕ್ಷತೆ ವಹಿಸಿದ್ದರು.

ಅವರು ಮಾತನಾಡಿ, ಡಾಕ್ಟರ್ ಟಿ. ಎಂ. ಎ ಪೈ  ಮಹಾನ್ ಸಾಧಕರಾಗಿದ್ದಾರೆ, ಮಕ್ಕಳು ಅವರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.

  ಮುಖ್ಯ ಅತಿಥಿಗಳಾದ ಡಾಕ್ಟರ್ ಎಮ್ ಎ ಪೈ ಕಾಲೇಜ್ ಆಫ್ ಎಜುಕೇಶನ್ ಉಡುಪಿ ಇದರ ಸಮನ್ವಯಾಧಿಕಾರಿಗಳಾದ ಡಾಕ್ಟರ್ ಮಹಾಬಲೇಶ್ವರ ಮಾತನಾಡಿ, ಡಾಕ್ಟರ್ ತೋನ್ಸೆ ಮಾಧವ ಅನಂತ ಪೈ ದೂರ ದರ್ಶಿತ್ವ ಉಳ್ಳ ಓರ್ವ ಮಹಾನ್ ಸಾಧಕರು. ಮಕ್ಕಳೆಲ್ಲರೂ ಅವರ ಅವರ ಚಿಂತನೆಗಳನ್ನು ಅರಿತು ಜೀವನವನ್ನು ಸಫಲಗೊಳಿಸಬೇಕು , ಎಂದು ಕಿವಿ ಮಾತನ್ನು ಹೇಳಿದರು.

 ಶಾಲಾ ಮುಖ್ಯೋಪಾ ಧ್ಯಾಯಿನಿ ಶ್ರೀಮತಿ ವಿನುತಾ ಎಸ್ ನಾಯಕ್ ಸ್ವಾಗತಿಸಿದರು,

ಶಾಲಾ ಶಿಕ್ಷ̧ಕ ರಕ್ಷಕ ಸಂಘದ ಅಧ್ಯಕ್ಷ ಶ್ರೀ ಗಣೇಶ ಶೆಣೈ  ಶುಭ ಹಾರೈಸಿದರು.

  ಶ್ರೀಮತಿ ವಿದ್ಯಾಲಕ್ಷ್ಮಿ ಸಂಸ್ಥಾಪಕರ ಕುರಿತು ಮಾಹಿತಿ ಇತ್ತರು.

  ಶಾಲಾ ಶಿಕ್ಷಕಿಯರಾದ ಶ್ರೀಮತಿ ಸೌಮ್ಯ ಹಾಗೂ ಹರ್ಷಿಣಿ ಕಾರ್ಯಕ್ರಮ ಸಂಯೋಜಿಸಿದ್ದರು.

 ಶ್ರೀಮತಿ ಜಯಲಕ್ಷ್ಮಿ ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಗೀತಾ ಬಹುಮಾನ ವಿಜೇತರ ಪಟ್ಟಿಯನ್ನು ಓದಿದರು. ಶ್ರೀಮತಿ ವೀಣಾ ಕಾಮತ್ ವಂದಿಸಿದರು.

  ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರುಗಿತು. ಶಾಲೆಯಲ್ಲಿ ಸೇವೆ ಸಲ್ಲಿಸಿದ ಹಿಂದಿನ ಸಾಲಿನ ಶಿಕ್ಷಕರು, ಶಿಕ್ಷಕಿಯರು, ಶಾಲಾ ಹಿತೈಷಿಗಳು, ಪೋಷಕರು, ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.