• Home  
  • ಶ್ರೇಷ್ಠತೆಗಾಗಿ ಮರುರೂಪ (Rewiredfor excellence)
- SPECIAL STORY

ಶ್ರೇಷ್ಠತೆಗಾಗಿ ಮರುರೂಪ (Rewiredfor excellence)

Share: ಶ್ರೇಷ್ಠತೆಗಾಗಿ ಮರುರೂಪ ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ  ಸಹಾಯಕ ಪ್ರಾಧ್ಯಾಪಕ ಚೇತನ್‌ ಆರ್ ವಿಶೇಷ ಲೇಖನ  (Udupi) ಉಡುಪಿ: ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಜಗತ್ತಿನ ಪ್ರತಿಯೊಂದನ್ನೂ ಬದಲಾಯಿಸುತ್ತಿರುವ ಈ ಇಂದಿನ ಕಾಲಘಟ್ಟದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ, ಎಲೋನ್ ಮಸ್ಕ್ ಅಥವಾ ವಿರಾಟ್‌ ಕೊಹ್ಲಿಯಂತಹ ಜಾಗತಿಕ ದ್ರುವತಾರೆಗಳನ್ನು ಸಾಮಾನ್ಯ ಜನರಿಂದ ಪ್ರತ್ಯೇಕಿಸುವ ಅಂಶ ಯಾವುದು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಇದಕ್ಕೆ ಕೇವಲ ಅವರಲ್ಲಿರುವ ಜನ್ಮಜಾತ ಪ್ರತಿಭೆಷ್ಟೇ ಕಾರಣವಲ್ಲ. ಇದರ ನಿಜವಾದ ರಹಸ್ಯ ಅಡಗಿರುವುದು […]

 (Udupi) ಉಡುಪಿ: ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಜಗತ್ತಿನ ಪ್ರತಿಯೊಂದನ್ನೂ ಬದಲಾಯಿಸುತ್ತಿರುವ ಈ ಇಂದಿನ ಕಾಲಘಟ್ಟದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ, ಎಲೋನ್ ಮಸ್ಕ್ ಅಥವಾ ವಿರಾಟ್‌ ಕೊಹ್ಲಿಯಂತಹ ಜಾಗತಿಕ ದ್ರುವತಾರೆಗಳನ್ನು ಸಾಮಾನ್ಯ ಜನರಿಂದ ಪ್ರತ್ಯೇಕಿಸುವ ಅಂಶ ಯಾವುದು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಇದಕ್ಕೆ ಕೇವಲ ಅವರಲ್ಲಿರುವ ಜನ್ಮಜಾತ ಪ್ರತಿಭೆಷ್ಟೇ ಕಾರಣವಲ್ಲ.

ಇದರ ನಿಜವಾದ ರಹಸ್ಯ ಅಡಗಿರುವುದು ಅವರು ತಮ್ಮ ದೈನಂದಿನ ಅಭ್ಯಾಸಗಳನ್ನು ನಿರ್ವಹಿಸುವ ವಿಧಾನದಲ್ಲಿ ಮತ್ತು ನಮ್ಮೆಲ್ಲರ ಮೆದುಳಿನಲ್ಲಿರುವ “ಡೋಪಮೈನ್” ಎಂಬ ಶಕ್ತಿಶಾಲಿ ರಾಸಾಯನಿಕವನ್ನು ನಿಯಂತ್ರಿಸುವ ಕಲೆಯಲ್ಲಿದೆ.

  ಡೋಪಮೈನ್‌ ಅನ್ನು ನಿಮ್ಮ ಮೆದುಳಿನ ಪ್ರೇರಣೆಯ  ನೈಸರ್ಗಿಕ ಇಂಧನ ಎಂದು ಭಾವಿಸಿ, ಇದೇ ರಾಸಾಯನಿಕ ಶಕ್ತಿಯು ನಿಮ್ಮನ್ನು ಬೆಳಿಗ್ಗೆ ಹಾಸಿಗೆಯಿಂದ ಏಳುವಂತೆ ಮಾಡುತ್ತದೆ ಮತ್ತು ಕಠಿಣ ಪರಿಶ್ರಮವನ್ನುಎದುರಿಸಲು ಪ್ರೇರೇಪಿಸುತ್ತದೆ. ಅಲ್ಲದೆ ನಿಮ್ಮ ಪ್ರಯತ್ನಗಳನ್ನು ಬೆನ್ನಟ್ಟುವಂತೆ ಮಾಡುತ್ತದೆ.

