ಉಚ್ಚಿಲ ದಸರಾ : ಸಾರ್ವಜನಿಕರ ಗಮನ ಸೆಳೆದ ದೇಗುಲದ ರಥ ಬೀದಿ ಸುತ್ತ ನಡೆದ ದಾಂಡಿಯಾ ರಾಸ್ ನೃತ್ಯ
ದಾಂಡಿಯಾ ರಾಸ್ ನೃತ್ಯ ಉದ್ಘಾಟಿಸಿದ ಡಾ. ಜಿ ಶಂಕರ್ ಮತ್ತು ಶಾಲಿನಿ ಜಿ ಶಂಕರ್ ದಂಪತಿ

ಚಿತ್ರ ಕೃಪೆ : ಸಚಿನ್ ಉಚ್ಚಿಲ.
(Uchila)ಉಚ್ಚಿಲ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಐದನೇ ವರ್ಷದ ಉಡುಪಿ – ಉಚ್ಚಿಲ ದಸರಾ ಮಹೋತ್ಸವದಲ್ಲಿ ಹತ್ತನೇ ದಿನ ಮಂಗಳವಾರ ಸಂಜೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ರಥ ಬೀದಿ ಸುತ್ತ ನಡೆದ ದಾಂಡಿಯಾ ರಾಸ್ ನೃತ್ಯವನ್ನು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜಾ ಡಾ. ಜಿ ಶಂಕರ್ ಮತ್ತು ಅವರ ಧರ್ಮ ಪತ್ನಿ ಶಾಲಿನಿ ಜಿ ಶಂಕರ್ ಕೋಲಾಟ ಆಡುವ ಮೂಲಕ ಉದ್ಘಾಟಿಸಿದರು.

ರಥ ಬೀದಿ ಸುತ್ತ ನಡೆದ ದಾಂಡಿಯಾ ರಾಸ್ ನೃತ್ಯದಲ್ಲಿ ಉಡುಪಿ, ದ.ಕ, ಉತ್ತರ ಕನ್ನಡ ಜಿಲ್ಲೆ ಸಹಿತ ಮುಂಬಯಿ ಮತ್ತು ಗುಜರಾತಿನ ಭಕ್ತಾಧಿಗಳು ಆಗಮಿಸಿ ನೃತ್ಯದಲ್ಲಿ ಭಾಗವಹಿಸಿದ್ದು ಈ ಬಾರಿಯ ವಿಶೇಷವಾಗಿತ್ತು.

ಈ ಸಂದರ್ಭ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಸುವರ್ಣ, ಉಡುಪಿ ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್, ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಕವಿತಾ ಶರತ್, ದ.ಕ. ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಜತೆ ಕಾರ್ಯದರ್ಶಿ ಸುಜಿತ್ ಸಾಲ್ಯಾನ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂದರ್, ನಾಲ್ಕುಪಟ್ಣ ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಸಂಘ ಅಧ್ಯಕ್ಷೆ ಸುಗುಣ ಕರ್ಕೇರ, ಪ್ರಬಂಧಕಸತೀಶ್ ಅಮೀನ್ ಪಡುಕರೆ ಮತ್ತಿತರರು ಉಪಸ್ಥಿತರಿದ್ದರು.

