• Home  
  •   ಅಕ್ರಮ, ಅಪಾಯಕಾರಿ ಪಟಾಕಿ ದಾಸ್ತಾನು – 3 ಕಡೆ ಪೊಲೀಸ್ ದಾಳಿ- ಪಟಾಕಿ ವಶ (Illegal, dangerous firecracker stockpiles – Police raid 3 locations – Firecrackers seized)
- Crime

  ಅಕ್ರಮ, ಅಪಾಯಕಾರಿ ಪಟಾಕಿ ದಾಸ್ತಾನು – 3 ಕಡೆ ಪೊಲೀಸ್ ದಾಳಿ- ಪಟಾಕಿ ವಶ (Illegal, dangerous firecracker stockpiles – Police raid 3 locations – Firecrackers seized)

Share:   ಅಕ್ರಮ, ಅಪಾಯಕಾರಿ ಪಟಾಕಿ ದಾಸ್ತಾನು – 3 ಕಡೆ ಪೊಲೀಸ್ ದಾಳಿ– ಪಟಾಕಿ ವಶ ಕಾರ್ಕಳ, ಬ್ರಹ್ಮಾವರ, ಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ      (Udupi) ಉಡುಪಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅಕ್ರಮವಾಗಿ ಹಾಗೂ ಅಪಾಯಕಾರಿಯಾಗಿ ಪಟಾಕಿಗಳನ್ನು ಸಂಗ್ರಹಿಸಿ ಮಾರಾಟಕ್ಕೆ ಇಟ್ಟುಕೊಂಡಿರುವ ಬಗ್ಗೆ ಬಂದಿದ್ದ ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಕಳ, ಬ್ರಹ್ಮಾವರ ಹಾಗೂ ಕೋಟಾ   ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.   ಮಿಯಾರ್, ಕುಂಜಾಲು ಮತ್ತು ತೆಕ್ಕಟ್ಟೆ ಪ್ರದೇಶಗಳಲ್ಲಿ […]

   (Udupi) ಉಡುಪಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅಕ್ರಮವಾಗಿ ಹಾಗೂ ಅಪಾಯಕಾರಿಯಾಗಿ ಪಟಾಕಿಗಳನ್ನು ಸಂಗ್ರಹಿಸಿ ಮಾರಾಟಕ್ಕೆ ಇಟ್ಟುಕೊಂಡಿರುವ ಬಗ್ಗೆ ಬಂದಿದ್ದ ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಕಳ, ಬ್ರಹ್ಮಾವರ ಹಾಗೂ ಕೋಟಾ   ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

  ಮಿಯಾರ್, ಕುಂಜಾಲು ಮತ್ತು ತೆಕ್ಕಟ್ಟೆ ಪ್ರದೇಶಗಳಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ದೊಡ್ಡ ಪ್ರಮಾಣದ ಸಿಡಿಮದ್ದುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

   ವಶಪಡಿಸಿಕೊಂಡ ಸಿಡಿಮದ್ದುಗಳನ್ನು ಅಧಿಕೃತ ಸ್ಫೋಟಕ ಸಂಗ್ರಹಾಗಾರ (Explosives Magazine) ಪ್ರದೇಶಗಳಿಗೆ ಸ್ಥಳಾಂತರಿಸಿ ನಂತರ ನಿಯಮಾನುಸಾರ ನಾಶಪಡಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

  ಈ ಸಂಬಂಧ Explosives Act 9B(1)(b) ಹಾಗೂ BNS 287, 288 ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಅಕ್ರಮ ಸಿಡಿಮದ್ದು ಸಂಗ್ರಹಣೆ ಮತ್ತು ಖರೀದಿ ಕುರಿತು ತನಿಖೆ ಮುಂದುವರಿದಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.