 ಆದರೆ, ಆಧುನಿಕ ಜೀವನ ಶೈಲಿಯು  ಈ ವ್ಯವಸ್ಥೆಗೆ ಒಂದುದೊಡ್ಡ ಬಲೆಯನ್ನು ಹೆಣೆದಿದೆ. ಪ್ರತಿಬಾರಿ ನೀವು ನಿಮ್ಮ ಮೊಬೈಲ್ ಪೋನ್‌ಗಳಲ್ಲಿ ಗಂಟೆ ಗಟ್ಟಲೆ ನಿರರ್ಥಕವಾಗಿ ಶಾರ್ಟ್ಸ್ ವಿಡಿಯೋಗಳನ್ನು ವೀಕ್ಷಿಸಿದಾಗ, ಜಂಕ್ ಫುಡ್‌ ತಿಂದಾಗ ಅಥವಾ ಕ್ಷಣಿಕ ಸಂತೋಷವನ್ನು ಹುಡುಕಿದಾಗ, ತಜ್ಞರು ಹೇಳುವ  ಅಗ್ಗದ ಅಥವಾ ಕಷ್ಟಪಡದೆ ಸಿಗುವ ಡೋಪಮೈನ್‌ ಅನ್ನು  ನಿಮ್ಮ ಮೆದುಳಿಗೆ ಅತಿಯಾಗಿ ತುಂಬಿಸುತ್ತಿರುತ್ತೀರಿ.

   ನೆನಪಿಡಿ, ನಿಮ್ಮ ಮೆದುಳಿನಲ್ಲಿ ಈ ಇಂಧನದ ಸಂಗ್ರಹ ಸೀಮಿತವಾಗಿರುತ್ತದೆ. ಯಾವುದೇ ನೈಜ ಪ್ರಯತ್ನವನ್ನು ಮಾಡದೆಯೇ ನಿಮಗೆ ದೊಡ್ಡ ಮಟ್ಟದ ಆನಂದ ಸಿಕ್ಕಾಗ, ನಿಮ್ಮ ಮೆದುಳು ತಕ್ಷಣವೇ ನಿಶ್ಯಕ್ತಗೊಳ್ಳುತ್ತದೆ. ಇದರಿಂದಾಗಿ ನಿಮ್ಮ ಶಕ್ತಿ ಮತ್ತು ಪ್ರೇರಣೆಯ ಮಟ್ಟವು ಮೊದಲಿದ್ದಕ್ಕಿಂತಲೂ ತಳಮಟ್ಟಕ್ಕೆ ಕುಸಿಯುತ್ತದೆ. ನೀವು ಸಂಪೂರ್ಣವಾಗಿ ದಣಿದಂತೆ, ಸೋಮಾರಿಗಳಂತೆ ಭಾಸವಾಗಲು ಮತ್ತು ಕೇವಲ ಸಾಮಾನ್ಯ ಸ್ಥಿತಿಗೆ ಮರಳಲು ಕೂಡ ಮತ್ತೆ ಮೊಬೈಲ್ ಪೋನ್‌ನನ್ನೇ ಆಶ್ರಯಿಸುವ ದುರಭ್ಯಾಸದ ಚಕ್ರಕ್ಕೆ ಸಿಲುಕಲು ಇದೇ ಕಾರಣ.

