• Home  
  • ಬಂಟಕಲ್ಲು ನಿರಾಮಯ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಥಮ ಬ್ಯಾಚಿನ ಪ್ರತಿಜ್ಞಾ ವಿಧಿ ಕಾರ್ಯಕ್ರಮ (The Lamp lighting and Oath Taking Ceremony for the first batch of BSc Nursing students of Niramay Collge Bantakal)
- ಶಾಲಾ ಕಾಲೇಜು

ಬಂಟಕಲ್ಲು ನಿರಾಮಯ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಥಮ ಬ್ಯಾಚಿನ ಪ್ರತಿಜ್ಞಾ ವಿಧಿ ಕಾರ್ಯಕ್ರಮ (The Lamp lighting and Oath Taking Ceremony for the first batch of BSc Nursing students of Niramay Collge Bantakal)

Share: ಬಂಟಕಲ್ಲು ನಿರಾಮಯ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಥಮ ಬ್ಯಾಚಿನ ಪ್ರತಿಜ್ಞಾ ವಿಧಿ ಕಾರ್ಯಕ್ರಮ (Bantakal)ಬಂಟಕಲ್:‌ ಶ್ರೀ ಸೋದೆ ವಾದಿರಾಜ ಮಠದ ಆಡಳಿತಕ್ಕೊಳಪಟ್ಟ ಬಂಟಕಲ್ಲು ನಿರಾಮಯ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಥಮ ಬ್ಯಾಚಿನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ಪ್ರತಿಜ್ಞಾ ವಿಧಿ ಸ್ವೀಕರಿಸುವ ಕಾರ್ಯಕ್ರಮ   ನಿರಾಮಯ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್‌ನ  ಸಭಾಂಗಣದಲ್ಲಿ ನಡೆಯಿತು.  ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.  ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ. ಎನ್. ಆರ್. ಆಚಾರ್ಯ ಮೆಮೋರಿಯಲ್ ಹಾಸ್ಪಿಟಲ್ ಕೋಟೇಶ್ವರ […]

ಬಂಟಕಲ್ಲು ನಿರಾಮಯ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಥಮ ಬ್ಯಾಚಿನ ಪ್ರತಿಜ್ಞಾ ವಿಧಿ ಕಾರ್ಯಕ್ರಮ

(Bantakal)ಬಂಟಕಲ್:‌ ಶ್ರೀ ಸೋದೆ ವಾದಿರಾಜ ಮಠದ ಆಡಳಿತಕ್ಕೊಳಪಟ್ಟ ಬಂಟಕಲ್ಲು ನಿರಾಮಯ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಥಮ ಬ್ಯಾಚಿನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ಪ್ರತಿಜ್ಞಾ ವಿಧಿ ಸ್ವೀಕರಿಸುವ ಕಾರ್ಯಕ್ರಮ   ನಿರಾಮಯ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್‌ನ  ಸಭಾಂಗಣದಲ್ಲಿ ನಡೆಯಿತು.

 ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

 ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ. ಎನ್. ಆರ್. ಆಚಾರ್ಯ ಮೆಮೋರಿಯಲ್ ಹಾಸ್ಪಿಟಲ್ ಕೋಟೇಶ್ವರ ಇಲ್ಲಿಯ ಮೆಡಿಕಲ್ ಡೈರೆಕ್ಟರ್ ಡಾ. ಭಾಸ್ಕರ್ ಆಚಾರ್ಯರವರು ಮಾತನಾಡಿ, ಫ್ಲಾರೆನ್ಸ್ ನೈಟಿಂಗೇಲರ ಜೀವನ ಚರಿತ್ರೆ ಮತ್ತು ಆರೋಗ್ಯ ವಿಜ್ಞಾನದಲ್ಲಿ ನರ್ಸಿಂಗ್‌ನ ಮಹತ್ವ ವಿವರಿಸಿದರು.

ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನ ಮುಖ್ಯಸ್ಥ

  ಡಾ. ಆನೀಸ್ ಜೋರ್ಜ್ ರವರು ಮಾತನಾಡಿ, ವಿದ್ಯಾರ್ಥಿಗಳು ರೋಗಿಗಳ ಆರೈಕೆಯನ್ನು ತಮ್ಮ ಧ್ಯೇಯವಾಗಿ ಬಳಸಿ ಸೇವೆ ಸಲ್ಲಿಸಬೇಕು ಹಾಗೂ ರೋಗಿಗಳೊಂದಿಗೆ ಹೇಗೆ ಸಂವಾದ ನಡೆಸಬೇಕು ಎನ್ನುವುದನ್ನು ವಿವರಿಸಿದರು.

 ಉಡುಪಿ ಎಸ್. ವಿ. ಎಚ್. ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ರತ್ನಕುಮಾರ್‌ರವರು (Rathnakumar)

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಅವರು ಮಾತನಾಡಿ, ಬಂಟಕಲ್ಲಿನಲ್ಲಿ ನರ್ಸಿಂಗ್ ಕಾಲೇಜಿನ ಅವಶ್ಯಕತೆಯನ್ನು ಮನಗಂಡು ಕಾಲೇಜನ್ನು ಪ್ರಾರಂಭಿಸಲಾಯಿತು ಎಂದರು.

  ನಿರಾಮಯ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್‌ನ  ನಿರ್ದೇಶಕರಾದ ಡಾ. ನವೀನ್ ಎಂ. ಬಳ್ಳಾಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ನಿರಾಮಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಫ್ಲಾವಿಯ ಕ್ಯಾಸ್ಟಲಿನೋ ಸ್ವಾಗತಿಸಿ, ಫ್ಲಾರೆನ್ಸ್ ನೈಟಿಂಗೇಲ್ ಪ್ರತಿಜ್ಞೆಯನ್ನು ವಾಚಿಸುವ ಮೂಲಕ ಸಹಾನುಭೂತಿ, ಸಮರ್ಪಣೆಯ ಬೆಳಕನ್ನು ಬೆಳಗಿಸಿದರು. ದಿವ್ಯಾ ವಿ. ನಿರೂಪಿಸಿದರು.

 ಜೆನಿಫರ್ ಮಥಾಯಸ್‌ರವರು ವಂದಿಸಿದರು.

  ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಕರು ಹಾಗೂ ಕಾಲೇಜಿನ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.