ಬಂಟಕಲ್ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಗೆ “ಗೂಗಲ್ ಬಿಲ್ಡ್ ವಿಥ್ ಜೆಮ್ಮಾ ಹ್ಯಾಕಥಾನ್ನಲ್ಲಿ” ಬಹುಮಾನ
ಹ್ಯಾಕಥಾನ್ನಲ್ಲಿ ಪ್ರಥಮ ಸ್ಥಾನದೊಂದಿಗೆ 425 ಅಮೆರಿಕನ್ಡಾಲರ್ ನಗದು ಬಹುಮಾನ
(Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಅಂಶಿಕಾ, ಆಶ್ಲೇ ಫೆರ್ನಾಂಡೀಸ್ ಮತ್ತು ಚೇತನ್ವಿ ಕೋಟ್ಯಾನ್ ಇವರಿಗೆ ದಿನಾಂಕ ಬೆಂಗಳೂರಿನ ಎಂ ಎಸ್ರಾಮಯ್ಯ ಕಾಲೇಜಿನಲ್ಲಿ ಕಾಗಲ್ ವತಿಯಿಂದ ಆಯೋಜಿಸಲಾದ ಪ್ರತಿಷ್ಠಿತ“ಗೂಗಲ್ ಬಿಲ್ಡ್ ವಿಥ್ ಜೆಮ್ಮಾ ಹ್ಯಾಕಥಾನ್ನಲ್ಲಿ ಪ್ರಥಮ ಸ್ಥಾನದೊಂದಿಗೆ ೪೨೫ ಅಮೆರಿಕನ್ಡಾಲರ್ ನಗದು ಬಹುಮಾನ ಲಭಿಸಿದೆ.
ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ “ಆಡಿಟ್ಜೆಮ್ಮಾ”ಎಂಬುದು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹಾಗೂ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ ನೀಡುವ ಸಂಸ್ಥೆಗಳಿಗಾಗಿ ರೂಪಿಸಲಾದ ಎ ಐ ಆಧಾರಿತ ಅನುಸರಣೆ ಮತ್ತುಅಪಾಯ ಮೌಲ್ಯಮಾಪನ ವೇದಿಕೆಯಾಗಿದೆ. ಗೂಗಲ್ಜೆಮ್ಮಾ ಎ ಐ ಮಾದರಿಗಳನ್ನು ಬಳಸಿಕೊಂಡು ನಿರ್ಮಿಸಲಾದ ಈ ವ್ಯವಸ್ಥೆಯು ಹಣಕಾಸು ದಾಖಲೆಗಳ ವಿಶ್ಲೇ಼ಷಣೆಯನ್ನು ಸ್ವಯಂಚಾಲಿತ ಗೊಳಿಸುವುದು, ವಂಚನೆಯ ಸಾಧ್ಯತೆಗಳನ್ನು ಗುರುತಿಸುವುದು, ನಿಯಂತ್ರಣಾತ್ಮಕ ಅನುಸರಣೆಯನ್ನು ಸುಗಮಗೊಳಿಸುವುದು ಹಾಗೂ ಸಾಲ ಮಂಜೂರಾತಿ ವ್ಯವಸ್ಥೆಯನ್ನು ವೇಗಗೊಳಿಸುವುದರ ಮೂಲಕ ಹಣಕಾಸು ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶ್ರೀ ಸೋದೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ವಿಶ್ವ ವಲ್ಲಭ ತೀರ್ಥ ಸ್ವಾಮೀಜಿ, ಕಾರ್ಯದರ್ಶಿ ರತ್ನಕುಮಾರ್, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಧಾಕೃಷ್ಣ ಎಸ್ ಐತಾಳ್ ಮತ್ತು ಪ್ರಾಂಶುಪಾಲ ಫ್ರೊ. ನಾಗರಾಜ್ ಭಟ್ ಹರ್ಷವ್ಯಕ್ತ ಪಡಿಸಿದ್ದಾರೆ.

