• Home  
  • ಕನ್ನಡ ಜಾನಪದ ಪರಿಷತ್ ಕರಾವಳಿ ವಿಭಾಗದ ಸಂಚಾಲಕರಾಗಿ ಡಾ. ಭಾರತಿ ಮರವಂತೆ ಆಯ್ಕೆ(Dr. Bharati Maravante selected as convener of the Coastal Division of the Kannada Folklore Council.)
- ಸಂಘ, ಸಂಸ್ಥೆಗಳು

ಕನ್ನಡ ಜಾನಪದ ಪರಿಷತ್ ಕರಾವಳಿ ವಿಭಾಗದ ಸಂಚಾಲಕರಾಗಿ ಡಾ. ಭಾರತಿ ಮರವಂತೆ ಆಯ್ಕೆ(Dr. Bharati Maravante selected as convener of the Coastal Division of the Kannada Folklore Council.)

Share: ಕನ್ನಡ ಜಾನಪದ ಪರಿಷತ್ ಕರಾವಳಿ ವಿಭಾಗದ ಸಂಚಾಲಕರಾಗಿ ಡಾ. ಭಾರತಿ ಮರವಂತೆ ಆಯ್ಕೆ   ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ 100 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಡಾ. ಭಾರತಿ (Udupi) ಉಡುಪಿ: ಕನ್ನಡ ಜಾನಪದ ಪರಿಷತ್ ಕರಾವಳಿ ವಿಭಾಗದ ಸಂಚಾಲಕರಾಗಿ ಡಾ. ಭಾರತಿ ಮರವಂತೆ ಆಯ್ಕೆಯಾಗಿದ್ದಾರೆ.   ಈ ನೇಮಕದೊಂದಿಗೆ ಕರಾವಳಿ ಜಿಲ್ಲೆಗಳ  ಜನಪದ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ಸಂರಕ್ಷಿಸುವ ಗುರುತರ ಜವಾಬ್ದಾರಿಯನ್ನು ವಹಿಸಲಾಗಿದೆ.  ಡಾ. ಭಾರತಿ ಮರವಂತೆ   ರಂಗೋಲಿಯಲ್ಲಿ […]

(Udupi) ಉಡುಪಿ: ಕನ್ನಡ ಜಾನಪದ ಪರಿಷತ್ ಕರಾವಳಿ ವಿಭಾಗದ ಸಂಚಾಲಕರಾಗಿ ಡಾ. ಭಾರತಿ ಮರವಂತೆ ಆಯ್ಕೆಯಾಗಿದ್ದಾರೆ.

  ಈ ನೇಮಕದೊಂದಿಗೆ ಕರಾವಳಿ ಜಿಲ್ಲೆಗಳ  ಜನಪದ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ಸಂರಕ್ಷಿಸುವ ಗುರುತರ ಜವಾಬ್ದಾರಿಯನ್ನು ವಹಿಸಲಾಗಿದೆ.

 ಡಾ. ಭಾರತಿ ಮರವಂತೆ

  ರಂಗೋಲಿಯಲ್ಲಿ ಸಂಶೋಧನೆ, ಜಾನಪದ ಕಲೆ -ಸಾಹಿತ್ಯದಲ್ಲಿ 15 ಕ್ಕೂ ಹೆಚ್ಚು ಕೃತಿಗಳು, 100 ಕ್ಕೂ ಹೆಚ್ಚು ಲೇಖನಗಳು, ಕಿರುಯೋಜನೆಗಳು, ಕನ್ನಡ ಜಾನಪದ ನಿಘಂಟುವಿನಲ್ಲಿ ಕ್ಷೇತ್ರ ತಜ್ಣರಾಗಿ ಕೆಲಸ, ಕರ್ನಾಟಕ ಜಾನಪದ ವಿವಿಯಲ್ಲಿ ಬೋಧಕರಾಗಿ ಅನುಭವ, ಶಿವರಾಮ ಕಾರಂತ ಟ್ರಸ್ಟ್ ನಲ್ಲಿ ಸದಸ್ಯೆ, ಉಡುಪಿ ಜಿಲ್ಲಾ ಜಾನಪದ ಪರಿಷತ್ತಿನ ಸ್ಥಾಪಕ ಅಧ್ಯಕ್ಷೆ, ಕರ್ನಾಟಕ ನಾಟಕ ಅಕಾಡೆಮಿಯಿಂದ ಕಲಾವಿದರ ಫೆಲೋಶಿಪ್‌, ರಂಗೋಲಿ ಪತ್ರಿಕೆ, ರಂಗೋಲಿ ಕ್ಯಾನ್ ವಾಸ್ ಪೈಂಟಿಂಗ್, ಬೃಹತ್ ರಂಗೋಲಿ ಪ್ರದರ್ಶನ, ತಮಿಳುನಾಡಿನಲ್ಲಿ ರಂಗೋಲಿಯಲ್ಲಿ ವಿಶ್ವದಾಖಲೆ, ಮಕ್ಕಳಿಗೆ ರಂಗೋಲಿ ತರಬೇತಿ, ಸ್ವರಚಿತ ರಂಗೋಲಿ ವಿನ್ಯಾಸಗಳ ರಚನೆ ಪ್ರಕಟಣೆ ಇತ್ಯಾದಿ.

 ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ 100 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಇವರು ಪಡೆದಿರುತ್ತಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.