ಜಯಂಟ್ಸ್ ಬ್ರಹ್ಮಾವರಕ್ಕೆ ಅತ್ಯುತ್ತಮ ಘಟಕ ಪ್ರಶಸ್ತಿ ಸಹಿತ 15 ಪುರಸ್ಕಾರ
ಮಲ್ಲೇಶ್ವರಂನಲ್ಲಿ ನಡೆದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ
(Brahmavara) ಬ್ರಹ್ಮಾವರ : ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಘಟಕವು ಅತ್ಯುತ್ತಮ ಘಟಕ ಪ್ರಶಸ್ತಿ ಸಹಿತ 15 ಪುರಸ್ಕಾರಗಳನ್ನು ಮತ್ತು 2 ವಿಶೇಷ ಅಭಿನಂದನಾ ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ.
ಜಯಂಟ್ಸ್ ಗ್ರೂಪ್ ಬೆಂಗಳೂರು ಗಾರ್ಡನ್ ಸಿಟಿ ಇದರ ಆತಿಥ್ಯದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಅಸೋಸಿಯೇಶನ್ ಮಲ್ಲೇಶ್ವರಂನಲ್ಲಿ ನಡೆದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಫೆಡರೇಶನ್ ವಿಭಾಗದಲ್ಲಿ ಅತ್ಯುತ್ತಮ ಘಟಕ ಮತ್ತು ಅಧ್ಯಕ್ಷ ಪ್ರಶಸ್ತಿ ಸಹಿತ 15 ಪುರಸ್ಕಾರಗಳನ್ನು ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಮುಂಬೈನ ಅಂತರಾಷ್ಟ್ರೀಯ ಉಪಾಧ್ಯಕ್ಷ ಸಿ. ಎ ಲಕ್ಷ್ಮಣನ್, ಫೆಡರೇಶನ್ 6ರ ಅಧ್ಯಕ್ಷ ತೇಜಶ್ವರ ರಾವ್, ಸೆಂಟ್ರಲ್ ಕಮಿಟಿ ಸದಸ್ಯ ದಿನಕರ ಅಮಿನ್, ಮುಂತಾದವರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಅಧ್ಯಕ್ಷ ಅಣ್ಣಯ್ಯ ದಾಸ್, ಕಾರ್ಯದರ್ಶಿ, ಮಿಲ್ಟನ್ ಒಲಿವರ, ನಿಕಟಪೂವ೯ ಅಧ್ಯಕ್ಷ ಸುಂದರ ಪೂಜಾರಿ ಮೂಡು ಕುಕ್ಕುಡೆ, ಶ್ರೀನಾಥ್ ಕೋಟ, ವಿವೇಕಾನಂದ ಕಾಮತ್ ಮುಂತಾದರು ಭಾಗವಹಿಸಿದ್ದರು.

