ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋ: ರಾಮಕೃಷ್ಣ ನಾಯಕ್ ರವರಿಗೆ ಶ್ರೀ ಕ್ಷೇತ್ರದಿಂದ ಸಹಾಯ ಹಸ್ತ
ಮಂಜೂರಾತಿ ಪತ್ರ ಹಸ್ತಾಂತರಿಸಿದ ಕಾಪು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ
(Kaup) ಕಾಪು: ಕಾಪು ತಾಲೂಕು ಕಟ್ಟಿoಗೇರಿ ಒಕ್ಕೂಟದ ಶ್ರೀ ಮಹಾಗಣಪತಿ ಸ್ವಸಹಾಯ ಸಂಘದ ಸದಸ್ಯೆ ಶ್ರೀಮತಿ ಪವಿತ್ರ ರವರ ಪತಿ ರಾಮಕೃಷ್ಣ ನಾಯಕ್ ರವರು ಅನಾರೋಗ್ಯದಿಂದ ಬಳಲುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ವಿಮಾ ಸೌಲಭ್ಯವು ಧರ್ಮಸ್ಥಳ ಧರ್ಮಧಿಕಾರಿ ಡಾ. ಶ್ರೀ ವೀರೇಂದ್ರ ಹೆಗ್ಗಡೆಯವರ ವಿಶೇಷ ಮಂಜೂರಾತಿಯಿಂದ ಆಪತ್ಕಾಲೀನ ಮೊತ್ತ ಮಂಜೂರಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿಯವರು ಮಂಜೂರಾತಿ ಪತ್ರ ಹಸ್ತಾಂತರಿಸಿ, ಶೀಘ್ರ ಗುಣ ಮುಖ ಆಗುವಂತೆ ಹಾರೈಸಿದರು.
ಈ ಸಂದರ್ಭ ಒಕ್ಕೂಟ ಅಧ್ಯಕ್ಷಕ್ಷೆ ಶ್ರೀಮತಿ ಸುಜಾತಾ ಸುವರ್ಣ, ಮೇಲ್ವಿಚಾರಕಿ ಶ್ರೀಮತಿ ಸರಿತ, ಶ್ರೀ ಮಹಾಗಣಪತಿ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

