• Home  
  • ಕಾಪು ಶ್ರೀ ಹೊಸ ಮಾರಿ ಗುಡಿಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಭೇಟಿ. (Union Minister H. D. Kumaraswamy visits the Sri Hosa Mari Gudi in Kaup.)
- ಧಾರ್ಮಿಕ

ಕಾಪು ಶ್ರೀ ಹೊಸ ಮಾರಿ ಗುಡಿಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಭೇಟಿ. (Union Minister H. D. Kumaraswamy visits the Sri Hosa Mari Gudi in Kaup.)

Share: ಕಾಪು ಶ್ರೀ ಹೊಸ ಮಾರಿ ಗುಡಿಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಭೇಟಿ. ಅನುಗ್ರಹ ಪ್ರಸಾದ ಸ್ವೀಕರಿಸಿದ ಎಚ್‌ ಡಿ ಕುಮಾರಸ್ವಾಮಿ ಕುಟುಂಬ (Kaup) ಕಾಪು : ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯವರು ಸೋಮವಾರ ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ ನೀಡಿ ಅನುಗ್ರಹ ಪ್ರಸಾದ ಸ್ವೀಕರಿಸಿದರು.   ಎಚ್‌ ಡಿ ಕುಮಾರಸ್ವಾಮಿ ಅವರೊಂದಿಗೆ ಅವರ ಶ್ರೀಮತಿ ಅನಿತಾ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ದಂಪತಿ ಉಪಸ್ಥಿತರಿದ್ದರು.   ಹೊಸ ಮಾರಿ ಗುಡಿಯ ವ್ಯವಸ್ಥಾಪನಾ […]

(Kaup) ಕಾಪು : ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯವರು ಸೋಮವಾರ ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ ನೀಡಿ ಅನುಗ್ರಹ ಪ್ರಸಾದ ಸ್ವೀಕರಿಸಿದರು.

  ಎಚ್‌ ಡಿ ಕುಮಾರಸ್ವಾಮಿ ಅವರೊಂದಿಗೆ ಅವರ ಶ್ರೀಮತಿ ಅನಿತಾ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ದಂಪತಿ ಉಪಸ್ಥಿತರಿದ್ದರು.

  ಹೊಸ ಮಾರಿ ಗುಡಿಯ ವ್ಯವಸ್ಥಾಪನಾ ಸಮಿತಿ ಹಾಗೂ ಅಭಿವೃದ್ಧಿ ಸಮಿತಿ ವತಿಯಿಂದ ಕುಮಾರ ಸ್ವಾಮಿ ದಂಪತಿ ಹಾಗೂ ನಿಖಿಲ್ ಕುಮಾರಸ್ವಾಮಿ ದಂಪತಿಯನ್ನು ಸನ್ಮಾನಿಸಲಾಯಿತು.

 ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ, ಎಚ್ ಡಿ ಕುಮಾರಸ್ವಾಮಿ, ಹೊಸ ಮಾರಿಗುಡಿಯ ಬ್ರಹ್ಮಕಲಶೋತ್ಸವ ಆಹ್ವಾನ ಸಿಕ್ಕಿದ್ದರೂ ಅನಾನುಕೂಲತೆಯಿಂದ ಬರಲಾಗಿಲ್ಲ. ಈಗ ಆ ಸಮಯ ಕೂಡಿಬಂದಿದೆ. ನಾವು ಕುಟುಂಬ ಸಮೇತರಾಗಿ ಬಂದು ಅಮ್ಮನ ದರ್ಶನ ಮಾಡಿದ್ದೇವೆ ಎಂದರು.

  ಮಾರಿಗುಡಿಯ ಪ್ರಧಾನ ತಂತ್ರಿ ಗಳಾದ ಕೆ ಪಿ ಕುಮಾರಗುರು ತಂತ್ರಿಯವರು ಪ್ರಾರ್ಥಿಸಿ ಅನುಗ್ರಹ ಪ್ರಸಾದ ನೀಡಿದರು.

ಮಾರಿಗುಡಿಯ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿಯವರು ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು.

  ಈ ಸಂದರ್ಭ ಶ್ರೀ ಹೊಸ ಮಾರಿ ಗುಡಿಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಭೋಜೇ  ಗೌಡ, ಉಡುಪಿ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಇಕ್ಬಾಲ್ ಮುಲ್ಕಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಾಜಿ ಶಾಸಕ ಮೊಯ್ದಿನ್‌ ಬಾವಾ, ರಘುರಾಮಶೆಟ್ಟಿ, ಗೀತಾಂಜಲಿ ಸುವರ್ಣ, ವಿಜಯಲಕ್ಷ್ಮಿ ಶೆಟ್ಟಿ, ವೆಂಕಟೇಶ್ ಪಡುಬಿದ್ರಿ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.