   ಈ ಸ್ಥಿತಿಯಲ್ಲಿ ನಿಮ್ಮ ನೈಜ ಗುರಿಗಳು ನಿಮಗೆ ಅತ್ಯಂತ ನೀರಸವಾಗಿ ಮತ್ತು ಸಪ್ಪೆಯಾಗಿ ಕಾಣತೊಡಗುತ್ತವೆ. ಜಗತ್ತಿನ ಅಗ್ರ ಶೇಕಡಾ ಒಂದರಷ್ಟು ಜನರು ಕೇವಲ ಕಷ್ಟಪಟ್ಟುಗಳಿಸಿದ  ಡೋಪಮೈನ್ ಮೇಲೆ ಮಾತ್ರ ಗಮನ ಹರಿಸುವ ಮೂಲಕ  ಈ ಬಲೆಯಿಂದ ದೂರವಿರುತ್ತಾರೆ. ಅವರು ದೈಹಿಕ ಸಾಮರ್ಥ್ಯವನ್ನು ಕಾಯ್ದುಕೊಳ್ಳುವುದು, ಹೊಸ ಕೌಶಲ್ಯಗಳನ್ನು ಕಲಿಯುವುದು ಅಥವಾ ಧ್ಯಾನ ಮಾಡುವುದರ ಮೂಲಕ ತಮ್ಮ  ಮೆದುಳಿಗೆ ಕಠಿಣ ಪರಿಶ್ರಮದ ಪ್ರಕ್ರಿಯೆಯವನ್ನು ಆನಂದಿಸಲು ತರಬೇತಿ ನೀಡುತ್ತಾರೆ. ಅವರು ತಮಗೆ ಆಟದಂತೆ ಭಾಸವಾಗುವ, ಆದರೆ ಇತರರಿಗೆ ಕಠಿಣ ಪರಿಶ್ರಮದಂತೆ ಕಾಣುವ ಒಂದು ಪ್ರಮುಖ ಕೌಶಲ್ಯದ ಸುತ್ತತಮ್ಮ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳುತ್ತಾರೆ. ತದನಂತರ ಅದಕ್ಕೆ ಪೂರಕವಾಗಿ ಸದೃಢ ಆರೋಗ್ಯ ಮತ್ತು ಉತ್ತಮ ಗೌರವವನ್ನು ಗಳಿಸುವಂತಹ ಕೆಲವು ಹೆಚ್ಚುವರಿ ಅಭ್ಯಾಸವನ್ನು ರೂಢಿಸಿಕೊಳ್ಳುತ್ತಾರೆ.

  ಸಾಮಾನ್ಯ ಜನರು ಇಂತಹ ನಿರಂತರ ಗೊಂದಲಗಳ ಬಲೆಯಿಂದ  ಹೊರಬಂದು, ತಮ್ಮಏಕಾಗ್ರತೆಯನ್ನು ಮರಳಿ ಪಡೆಯಲು ಸಹಾಯ ಮಾಡಲು, ಜನಪ್ರಿಯ ಮಾದ್ಯಮ ಸೃಷ್ಟಿಕರ್ತ ರಣವೀರ್‌ ಅಲ್ಲಹಾಬಾದಿಯಾ ಅವರು ರಿವೈರ್ ಪ್ರೋಟೊಕಾಲ್ ಎಂಬ ಸರಳ ದೈನಂದಿನ ಪದ್ಧತಿಯನ್ನು ಹಂಚಿಕೊಂಡಿದ್ದಾರೆ. ಇದು ನಿಮ್ಮ ಕೆಟ್ಟ ಅಭ್ಯಾಸಗಳನ್ನು ಮತ್ತು ನೀವು ಎಷ್ಟು ಬಾರಿ ಕ್ಷಣಿಕ ಆಕರ್ಷಣೆಗಳಿಗೆ ಶರಣಾಗುತ್ತೀರಿ ಎಂಬುದನ್ನು ಪ್ರಾಮಾಣಿಕವಾಗಿ ದಿನಚರಿಯಲ್ಲಿ ಬರೆಯುವುದರೊಂದಿಗೆ ಪ್ರಾರಂಭವಾಗುತ್ತದೆ. ಮುಂದಿನ ಹಂತದಲ್ಲಿ ಆ ಕೆಟ್ಟ ಅಭ್ಯಾಸಗಳ ಜಾಗಕ್ಕೆ ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದು ಅಥವಾ ಉಪಯುಕ್ತವಾದದ್ದನ್ನು ಕಲಿಯುವಂತಹ ಒಳ್ಳೆಯ ಅಭ್ಯಾಸಗಳನ್ನು ಸಕ್ರಿಯವಾಗಿ ಬದಲಾಯಿಸಿಕೊಳ್ಳಬೇಕು. ನೀವು ಬೆಳಿಗ್ಗೆ ಎದ್ದ ತಕ್ಷಣವೇ  ಹೊರಗೆ ಬಂದು ಸೂರ್ಯ  ಬೆಳಕಿಗೆ  ಒಡ್ಡಿಕೊಳ್ಳುವುದರಿಂದ ನಿಮ್ಮ ನೈಸರ್ಗಿಕ ಬೆಳಗಿನ ಶಕ್ತಿಯನ್ನು ತಕ್ಷಣವೇ ಹೆಚ್ಚಿಸಿಕೊಳ್ಳಬಹುದು.  ಪ್ರಲೋಭನೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು, ಕೆಟ್ಟ ಅಭ್ಯಾಸಗಳು ನಿಮಗೆ ಸುಲಭವಾಗಿ ಸಿಗದಂತೆ ಅಡೆ ತಡೆಗಳನ್ನು ಸೃಷ್ಟಿಸಬೇಕು.

