• Home  
  • ಉಡುಪಿ : ಬಸಳೆಗೆ ನುಸಿರೋಗ, ಕಂಗಾಲಾದ ರೈತ
- ಕರಾವಳಿ

ಉಡುಪಿ : ಬಸಳೆಗೆ ನುಸಿರೋಗ, ಕಂಗಾಲಾದ ರೈತ

Share: ಉಡುಪಿ : ಬಸಳೆಗೆ ನುಸಿರೋಗ, ಕಂಗಾಲಾದ ರೈತ (brahmavara) ಬ್ರಹ್ಮಾವರ :  ಹಾವಂಜೆ ಗ್ರಾಮದ ಕೀಳಂಜೆಯ ಸುಧಾಕರ ಪೂಜಾರಿಯವರ ಮನೆಯಂಗಳದಲ್ಲಿ ವರ್ಷವಿಡಿ ಬೆಳೆಯುವಂತಹ ಕರಾವಳಿಯ ಬಸಳೆ ಈ ಬಾರಿ ಮಾತ್ರ ಹವಾಗುಣದ ವೈಪರಿತ್ಯಕ್ಕೆ ನುಸಿರೋಗ ಭಾದಿಸಿ ರೈತ ಕಂಗಾಲಾಗಿದ್ದಾನೆ.   ಬಸಳೆ ಕೃಷಿಯೊಂದಿಗೆ ಅಲಸಂಡೆ. ಮೆಣಸು, ಸೌತೆಕಾಯಿ, ಗೆಣಸು, ಹರಿವೆ, ಬದನೆ, ಎಲ್ಲವನ್ನು ಒಂದೇ ಗದ್ದೆಯಲ್ಲಿ ಬೆಳೆದಿದ್ದರೂ ಬಸಳೆಗೆ ಮಾತ್ರ ರೋಗಬಾದೆ ಉಂಟಾಗಿದೆ.   ಜಯಶೆಟ್ಟಿ ಬನ್ನಂಜೆ ಅವರ ಮನೆಯ ಅಂಗಳದಲ್ಲಿ ಬೆಳೆಸಿದಂತಹ ಬಸಳೆ ಕೂಡಾ ಸಂಪೂರ್ಣ ನಾಶವಾಗಿದೆ. […]

ಉಡುಪಿ : ಬಸಳೆಗೆ ನುಸಿರೋಗ, ಕಂಗಾಲಾದ ರೈತ

(brahmavara) ಬ್ರಹ್ಮಾವರ :  ಹಾವಂಜೆ ಗ್ರಾಮದ ಕೀಳಂಜೆಯ ಸುಧಾಕರ ಪೂಜಾರಿಯವರ ಮನೆಯಂಗಳದಲ್ಲಿ ವರ್ಷವಿಡಿ ಬೆಳೆಯುವಂತಹ ಕರಾವಳಿಯ ಬಸಳೆ ಈ ಬಾರಿ ಮಾತ್ರ ಹವಾಗುಣದ ವೈಪರಿತ್ಯಕ್ಕೆ ನುಸಿರೋಗ ಭಾದಿಸಿ ರೈತ ಕಂಗಾಲಾಗಿದ್ದಾನೆ.

  ಬಸಳೆ ಕೃಷಿಯೊಂದಿಗೆ ಅಲಸಂಡೆ. ಮೆಣಸು, ಸೌತೆಕಾಯಿ, ಗೆಣಸು, ಹರಿವೆ, ಬದನೆ, ಎಲ್ಲವನ್ನು ಒಂದೇ ಗದ್ದೆಯಲ್ಲಿ ಬೆಳೆದಿದ್ದರೂ ಬಸಳೆಗೆ ಮಾತ್ರ ರೋಗಬಾದೆ ಉಂಟಾಗಿದೆ.

  ಜಯಶೆಟ್ಟಿ ಬನ್ನಂಜೆ ಅವರ ಮನೆಯ ಅಂಗಳದಲ್ಲಿ ಬೆಳೆಸಿದಂತಹ ಬಸಳೆ ಕೂಡಾ ಸಂಪೂರ್ಣ ನಾಶವಾಗಿದೆ. ಯಾವುದೇ ಬಸಳೆ ಎಲೆ ಚಿಗುರದೆ ಅಲ್ಲಿಯೇ ಬಾಡಿ ಹೋಗಿದೆ.

ಎರಡು ಮೂರು ತಿಂಗಳ ಹಿಂದೆ ಬಸಳೆ ಗಿಡ ಹಚ್ಚ ಹಸಿರಾಗಿದ್ದು. ಇದೀಗ ಈ ರೀತಿ ಆಗಿರುವುದು ಇದೇಮೊದಲು ಎನ್ನುತ್ತಾರೆ. ಸ್ಥಳೀಯ ಕೃಷಿಕರಾದ ದಿನೇಶ್ ಪೂಜಾರಿ.

  ಸ್ಥಳೀಯರಾದ ಜಯಶೆಟ್ಟಿ ಬನ್ನಂಜೆ. ಸುಧಾಕರ ಪೂಜಾರಿ. ದಿನೇಶ್ ಪೂಜಾರಿ,  ರವಿಪೂಜಾರಿ, ಮೊದಲಾದವರು ಬಸಳೆಗೆ ನುಸಿರೋಗ ಬಾಧಿಸಿದ ಬಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರೊ. ಎಸ್. ಎ ಕೃಷ್ಣಯ್ಯ ಅವರ ಬಳಿ ಮಾಹಿತಿ ಹಂಚಿಕೊಂಡಾಗ, ಸ್ಥಳೀಯವಾಗಿ ಸಿಗುವ ಗೋಮೂತ್ರ ಒಂದು ಲೀಟರಿಗೆ ಏಳು ಲೀಟರ್ ನೀರನ್ನ ಸೇರಿಸಿ,  ಬಸಳೆ ಎಲೆಗಳ ಮೇಲೆ ಸಿಂಪಡಿಸಬೇಕೆಂದು ಮಾಹಿತಿ ನೀಡಿದ್ದಾರೆ.

 ಕರಾವಳಿಗರು ಸೆಕೆಗಾಲದ ಸಮಯ ಬಸಳೆಯನ್ನು ಹೆಚ್ಚಾಗಿ ಪದಾರ್ಥಕ್ಕೆ ಉಪಯೋಗಿಸುತ್ತಾರೆ.  ಕೆಲವರು ಒಣ ಮೀನು, ಒಣ ಸಿಗಡಿ, ಸೇರಿಸಿ ಬಸಳೆ ಪದಾರ್ಥ ಮಾಡುತ್ತಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.