ಪಡುಬಿದ್ರಿಯಲ್ಲಿಬಂಜೆತನತಪಾಸಣಾ ಶಿಬಿರ
(Padubidri) ಪಡುಬಿದ್ರಿ: ಅಧುನಿಕ ಯುಗದಲ್ಲಿ ಪ್ರತಿಯೊಂದಕ್ಕೂ ಚಿಕಿತ್ಸೆ ಇರುವ ಕಾರಣ ಬಂಜೆತನವನ್ನು ಕೂಡಾ ನಿವಾರಣೆ ಮಾಡಬಹುದು. ಇಂದಿನ ಜೀವನ ಶೈಲಿ ಹಾಗೂ ಅಹಾರ ಪದ್ದತಿಯೇ ಬಂಜೆತನಕ್ಕೆ ಮುಖ್ಯ ಕಾರಣ. ಬಂಜೆತನದಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವವರ ಸಂಖ್ಯೆ ಜಾಸ್ತಿ ಅಗುತ್ತಿದೆ. ಎಂದು ವ್ಯೆದ್ಯಾಧಿಕಾರಿ ಡಾ. ಪಯಸ್ವಿನಿ ಶೆಟ್ಟಿಗಾರ್ (Dr Payasvini Shettigar) ಹೇಳಿದರು.
ಅವರು ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ ಪಡುಬಿದ್ರಿ ರೋಟರಿ ಸಮುದಾಯದಳ ಮತ್ತು ರೋಟರಾಕ್ಟ್ ಕ್ಲಬ್ ಮತ್ತು ನೋವಾ ಐವಿಎಫ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಪಡುಬಿದ್ರಿ ಓಂಕಾರ್ ಕಲಾ ಸಂಗಮದಲ್ಲಿ ನಡೆದ ಬಂಜೆತನ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅಧುನಿಕ ಜಗತ್ತಿನಲ್ಲಿ ಬಂಜೆತನ ಸಾಮಾನ್ಯವಾಗಿದೆ. ಹೆಚ್ಚಿನ ದಂಪತಿಗಳಲ್ಲಿ ಈ ಸಮಸ್ಯೆಯು ಕಂಡು ಬರುತ್ತಲಿದ್ದು, ಶೇ.50 ರಷ್ಟು ದಂಪತಿಗಳಲ್ಲಿ ಈ ಸಮಸ್ಯೆ ಕಾಡುತ್ತಿದೆ. ಪುರುಷರು ಹಾಗೂ ಮಹಿಳೆಯರು ಬಂಜೆತನಕ್ಕೆ ಸಮಾನ ಕಾರಣರಾಗಿರುತ್ತಾರೆ. ಇದನ್ನು ನಿವಾರಣೆ ಮಾಡಲು ಹಲವಾರು ಬಗೆಯ ಜೌಷಧಗಳು ಹಾಗೂ ಚಿಕಿತ್ಸೆಗೆ ಅವರು ಒಳಗಾಗಬೇಕಾಗಿದೆ. ಇದರ ಬಗ್ಗೆ ಮಾತನಾಡಲು ಹಿಂಜರಿಯ ಬಾರದು ಎಂದು ತಪಾಸಣೆ ಶಿಬಿರದ ಐ.ವಿ. ಎಫ್ ಮಂಗಳೂರು ಕ್ಲಿನಿಕ್ ನ ವ್ಯೆದ್ಯಾಧಿಕಾರಿ ಡಾ. ಶಮೀಝ್ ಫೈಝಿ (Dr Shamiz Faizi) ಹೇಳಿದರು.
46 ಮಂದಿ ಶಿಬಿರದ ಪ್ರಯೋಜನ ಪಡೆದರು.
ಪಡುಬಿದ್ರಿ ರೋಟರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ (Santhosh Padubidri) ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭ ತೆಂಕ ಗ್ರಾ.ಪಂ ಉಪಾಧ್ಯಕ್ಷೆ ಶ್ರೀಮತಿ ಕಸ್ತೂರಿ ಪ್ರವೀಣ್, ರೋಟರಿ ನಿಯೋಜಿತ ಅಧ್ಯಕ್ಷೆ ತಸ್ನೀನ್ ಅರಾ, ರೋಟರಿ ಸಮುದಾಯದಳ ಅಧ್ಯಕ್ಷ ರಚನ್ ಸಾಲ್ಯಾನ್ , ರೋಟರಾಕ್ಟ್ ಕ್ಲಬ್ ಕಾರ್ಯದರ್ಶಿ ಪ್ರತೀಕ್ ಅಚಾರ್ಯ, ನೋವಾ ಐ.ವಿ.ಎಫ್ ಸೇಲ್ಸ್ ಮೆನೇಜರ್ ಹರ್ಷ ಮಂಗಳೂರು ಉಪಸ್ಥಿತರಿದ್ದರು..
ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ಅನಿತಾ ಬಿ. ಎಸ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

