ಬಂಟಕಲ್ ತಾಂತ್ರಿಕ ಕಾಲೇಜು: “ವಿದ್ಯಾಮೃತ – 2024” ಸಿಇಟಿ ತರಬೇತಿ ಕಾರ್ಯಕ್ರಮ
(Bantakal)ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಬಂಟಕಲ್, ವಿದ್ಯಾಸಂಸ್ಥೆಯು ವಿಕಸನ ಫೌಂಡೇಶನ್ ಜತೆ ಒಪ್ಪಂದ ಮಾಡಿಕೊಂಡು ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದು ಇಂಜಿನಿಯರಿAಗ್ ಮುಂತಾದ ಕೋರ್ಸ್ಗಳಲ್ಲಿ ಪ್ರವೇಶ ಪಡೆಯಲು ನಡೆಸುವ “ಸಾಮಾನ್ಯ ಪ್ರವೇಶ ಪರೀಕ್ಷೆ 2024” ರಲ್ಲಿ ಉತ್ತಮ ಅಂಕಗಳಿಸಲು “ವಿದ್ಯಾಮೃತ – 2024”ಎಂಬ ತರಬೇತಿ ಕಾರ್ಯಕ್ರಮವನ್ನು ಎಪ್ರಿಲ್ 2024ರಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮ ಪಿಯುಸಿ ಪರೀಕ್ಷೆ ಮುಗಿದ ತಕ್ಷಣ 10 ದಿನಗಳ ತರಬೇತಿ ಕಾರ್ಯಕ್ರಮವಾಗಿದ್ದು, ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಬಂಟಕಲ್ನಲ್ಲಿ 24 ಮಾರ್ಚ್ 2024 ರಿಂದ 02 ಎಪ್ರಿಲ್ 2024ರ ತನಕ ಹಾಗೂ ಉಳಿದ ಭಾಗದ ತರಬೇತಿಯು ದಿನಾಂಕ 03 ಎಪ್ರಿಲ್ 2024 ರಿಂದ “ಸಾಮಾನ್ಯ ಪ್ರವೇಶ ಪರೀಕ್ಷೆ 2024” ಮುಗಿಯುವ ತನಕ ಆನ್ಲೈನ್ ಮೂಲಕ ನಡೆಸಲಾಗುತ್ತದೆ.
ಈ ಕೋರ್ಸಿಗೆ ಸುಮಾರು ರೂ 10,000/- ಖರ್ಚು ವೆಚ್ಚ ಬರುತ್ತಿದ್ದು, ಇದರಲ್ಲಿ ರೂ 9050/- ಅನ್ನು ಶ್ರೀ ರಾಮಕೃಷ್ಣ ಆಶ್ರಮ, ಬಿಎನ್ಎಂಐಟಿ, ಬೆಂಗಳೂರು ಹಾಗೂ ಟೀಚರ್ ಸಂsಸ್ಥೆ ಇವರ ಮೂಲಕ ವಿಕಸನ ಫೌಂಡೇಶನ್ ಭರಿಸುತ್ತಿದೆ, ಉಳಿದ ರೂ 950/- ನ್ನು ವಿದ್ಯಾರ್ಥಿಗಳು ಭರಿಸಬೇಕಾಗುತ್ತದೆ.
ಆಸಕ್ತ ವಿದ್ಯಾರ್ಥಿಗಳು ಈ ಕೆಳಗಿನ ಲಿಂಕ್ ಮೂಲಕ ರಿಜಿಸ್ಟೆçÃಶನ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9035548499 ಅನ್ನು ಸಂಪರ್ಕಿಸಬಹುದು.

