ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ, ಜನಜಾಗೃತಿ ವೇದಿಕೆ ಕಾಪು ತಾಲೂಕು ಪದಾಧಿಕಾರಿಗಳ ತ್ರೈಮಾಸಿಕ ಸಭೆ
ಕಾಪುವಿನ ಶ್ರೀ ವೀರಭದ್ರ ಸಭಾಭವನ ಕಾಪುವಿನಲ್ಲಿ ನಡೆದ ಸಭೆ
(Kaup) ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಾಪು ತಾಲೂಕು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾಪು ತಾಲೂಕು ಇದರ ಪದಾಧಿಕಾರಿಗಳ ತ್ರೈಮಾಸಿಕ ಸಭೆಯು ಶ್ರೀ ವೀರಭದ್ರ ಸಭಾಭವನ ಕಾಪುವಿನಲ್ಲಿ ಶುಕ್ರವಾರ ನಡೆಯಿತು.
ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ತಾಲೂಕು ವೇದಿಕೆ ಅಧ್ಯಕ್ಷರಾದ ಸತ್ಯೇಂದ್ರ ಪೈ ಯವರು ವಹಿಸಿದ್ದರು.
ಅಕ್ಟೋಬರ್ ಮೂರರಂದು ಉಡುಪಿಯಲ್ಲಿ ನಡೆಯುವ ಜನಜಾಗೃತಿ ಜಾತ ಹಾಗೂ ಗಾಂಧಿ ಸ್ಮೃತಿ ಕಾರ್ಯಕ್ರಮಕ್ಕೆ ಕಾಪು ತಾಲೂಕಿನ ಸಂಪೂರ್ಣ ಬೆಂಬಲದ ಜೊತೆಗೆ ಆಕರ್ಷಕ ಟ್ಯಾಬ್ಲೋ ವ್ಯವಸ್ಥೆಗೆ ಪೂರಕವಾಗಿ ಮಾರ್ಗದರ್ಶನ ವನ್ನು ಸತ್ಯೇಂದ್ರ ಪೈ ನೀಡಿದರು.
ಸಭೆಯಲ್ಲಿ ರಾಜ್ಯ ವೇದಿಕೆಯ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್ ಅವರು ಮಾತನಾಡಿ, ಶಾಲಾ ಕಾಲೇಜು ಮಕ್ಕಳ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಮ್ಮ ತಾಲೂಕಿನಲ್ಲಿ ಬಹಳ ಪರಿಣಾಮಕಾರಿಯಾಗಿ ನಡೆಯುತ್ತಿದೆ. ಮುಂದಿನ ವರ್ಷ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸಬೇಕೆಂದು ಸಲಹೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ವೇದಿಕೆ ಮಾಜಿ ಅಧ್ಯಕ್ಷರಾದ ನವೀನ್ ಅಮೀನ್ ಅವರು ಮಾತನಾಡಿ, ಮದ್ಯಮುಕ್ತ ಮೆಹಂದಿ ಕಾರ್ಯಕ್ರಮ ನಮ್ಮ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದು, ಇದು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯುವಲ್ಲಿ ತಮ್ಮೆಲ್ಲರ ಸಹಕಾರ ಬೇಕೆಂದು ತಿಳಿಸಿದರು.
2026 – 27 ನೇ ಸಾಲಿನ ಕ್ರಿಯಾ ಯೋಜನೆಯ ಅನುಷ್ಠಾನದ ಬಗ್ಗೆ ಹಾಗೂ ಗಾಂಧಿ ಜಯಂತಿ ಕಾರ್ಯಕ್ರಮದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿಯಾಗಿ ಗಣೇಶ್ ಆಚಾರ್ಯರವರು ನೀಡಿದರು.
ಸಭೆಯಲ್ಲಿ ಶ್ರೀಮತಿ ಗೀತಾಂಜಲಿ ಸುವರ್ಣ, ಶಂಕರ್ ಕುಂದರ್, ಸುಧಾಕರ್ ಕರ್ಕೇರ, ಶ್ರೀಮತಿ ರೇಷ್ಮಾ ಉದಯ್ ಶೆಟ್ಟಿ, ಶ್ರೀಮತಿ ಬಬಿತ ಅರಸ್, ಶ್ರೀಮತಿ ಸುಜಾತ ಸುವರ್ಣ, ಶ್ರೀಮತಿ ಗೀತಾ ವಾಗ್ಲೆ, ಗಣೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಮಹಮ್ಮದ್ ಫಾರೂಕ್, ರಾಕೇಶ್ ಕುಂಜೂರು, ರಾಧಾ ರಮಣ ಶಾಸ್ತ್ರಿ, ಕೇಶವ ಕೆ ಅಮೀನ್, ಕೆ ಆರ್ ಪಾಟ್ಕರ್, ಶ್ರೀಮತಿ ಸುಮಾ ಶೆಟ್ಟಿ, ಪ್ರಸಾದ ಆಚಾರ್ಯ, ಶ್ರೀಮತಿ ರಜನಿ ಗೀತಾ ಹಾಗೂ ವಲಯದ ಕಾರ್ಯದರ್ಶಿಗಳು, ಕಚೇರಿ ಆಡಳಿತ ಸಹಾಯಕ ಪ್ರಬಂಧಕರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿಯವರು ಗತ ಸಭೆಯ ವರದಿ ವಾಚಿಸುವುದರ ಜೊತೆಗೆ ಸ್ವಾಗತಿಸಿದರು.
ಮೇಲ್ವಿಚಾರಕರಾದ ವಿನುತಾ ವಂದಿಸಿದರು.

