• Home  
  • ಕಾಪು : ಶ್ರೀ ನಾರಾಯಣ ಗುರು ನೂತನ ಕೋಚಿಂಗ್ ಸೆಂಟರ್ ಉದ್ಘಾಟನೆ (Kaup: Sri Narayana Guru’s new coaching center inaugurated)
- ಶಾಲಾ ಕಾಲೇಜು

ಕಾಪು : ಶ್ರೀ ನಾರಾಯಣ ಗುರು ನೂತನ ಕೋಚಿಂಗ್ ಸೆಂಟರ್ ಉದ್ಘಾಟನೆ (Kaup: Sri Narayana Guru’s new coaching center inaugurated)

Share: ಕಾಪು : ಶ್ರೀ ನಾರಾಯಣ ಗುರು ನೂತನ ಕೋಚಿಂಗ್ ಸೆಂಟರ್ ಉದ್ಘಾಟನೆ ಹೊಸ ಮಾರಿಗುಡಿ ಬಳಿಯ ಹೀರಾ ಕಾಂಪ್ಲೆಕ್ಸ್ ನಲ್ಲಿ ಪ್ರಾರಂಭಗೊಂಡ ಸಂಸ್ಥೆ (Kaup)ಕಾಪು: ಶ್ರೀ ನಾರಾಯಣ ಗುರು ಕೋಚಿಂಗ್ ಸೆಂಟರ್ ಹೀರಾ ಕಾಂಪ್ಲೆಕ್ಸ್ ಹೊಸ ಮಾರಿಗುಡಿ ಬಳಿ ಉದ್ಘಾಟನೆಗೊಂಡಿತು. ಕೋಚಿಂಗ್ ಸೆಂಟರ್ ನ್ನು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಉದ್ಘಾಟಿಸಿದರು. ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಶಾಲಾ ಶಿಕ್ಷಣ ಅಷ್ಟೇ ಸಾಲುವುದಿಲ್ಲ. ಪ್ರತಿಯೊಬ್ಬ ಮಗುವಿಗೂ ವೈಯಕ್ತಿಕ ಗಮನ ಮತ್ತು ಕಠಿಣ […]

(Kaup)ಕಾಪು: ಶ್ರೀ ನಾರಾಯಣ ಗುರು ಕೋಚಿಂಗ್ ಸೆಂಟರ್ ಹೀರಾ ಕಾಂಪ್ಲೆಕ್ಸ್ ಹೊಸ ಮಾರಿಗುಡಿ ಬಳಿ ಉದ್ಘಾಟನೆಗೊಂಡಿತು.

ಕೋಚಿಂಗ್ ಸೆಂಟರ್ ನ್ನು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಉದ್ಘಾಟಿಸಿದರು.

ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಶಾಲಾ ಶಿಕ್ಷಣ ಅಷ್ಟೇ ಸಾಲುವುದಿಲ್ಲ. ಪ್ರತಿಯೊಬ್ಬ ಮಗುವಿಗೂ ವೈಯಕ್ತಿಕ ಗಮನ ಮತ್ತು ಕಠಿಣ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ಮಾರ್ಗದರ್ಶನದ ಅಗತ್ಯವಿರುತ್ತದೆ. ಟ್ಯೂಷನ್ ಕ್ಲಾಸ್‌ಗಳು ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸುವುದಕ್ಕಷ್ಟೇ ಸೀಮಿತವಾಗಬಾರದು ಎಂದರು.

   ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಂಡತೀರ್ಥ ಸಮೂಹ ಸಂಸ್ಥೆ ಕಾಪು ಪ್ರಾಂಶುಪಾಲ ನೀಲಾನಂದ ನಾಯ್ಕ, ಒಂದು ಹೊಸ ವಿದ್ಯಾ ಸಂಸ್ಥೆ ಅಥವಾ ತರಬೇತಿ ಕೇಂದ್ರ ಆರಂಭವಾಗುತ್ತಿದೆ ಎಂದರೆ, ಅಲ್ಲಿ ಜ್ಞಾನದ ಹೊಸ ದೀಪ ಬೆಳಗುತ್ತಿದೆ ಎಂದು ಅರ್ಥ.  ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ. ಪ್ರಶ್ನೆ ಕೇಳುವುದನ್ನು ನಿಲ್ಲಿಸಬೇಡಿ. ಎಷ್ಟು ಪ್ರಶ್ನೆ ಕೇಳುತ್ತೀರೋ, ಅಷ್ಟು ಜ್ಞಾನ ಬೆಳೆಯುತ್ತದೆ. ಕಷ್ಟಪಟ್ಟು ಓದುವುದಕ್ಕಿಂತ, ಇಷ್ಟಪಟ್ಟು ಓದಿ. ಯಶಸ್ಸು ಖಂಡಿತ ಎಂದರು.

 ಕಾಪು ಪರಿಸರದ ವಿದ್ಯಾರ್ಥಿಗಳಿಗೆ ಪೂರಕವಾಗಲೆಂದು ೧ ರಿಂದ 10ನೇ ತರಗತಿ ಹಾಗೂ ಪಿಯುಸಿ ಸಯನ್ಸ್ ಹಾಗೂ ಕಾಮರ್ಸ್ ವಿಭಾಗ ಹಾಗೂ ಆರ್ಮಿ ತರಬೇತಿ ನೀಡಲಾಗುವುದು.

  ಈ ಸಂದರ್ಭದಲ್ಲಿ  ಶ್ರೀ ಹಳೇ ಮಾರಿಗುಡಿಯ ಆಡಳಿತ ಮೊಕೇಸರಪ್ರಸಾದ್ ಶೆಣೈ, , ಶ್ರೀ ನಾರಾಯಣ ಗುರು ಸ್ಪೋರ್ಟ್ ಮತ್ತು ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಉಮಾನಾಥ ಕಾಪು, ಜೆಸಿಐ ಕಾಪು ಮಾಜಿ ಅಧ್ಯಕ್ಷ  ಸುಧಾಕರ್ ಸಾಲ್ಯಾನ್, ಶ್ರೀ ನಾರಾಯಣ ಗುರು ಕೋಚಿಂಗ್ ಸೆಂಟರ್ ಸ್ಥಾಪಕಿ ಶ್ರೀಮತಿ ಸೌಂದರ್ಯ ಯು. ಕೆ.,  ವ್ಯವಸ್ಥಾಪಕ ನಿರ್ದೇಶಕ ಲೋಕೇಶ್ ಬೆಲ್ಚಡ ಕೊಡ್ಮಾಣ್, ನಿರ್ದೇಶಕ ಸಾಕ್ಷಾತ್ ಯು. ಕೆ. ಹಾಗೂ ಡಾ. ಮಾಧುರ್ಯ ಎಸ್ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.