ಬಂಟ್ವಾಳ: ಹೊನಲು ಬೆಳಕಿನ ದಫ್ ಸ್ಪರ್ಧೆ ಉಡುಪಿ – ಮಜೂರಿನ ಸಿರಾಜುಲ್ ಹುದಾ ದಫ್ ತಂಡಕ್ಕೆ ಪ್ರಶಸ್ತಿ
(Bantwala) ಬಂಟ್ವಾಳ : ಇಲ್ಲಿನ ಕೆಳಗಿನ ಪೇಟೆಯ ಅಲ್-ಅಮೀನ್ ಯೂತ್ ಫ್ರೆಂಡ್ಸ್ ಇದರ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ದಫ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಕಾಪು ತಾಲೂಕಿನ ಮಜೂರು ಸಿರಾಜುಲ್ ಹುದಾ ದಫ್ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಉಳ್ಳಾಲ ಅಕ್ಕರೆಕೆರೆಯ ಅಲ್-ಜಝೀರಾ ದಫ್ ತಂಡ ದ್ವಿತೀಯ ಹಾಗೂ ಕಟಪಾಡಿ – ಮಣಿಪುರದ ಖಲಂದರ್ ಷಾ ದಫ್ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.
ಸುರತ್ಕಲ್ – ಕೃಷ್ಣಾಪುರದ ಬದ್ರಿಯಾ ದಫ್ ತಂಡ ಉತ್ತಮ ಹಾಡುಗಾರ ಪ್ರಶಸ್ತಿಯನ್ನು ಪಡೆಯಿತು.
ಇದಕ್ಕೂ ಮೊದಲು ಮಾಸ್ಟರ್ ಅಸೀಬ್ ಹಾಗೂ ಸಂಗಡಿಗರ ನೇತೃತ್ವದ ಇಷ್ಕೇ ಮದೀನ ಬುರ್‍ದಾ ಸಂಘದಿಂದ ಬುರ್‍ದಾ ಮಜ್ಲಿಸ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯ ಹಾಜಿ ಅಬ್ದುಲ್ ಖಾದರ್ ಮುಸ್ಲಿಯಾರ್ ಅಲ್-ಖಾಸಿಮಿ ಬಂಬ್ರಾಣ ಉದ್ಘಾಟಿಸಿದರು.
ಅವರು ಈ ಸಂದರ್ಭ ಮಾತನಾಡಿ, ದಫ್ ಎಂಬುದು ಪವಿತ್ರ ಇಸ್ಲಾಮಿನ ನಾಲ್ಕು ಮದ್ಸ್ ಹಬ್‌ಗಳೂ ಕೂಡಾ ಅನುಮತಿಸಿದ ಇಸ್ಲಾಮೀ ಕಲಾ ಪ್ರಕಾರವಾಗಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸ್ಪರ್ಧಾ ರೂಪದಲ್ಲಿ ಕಾರ್ಯಕ್ರಮ ಆಯೋಜಿಸುವುದು ಸ್ತುತ್ಯಾರ್ಹವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ವಹಿಸಿದ್ದರು.
ಸಯ್ಯಿದ್ ಇಬ್ರಾಹಿಂ ಬಾತಿಷಾ ತಂಙಳ್ ಆನೆಕಲ್ ದುವಾಶಿರ್ವಚನಗೈದರು.
ಬಂಟ್ವಾಳ ಖತೀಬ್ ಮುಹಮ್ಮದ್ ರಿಯಾಝ್ ಫೈಝಿ, ರಿಯಾಝ್ ಫರಂಗಿಪೇಟೆ, ಪುರಸಭಾ ಸದಸ್ಯ ಮೂನಿಶ್ ಅಲಿ, ರಾಜ್ಯ ಗೇರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ ಎಚ್ ಖಾದರ್, ಬಂಟ್ವಾಳ ಜುಮಾ ಮಸೀದಿ ಅಧ್ಯಕ್ಷ ಅಹ್ಮದ್ ಶಾಫಿ, ಉಪಾಧ್ಯಕ್ಷ ಪಿ ಬಿ ಇಸ್ಮಾಯಿಲ್, ತೌಹೀದ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಹಾಜಿ ಅಬ್ದುಲ್ ರಹಿಮಾನ್, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹಾರೂನ್ ರಶೀದ್, ಬಂಟ್ವಾಳ ಅಲ್-ಸಫರ್ ಫ್ರೆಂಡ್ಸ್ ಅಧ್ಯಕ್ಷ ಮುಹಮ್ಮದ್ ನಿಝಾಂ, ಮಾನವತಾ ಸೇವಾ ಸಂಸ್ಥೆಯ ಸ್ಥಾಪಕಾಧ್ಯಕ್ಷ ಮುಸ್ತಫಾ ಜೋಕಟ್ಟೆ, ಪುದು ಗ್ರಾ. ಪಂ ಸದಸ್ಯ ಹಾಶೀರ್ ಪೇರಿಮಾರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು, ಹಾಜಿ ಬಿ ಎಚ್ ಖಾದರ್ ಬಂಟ್ವಾಳ, ಅಬ್ದುಲ್ ಮಜೀದ್ ಫೈಝಿ ಕೋಲ್ಪೆ, ಯೂಸುಪ್ ಮುಸ್ಲಿಯಾರ್ ಕೋಲ್ಪೆ, ಹಾಫಿಳ್ ಸಯೀದ್ ಬಂಟ್ವಾಳ, ರಾಝಿಕ್ ವಿಟ್ಲ, ಮುಹಮ್ಮದ್ ಮುಸ್ತಫಾ ಜೋಕಟ್ಟೆ ಅವರನ್ನು ಸನ್ಮಾನಿಸಲಾಯಿತು.
ಇರ್ಶಾದ್ ಬಂಟ್ವಾಳ ಸ್ವಾಗತಿಸಿ, ಅಬ್ದುಲ್ ಖಾದರ್ ರಾಝಿ ವಂದಿಸಿದರು. ಪತ್ರಕರ್ತರಾದ ಲತೀಫ್ ನೇರಳಕಟ್ಟೆ ಹಾಗೂ ಪಿ ಎಂ ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು.

