ಬೆಳ್ಳೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕಾಪು ತಾಲೂಕಿನ “ನವಜೀವನೋತ್ಸವ”
ನವಜೀವನೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಅತಿಥಿಗಳು
(Belle) ಬೆಳ್ಳೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕಿನ “ನವಜೀವನೋತ್ಸವ ಕಾರ್ಯಕ್ರಮ” ಬೆಳ್ಳೆ ಗೀತಾಮಂದಿರದ ಸಭಾಭವನದಲ್ಲಿ ಗುರುವಾರ ಸಂಪನ್ನಗೊಂಡಿತು.
ನವಜೀವನ ಸಮಿತಿಯ ಸದಸ್ಯರಾದ ಬಾಬು, ಸಂಜೀವ, ಬಾಲು ಅವರ ಪತ್ನಿ ಸುಗುಣ ‘ಮಧ್ಯವರ್ಜನೆ ಶಿಬಿರದಿಂದ’ ಮಧ್ಯಪಾನ ತ್ಯಜಿಸಿ ನಮ್ಮ ಬದುಕು ಹಸನಾಗಿರುವ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಚಂದ್ರ ಪೂಜಾರಿ ಅವರು ನವಜೀವನ ಸಮಿತಿಯ ಸದಸ್ಯರಿಗೆ ವಿವಿಧ ಆಟೋಟ ಸ್ವರ್ಧೆಗಳನ್ನು ನಡೆಸಿದ್ದು, ಅವರಿಗೆ ಬಹುಮಾನ ವಿತರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ, ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ಕಾಪು ತಾಲೂಕು ಅಧ್ಯಕ್ಷ ಸತ್ಯೆoದ್ರ ಪೈ, ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ನಿಕಟ ಪೂರ್ವ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ, ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯೆ ಶ್ರೀಮತಿ ಸಜಾತಾ ಸುವರ್ಣ ಮತ್ತು ಶ್ರೀಮತಿ ಗೀತಾ ವಾಗ್ಳೆ, ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ದೀಪಾ ಬೆಳ್ಳೆ, ತಾಲೂಕಿನ ಎಲ್ಲಾ ನವಜೀವನ ಸದಸ್ಯರ ಉಪಸ್ಥಿತಿಯಲ್ಲಿ ನವಜೀವನೋತ್ಸವ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನೇರವೇರಿಸಲಾಯಿತು.
ಮೇಲ್ವಿಚಾರಕರಾದ ದೇವೇಂದ್ರ ನಿರೂಪಿಸಿದರು. ಕಾಪು ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯೆ ಶ್ರೀಮತಿ ಸುಜಾತಾ ಸುವರ್ಣ ಸ್ವಾಗತಿಸಿದರು. ಮೇಲ್ವಿಚಾರಕರಾದ ಶಿವಾನಂದ ಧನ್ಯವಾದ ಸಲ್ಲಿಸಿದರು.
ಕಾಪು ತಾಲೂಕಿನ ಎಲ್ಲಾ ನವಜೀವನ ಸಮಿತಿಯ ಸದಸ್ಯರು, ಬೆಳ್ಳೆ ಮತ್ತು ಕಟ್ಟಿಂಗೇರಿ ಒಕ್ಕೂಟದ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು, ಊರಿನ ಗಣ್ಯರು ಉಪಸ್ಥಿತರಿದ್ದರು.

