“ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಇವರಿಂದ ಸಮವಸ್ತ್ರ ವಿತರಣೆ“
ಉಡುಪಿಯ ಎಸ್ ಎಂ ಎಸ್ ಪಿ ಸಂಸ್ಕೃತ ಪ್ರೌಢಶಾಲೆಯ81 ವಿದ್ಯಾರ್ಥಿಗಳಿಗೆ ವಿತರಣೆ
(Udupi) ಉಡುಪಿ: ಉಡುಪಿಯ ಎಸ್ ಎಂ ಎಸ್ ಪಿ ಸಂಸ್ಕೃತ ಪ್ರೌಢಶಾಲೆಯ 8, 9 ಮತ್ತು 10ನೇ ತರಗತಿಯ 81 ವಿದ್ಯಾರ್ಥಿಗಳಿಗೆ ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಇವರ ಆಯೋಗದಲ್ಲಿ ಭೀಮ ಜ್ಯುವೆಲ್ಲರ್ಸ್ ಉಡುಪಿ ಇವರಿಂದ ಶಾಲಾ ಸಮವಸ್ತ್ರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ನ ಉನ್ನತ ಅಧಿಕಾರಿಯಾದ ಗುರುಪ್ರಸಾದ್ ಮತ್ತು ಭೀಮ ಜ್ಯುವೆಲರ್ಸ್ ನ ಅಧಿಕಾರಿಯಾದ ಪೆರಂಪಳ್ಳಿ ರಾಘವೇಂದ್ರ ಭಟ್ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಶ್ರೀಮತಿ ಪುಷ್ಪಲತಾ ಕೃಷ್ಣನ್, ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ನ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಅತಿಥಿಗಳಿಗೆ ಧನ್ಯವಾದ ಸಮರ್ಪಿಸಿದರು.
ಸಹ ಶಿಕ್ಷಕ ಅಶೋಕ್ ಹೆಗಡೆ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ಶಿಕ್ಷಕರು ಈ ಸಂದರ್ಭದಲ್ಲಿ ಹಾಜರಿದ್ದರು.

