• Home  
  • ಧರ್ಮಧಿಕಾರಿ ಹೆಗ್ಗಡೆ ಅವರ  ಜನ್ಮದಿನದ ಪ್ರಯುಕ್ತ ಹೆಜಮಾಡಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ (Free eye check-up camp in Hejamadi on the occasion of the birthday of Dharmasthala Dharmadhikari Dr. Heggade)
- social service

ಧರ್ಮಧಿಕಾರಿ ಹೆಗ್ಗಡೆ ಅವರ  ಜನ್ಮದಿನದ ಪ್ರಯುಕ್ತ ಹೆಜಮಾಡಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ (Free eye check-up camp in Hejamadi on the occasion of the birthday of Dharmasthala Dharmadhikari Dr. Heggade)

Share: ಧರ್ಮಧಿಕಾರಿ ಹೆಗ್ಗಡೆ ಅವರ  ಜನ್ಮದಿನದ ಪ್ರಯುಕ್ತ ಹೆಜಮಾಡಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ  ಕಾರ್ಯಕ್ರಮ ಉದ್ಘಾಟಿಸಿದ ಜನ ಜಾಗೃತಿಯ ಮಾಜಿ ಅಧ್ಯಕ್ಷ ದಯಾನಂದ ಹೆಜಮಾಡಿ (Hejamadi) ಹೆಜಮಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಪು ತಾಲೂಕು ಇದರ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗಡೆ ಅವರ  ಹುಟ್ಟುಹಬ್ಬದ ಪ್ರಯುಕ್ತ ಹೆಜಮಾಡಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.   ಕಾರ್ಯಕ್ರಮವನ್ನು ಕಾಪು ತಾಲೂಕು ಜನ ಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ದಯಾನಂದ ಹೆಜಮಾಡಿ […]

(Hejamadi) ಹೆಜಮಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಪು ತಾಲೂಕು ಇದರ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗಡೆ ಅವರ  ಹುಟ್ಟುಹಬ್ಬದ ಪ್ರಯುಕ್ತ ಹೆಜಮಾಡಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.

  ಕಾರ್ಯಕ್ರಮವನ್ನು ಕಾಪು ತಾಲೂಕು ಜನ ಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ದಯಾನಂದ ಹೆಜಮಾಡಿ ಉದ್ಘಾಟಿಸಿದರು.

ಅವರು,ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮಾಡಿದ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು.

 ಜಿಲ್ಲಾ ಜನಜಾಗೃತಿಯ ಸದಸ್ಯರಾದ ಸುಧಾಕರ ಕರ್ಕೇರ  ಅವರು ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ  ಮಮತಾ ಶೆಟ್ಟಿಯವರು ಪೂಜ್ಯರು ಮಾಡಿದ ಸಮಾಜಮುಖಿ ಕಾರ್ಯಕ್ರಮದ ಬಗ್ಗೆ ಮಾಹಿತಿ  ನೀಡಿ, ಅವರ ಹುಟ್ಟುಹಬ್ಬವನ್ನು ಸೇವಾ ದಿನವನ್ನು ಆಚರಿಸುವ ಬಗ್ಗೆ ತಿಳಿಸಿದರು.

 ವೇದಿಕೆಯಲ್ಲಿ ಪ್ರಸಾದ್ ನೇತ್ರಾಲಯದ ಡಾ. ಅಶ್ರೀತ್, ಹೆಜಮಾಡಿ ʼಎʼ ಒಕ್ಕೂಟದ ಅಧ್ಯಕ್ಷ ಗಣೇಶ್ ಆಚಾರ್ಯ, ಹೆಜಮಾಡಿ ʼಬಿʼ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಮತಿ ಪವಿತ್ರ ಗಿರೀಶ್ ಉಪಸ್ಥಿತರಿದ್ದರು.

 ಈ ಕಾರ್ಯಕ್ರಮದಲ್ಲಿ ಪಡುಬಿದ್ರಿ ಆರೋಗ್ಯ ಇಲಾಖಾ ಸಿಬ್ಬಂದಿಗಳು, ವಲಯದ ಮೇಲ್ವಿಚಾರಕರು, ಜ್ಞಾನವಿಕಾಸ ಸಮನ್ವಯಾಧಿಕಾರಿ, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.