• Home  
  • ಮಾಹೆ ಮಣಿಪಾಲ ಶೈಕ್ಷಣಿಕ ಕಾರ್ಯಕ್ರಮ : 400ಕ್ಕೂ ಅಧಿಕ ವಿದ್ಯಾರ್ಥಿಗಳು, 50ಕ್ಕೂ ಹೆಚ್ಚು ಅಧ್ಯಾಪಕರು ಭಾಗಿ (MAHE Manipal Academic Program: Over 400 Students and More Than 50 Faculty Members Participate)
- ಶಾಲಾ ಕಾಲೇಜು

ಮಾಹೆ ಮಣಿಪಾಲ ಶೈಕ್ಷಣಿಕ ಕಾರ್ಯಕ್ರಮ : 400ಕ್ಕೂ ಅಧಿಕ ವಿದ್ಯಾರ್ಥಿಗಳು, 50ಕ್ಕೂ ಹೆಚ್ಚು ಅಧ್ಯಾಪಕರು ಭಾಗಿ (MAHE Manipal Academic Program: Over 400 Students and More Than 50 Faculty Members Participate)

Share: ಮಾಹೆ ಮಣಿಪಾಲ ಶೈಕ್ಷಣಿಕ ಕಾರ್ಯಕ್ರಮ : 400ಕ್ಕೂ ಅಧಿಕ ವಿದ್ಯಾರ್ಥಿಗಳು, 50ಕ್ಕೂ ಹೆಚ್ಚು ಅಧ್ಯಾಪಕರು ಭಾಗಿ   ಆಫ್‌ಲೈನ್ ಮಾದರಿಯಲ್ಲಿ ನಡೆದ ಸಮ್ಮೇಳನ (Manipala) ಮಣಿಪಾಲ  : ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಹೃದ್ರೋಗ ವಿಭಾಗವು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ (ಮಾಹೆ) ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್‌ನ   ಕಾರ್ಡಿಯೋವ್ಯಾಸ್ಕ್ಯುಲರ್ ಟೆಕ್ನಾಲಜಿ ವಿಭಾಗದ ಸಹಯೋಗದೊಂದಿಗೆ ಆಯೋಜಿಸಿದ್ದ 17ನೇ ಮಣಿಪಾಲ ಕಾರ್ಡಿಯಾಲಜಿ ಅಪ್‌ಡೇಟ್ ಇಂದು ಮಾಹೆಯ ಡಾ. ಟಿಎಂಎ ಪೈ ಸಭಾಂಗಣದಲ್ಲಿ ನಡೆಯಿತು.   ಈ […]

(Manipala) ಮಣಿಪಾಲ  : ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಹೃದ್ರೋಗ ವಿಭಾಗವು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ (ಮಾಹೆ) ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್‌ನ   ಕಾರ್ಡಿಯೋವ್ಯಾಸ್ಕ್ಯುಲರ್ ಟೆಕ್ನಾಲಜಿ ವಿಭಾಗದ ಸಹಯೋಗದೊಂದಿಗೆ ಆಯೋಜಿಸಿದ್ದ 17ನೇ ಮಣಿಪಾಲ ಕಾರ್ಡಿಯಾಲಜಿ ಅಪ್‌ಡೇಟ್ ಇಂದು ಮಾಹೆಯ ಡಾ. ಟಿಎಂಎ ಪೈ ಸಭಾಂಗಣದಲ್ಲಿ ನಡೆಯಿತು.

  ಈ ಬಾರಿಯ ವಿಷಯ “ಪೀಡಿಯಾಟ್ರಿಕ್ ಕಾರ್ಡಿಯಾಲಜಿ – ಬ್ಯಾಕ್ ಟು ಬೇಸಿಕ್ಸ್” (ಮಕ್ಕಳ ಹೃದ್ರೋಗಶಾಸ್ತ್ರ – ಮೂಲ ತತ್ವಗಳತ್ತ).

  ಕೇರಳದ ಶ್ರೀ ಚಿತ್ರಾ ತಿರುನಾಳ್ ಇನ್‌ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ ಅಂಡ್ ಟೆಕ್ನಾಲಜಿಯ ಹೃದ್ರೋಗ ವಿಭಾಗದ ಮಾಜಿ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಜಗನ್ಮೋಹನ್ ತಾರಕನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

  ಮಾಹೆಯ ಎಂಸಿಎಚ್‌ಪಿ ಡೀನ್ ಡಾ. ಜಿ. ಅರುಣ್ ಮಯ್ಯ ಗೌರವ ಅತಿಥಿಯಾಗಿದ್ದರು.

  ಕೆಎಂಸಿ ಮಣಿಪಾಲದ ಹೃದ್ರೋಗ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಹಾಗೂ ಸಂಘಟನಾ ಅಧ್ಯಕ್ಷರಾದ ಡಾ. ಗಣೇಶ್ ಪಿ. ಸ್ವಾಗತಿಸಿದರು. ಮುಖ್ಯ ಅತಿಥಿ ಡಾ. ಜಗನ್ಮೋಹನ್ ತರಕನ್ ಅವರು ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿ, ಉಪಯುಕ್ತ ವಿಚಾರಗಳನ್ನು ಹಂಚಿಕೊಂಡರು. ಕೆಎಂಸಿ ಮಣಿಪಾಲದ ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಡಾ. ಮುಕುಂದ್ ಎ. ಪ್ರಭು ವಂದಿಸಿದರು.

  ಡಾ. ಗಣೇಶ್ ಪಿ., ಡಾ. ಮುಕುಂದ್ ಎ. ಪ್ರಭು, ಕೆಎಂಸಿ ಮಣಿಪಾಲದ ಹೃದ್ರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸ್ಯಾವಿಯೋ ಡಿಸೋಜ ಹಾಗೂ ಮಾಹೆಯ ಎಂಸಿಎಚ್‌ಪಿ ಕಾರ್ಡಿಯೋವ್ಯಾಸ್ಕ್ಯುಲರ್ ಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಕೃಷ್ಣಾನಂದ ನಾಯಕ್ ಸಂಘಟನಾ ಸಮಿತಿಯಲ್ಲಿದ್ದರು.

 ಸಮ್ಮೇಳನವು ಆಫ್‌ಲೈನ್ ಮಾದರಿಯಲ್ಲಿ ನಡೆಯಿತು. ದೇಶದ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಖ್ಯಾತ ತಜ್ಞರು ಮಕ್ಕಳ ಹೃದ್ರೋಗಶಾಸ್ತ್ರದ ವಿವಿಧ ವಿಷಯಗಳ ಕುರಿತು ಮಾತನಾಡಿ, ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿವಿಧ ಸಂಸ್ಥೆಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 50ಕ್ಕೂ ಹೆಚ್ಚು ಅಧ್ಯಾಪಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಕ್ಕಳ ಹೃದಯ ಆರೈಕೆಯ ಬಗ್ಗೆ ವಿದ್ಯಾರ್ಥಿಗಳು ಮತ್ತು ವೈದ್ಯರಲ್ಲಿ ಹೆಚ್ಚುತ್ತಿರುವ ಆಸಕ್ತಿಗೆ ಇದು ಸಾಕ್ಷಿಯಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.