ಕಾಪು ತಾಲೂಕು 8 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಆಮಂತ್ರಣ
ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಲಿರುವ ಜಾನಪದ ವಿದ್ವಾಂಸ ಡಾ. ವೈ.ಎನ್. ಶೆಟ್ಟಿ
(Padubidri) ಪಡುಬಿದ್ರಿ: ಕಾಪು ತಾಲ್ಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಅ. 2 ಮತ್ತು 3 ರಂದು ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಜರಗಲಿದ್ದು, ಈ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಲಿರುವ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಡಾ. ವೈ. ಎನ್. ಶೆಟ್ಟಿ ಪಡುಬಿದ್ರಿಯವರಿಗೆ ಅವರ ನಿವಾಸ “ಉಲ್ಲಾಯೆ”ದಲ್ಲಿ ಸಮ್ಮೇಳನದ ಆಮಂತ್ರಣವನ್ನು ಅಧಿಕೃತವಾಗಿ ನೀಡಿ ಆಹ್ವಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಘಟಕದ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿ ದೇವದಾಸ್ ಹೆಬ್ಬಾರ್, ಕಾಪು ತಾ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಪುಂಡಲಿಕ ಮಾರಾಠೆ ಶಿರ್ವ, ಗೌರವ ಕಾರ್ಯದರ್ಶಿ ಅಶ್ವಿನಿ ಲಾರೆನ್ಸ್, ಜಿಲ್ಲಾಕ. ಸ. ಪ ಮಾಧ್ಯಮ ಪ್ರತಿನಿಧಿ ನರಸಿಂಹ ಮೂರ್ತಿ ಮಣಿಪಾಲ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಡಾ. ಗೋಪಾಲಕೃಷ್ಣ ಎಂ. ಗಾಂವ್ಕರ್, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಜೂರು, ಕಸಾಪ ಕಾಪು ಸಹಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು, ಸದಸ್ಯ ಬೆಳ್ಳೆ ಭಾಸ್ಕರ್ ಕಾಮತ್, ಡಾ.ವೈ. ಎನ್.ಶೆಟ್ಟಿ ಇವರ ಧರ್ಮಪತ್ನಿ ಕಲ್ಪನಾ, ಮಗಳು ಶ್ವೇಚ್ಛಾ ಮೊದಲಾದವರು ಉಪಸ್ಥಿತರಿದ್ದರು.

