• Home  
  • ಹೋಂ ಡಾಕ್ಟರ್ ಫೌಂಡೇಶನ್  ಆಯೋಜನೆಯಲ್ಲಿ ದುಂದುವೆಚ್ಚ ರಹಿತ ದೀಪಾವಳಿ ಆಚರಣೆ 2026 (Extravagance-free Diwali Celebration 2026, organized by the Home Doctor Foundation)
- ಸಹಾಯ ಹಸ್ತ

ಹೋಂ ಡಾಕ್ಟರ್ ಫೌಂಡೇಶನ್  ಆಯೋಜನೆಯಲ್ಲಿ ದುಂದುವೆಚ್ಚ ರಹಿತ ದೀಪಾವಳಿ ಆಚರಣೆ 2026 (Extravagance-free Diwali Celebration 2026, organized by the Home Doctor Foundation)

Share: ಹೋಂ ಡಾಕ್ಟರ್ ಫೌಂಡೇಶನ್  ಆಯೋಜನೆಯಲ್ಲಿ ದುಂದುವೆಚ್ಚ ರಹಿತ ದೀಪಾವಳಿ ಆಚರಣೆ 2026 ಅಸಹಾಯಕ ರೋಗಿಗಳಿಗೆ ಧನ ಸಹಾಯ, ಅಶಕ್ತರಿಗೆ ಸಹಾಯ ಸಹಿತ ನೀಡಿದ ಸಂಸ್ಥೆ (Malpe) ಮಲ್ಪೆ :  ಸರಕಾರಿ ಪದವಿ ಪೂರ್ವ ಕಾಲೇಜು ಮಲ್ಪೆ (ಹೈಸ್ಕೂಲ್ ವಿಭಾಗ) ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿ ದೀಪಾವಳಿ ಹಬ್ಬದ ಆಚರಣೆ ನಡೆಯಿತು.   ಕಾರ್ಯಕ್ರಮದಲ್ಲಿ 8 ಅಸಹಾಯಕ ರೋಗಿಗಳಿಗೆ 95 ಸಾವಿರ ರೂ. ಧನಸಹಾಯ ನೀಡಲಾಯಿತು.   ಹರಿದ ಬ್ಯಾಗ್, ಚಪ್ಪಲಿ ಬಳಸುತ್ತಿದ್ದ ಮಕ್ಕಳನ್ನು […]

(Malpe) ಮಲ್ಪೆ :  ಸರಕಾರಿ ಪದವಿ ಪೂರ್ವ ಕಾಲೇಜು ಮಲ್ಪೆ (ಹೈಸ್ಕೂಲ್ ವಿಭಾಗ) ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿ ದೀಪಾವಳಿ ಹಬ್ಬದ ಆಚರಣೆ ನಡೆಯಿತು.

  ಕಾರ್ಯಕ್ರಮದಲ್ಲಿ 8 ಅಸಹಾಯಕ ರೋಗಿಗಳಿಗೆ 95 ಸಾವಿರ ರೂ. ಧನಸಹಾಯ ನೀಡಲಾಯಿತು.

  ಹರಿದ ಬ್ಯಾಗ್, ಚಪ್ಪಲಿ ಬಳಸುತ್ತಿದ್ದ ಮಕ್ಕಳನ್ನು ಗುರುತಿಸಿ ತಲಾ 4  ಹೊಸ ಚಪ್ಪಲಿ ಹಾಗೂ ಬ್ಯಾಗ್ ಗಳನ್ನು ವಿತರಿಸಲಾಯಿತು.

  ಸ್ವರ್ಗ ಆಶ್ರಮ ದಲ್ಲಿ ಇತ್ತೀಚೆಗೆ ನಡೆದ ಬೆಂಕಿ ರಹಿತ ಸ್ಪರ್ಧೆಯ ವಿಜೇತರಿಗೆ ಮತ್ತು  ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು.

  ಸ್ವರ್ಗ ಆಶ್ರಮದ ಆಶ್ರಮ ವಾಸಿಗಳಿಗೆ 40 ವಿಶೇಷ ಬಟ್ಟಲು ಗಳನ್ನು ನೀಡಲಾಯಿತು.

  ಮೇಸ್ತ್ರಿ ಗಳೇ ದೇವರಾಗೋಣ ಪರಿಕಲ್ಪನೆಯಲ್ಲಿ ಸೇವೆ ಸಲ್ಲಿಸಿದ 23 ಮೇಸ್ತ್ರಿ ಗಳಿಗೆ ರೂ 1 ಲಕ್ಷದ ಬಾಂಡ್ ಗಳನ್ನು ಹಾಗೂ ಶಾಲೆಗೆ  ಸ್ಯಾನಿಟರಿ ಪ್ಯಾಡ್ ಬರ್ನರ್ ಮಿಷಿನ್  ಹಸ್ತಾಂತರಿಸಲಾಯಿತು.

  ಕಾರ್ಕಳದ ವಿಜೇತ ಶಾಲೆಯ ವಿಶೇಷ ಚೇತನ ಮಕ್ಕಳು ಹಾಗೂ ಮೂಡುಬಿದರೆ ಯ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳು ತಯಾರಿಸಿದ ಹಣತೆ ಹಚ್ಚಿ ದೀಪಾವಳಿ ಆಚರಿಸಲಾಯಿತು.

   ಶಾಲಾ ಮಕ್ಕಳಿಗೆ ಕ್ವಿಜ್‌ ಸೇರಿದಂತೆ ಮನೋರಂಜನಾ ಕಾರ್ಯಕ್ರಮ ನಡೆಯಿತು. ಮಕ್ಕಳೊಂದಿಗೆ ಸಹ ಭೋಜನ ನಡೆಸಲಾಯಿತು.

  ಕಾರ್ಯಕ್ರಮದಲ್ಲಿ ಫೌಂಡೇಶನ್ ಪ್ರಮುಖರಾದ ಡಾ. ಶಶಿಕಿರಣ್ ಶೆಟ್ಟಿ, ಡಾ. ಸುಮಾ ಎಸ್ ಶೆಟ್ಟಿ, ಶಾಲಾ ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಫೌಂಡೇಶನ್ ನ ಸದಸ್ಯರು ಭಾಗವಹಿಸಿದ್ದರು.

  ವಾಣಿಶ್ರೀ ಗೋವಿಂದ ಭಂಡಾರಿ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.