  ಉದಾಹರಣೆಗೆ ನಿಮ್ಮ ಪೋನ್‌ ಅನ್ನು ಮತ್ತೊಂದು ಕೋಣೆಯಲ್ಲಿಡುವುದು ಅಥವಾ ನಿಮ್ಮನ್ನು ದಾರಿತಪ್ಪಿಸುವ ಜನರಿಂದ ದೂರವಿರುವುದು. ನಂತರ, ಕೇವಲ ಜಿಮ್ ಶೂಗಳನ್ನು ಧರಿಸುವುದು ಅಥವಾ ಕೇವಲ ಒಂದು ವಾಕ್ಯವನ್ನು  ಬರೆಯುವಂತಹ ಅತ್ಯಂತ ಸಣ್ಣ ಮತ್ತು ಸುಲಭದ ಕೆಲಸಗಳಿಂದ ನಿಮ್ಮ ದಿನವನ್ನು ಆರಂಭಿಸುವ ಮೂಲಕ ಮಿನಿ-ವಿನ್ಸ್ ಅಥವಾ ಸಣ್ಣ ಯಶಸ್ಸಿನ ವೇಗವನ್ನು ಪಡೆದುಕೊಳ್ಳಬೇಕು.

  ಅಂತಿಮವಾಗಿ, ಯೋಗ ನಿದ್ರೆಯಂತಹಾ ಆಳವಾದ  ವಿಶ್ರಾಂತಿ ತಂತ್ರಗಳನ್ನು ಬಳಸಿಕೊಂಡು ನಿಮ್ಮ  ಶಕ್ತಿಯನ್ನು ಸರಿಯಾಗಿ ಮರು ಪೂರಣ ಮಾಡಿಕೊಳ್ಳುವುದನ್ನು ನೀವು ಕಲಿಯಬೇಕು. ಇದು ನಿಮ್ಮ ಮೆದುಳಿನ ಪ್ರೇರಣೆಯ ಸಂಗ್ರಹವನ್ನು ಶೇಕಡಾ ೬೦% ರಷ್ಟು ಮರುಪೂರಣ ಮಾಡಬಲ್ಲದು.

 ನಿಜವಾದ ದೀರ್ಘಕಾಲೀನ ಯಶಸ್ಸು ಎಂಬುದು ಒಂದು  ಮ್ಯಾರಥಾನ್‌ ಓಟವೇ ಹೊರತು ಅಲ್ಪಾವಧಿಯ ಓಟವಲ್ಲ. ಇಂದು ನೀವು ನಿಮ್ಮ ಮನಸ್ಸನ್ನು ನಿಯಂತ್ರಿಸಲು ಶಕ್ತಿಯನ್ನು ಉಳಿಸಿಕೊಳ್ಳಲು ಮತ್ತು ನಾಳೆ ಸುಸ್ಥಿರ ಉತ್ಕೃಷ್ಟತೆಯನ್ನು ಸಾಧಿಸಲು, ಇಂದಿನ ಅಗ್ಗದ  ಮತ್ತು ಕ್ಷಣಿಕ ಸುಖಗಳನ್ನು ತ್ಯಾಗ ಮಾಡುವುದು ಅತ್ಯಗತ್ಯವಾಗಿದೆ.

ಶ್ರೀ ಚೇತನ್‌ ಆರ್, ಸಹಾಯಕ ಪ್ರಾಧ್ಯಾಪಕರು. ವಿದ್ಯುನ್ಮಾನ ಮತ್ತು ಸಂವಹನ ವಿಭಾಗ, ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, ಬಂಟಕಲ್

Leave a comment

Your email address will not be published. Required fields are marked *

eMedia Kannada  @2025. All Rights Reserved.