• Home  
  • ಸೆ. 24ರಂದು ಕಾಪು ಹೊಸ ಮಾರಿಗುಡಿಯಲ್ಲಿ ಮಾತೃಕಾ ಶಕ್ತಿ ಪೂಜೆ (‘Matruka Shakti Puja’ at Kapu Hosa Marigudi on September 24.)
- ಧಾರ್ಮಿಕ

ಸೆ. 24ರಂದು ಕಾಪು ಹೊಸ ಮಾರಿಗುಡಿಯಲ್ಲಿ ಮಾತೃಕಾ ಶಕ್ತಿ ಪೂಜೆ (‘Matruka Shakti Puja’ at Kapu Hosa Marigudi on September 24.)

Share: ಸೆ. 24ರಂದು ಕಾಪು ಹೊಸ ಮಾರಿಗುಡಿಯಲ್ಲಿ ಮಾತೃಕಾ ಶಕ್ತಿ ಪೂಜೆ  ‘ಕಾಪುವಿನ ಅಮ್ಮನಿಗೊಂದು ಅಕ್ಷರ ನಮನ’ಮಹಾ ಅಭಿಯಾನಕ್ಕೆ ಚಾಲನೆ (Kaup)ಕಾಪು: ಶಕ್ತಿ ಸ್ವರೂಪಿಣಿ ಕಾಪುವಿನ ಅಮ್ಮನ ಪವಿತ್ರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಾಗೂ ಸಕಲ ಭಕ್ತರ ಶ್ರೇಯೋಭಿವೃದ್ಧಿಗಾಗಿ ವಿಶೇಷ ಸಂಕಲ್ಪದೊಂದಿಗೆ ‘ಮಾತೃಕಾ ಶಕ್ತಿ ಪೂಜೆ’ಧಾರ್ಮಿಕ ಕಾರ್ಯಕ್ರಮ ಸೆ. 24ರಂದು ಮಧ್ಯಾಹ್ನ 3 ಗಂಟೆಯಿಂದ ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ನಡೆಯಲಿದೆ ಎಂದು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ […]

(Kaup)ಕಾಪು: ಶಕ್ತಿ ಸ್ವರೂಪಿಣಿ ಕಾಪುವಿನ ಅಮ್ಮನ ಪವಿತ್ರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಾಗೂ ಸಕಲ ಭಕ್ತರ ಶ್ರೇಯೋಭಿವೃದ್ಧಿಗಾಗಿ ವಿಶೇಷ ಸಂಕಲ್ಪದೊಂದಿಗೆ ‘ಮಾತೃಕಾ ಶಕ್ತಿ ಪೂಜೆ’ಧಾರ್ಮಿಕ ಕಾರ್ಯಕ್ರಮ ಸೆ. 24ರಂದು ಮಧ್ಯಾಹ್ನ 3 ಗಂಟೆಯಿಂದ ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ನಡೆಯಲಿದೆ ಎಂದು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ತಿಳಿಸಿದ್ದಾರೆ.

  ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ, ಅಭಿವೃದ್ಧಿ ಸಮಿತಿ ಹಾಗೂ ನವದುರ್ಗಾ ಲೇಖನ ಯಜ್ಞ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ದೇವಳದ ಪ್ರಧಾನ ತಂತ್ರಿಗಳಾದ ಕೆ.ಪಿ. ಕುಮಾರಗುರು ತಂತ್ರಿ ಅವರ ಮಾರ್ಗದರ್ಶನದಲ್ಲಿ ಹಾಗೂ ಪ್ರಧಾನ ಅರ್ಚಕರಾದ ಶ್ರೀನಿವಾಸ ತಂತ್ರಿ ಕಲ್ಯ ಅವರ ಸಹಯೋಗದಲ್ಲಿ ಮಾತೃಕಾ ಶಕ್ತಿ ಪೂಜೆ ನೆರವೇರಲಿದೆ.

  ಅಂದು ಮಧ್ಯಾಹ್ನ 3.30ಕ್ಕೆ ಸಾಮೂಹಿಕ ಪ್ರಾರ್ಥನೆ, 4ಕ್ಕೆ ದೀಪ ಬೆಳಗಿಸುವಿಕೆ, 4.30ಕ್ಕೆ ಸಭಾ ಕಾರ್ಯಕ್ರಮ ಹಾಗೂ ಸಂಜೆ 5.30ಕ್ಕೆ ಮಹಾ ಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಮಾಪನಗೊಳ್ಳಲಿದೆ.

 ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ

  ಸಭಾ ಕಾರ್ಯಕ್ರಮಕ್ಕೂ ಮುನ್ನ ಕಾಪು ಕ್ಷೇತ್ರದ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳ ಉದ್ದೇಶದಿಂದ ಸ್ಥಾಪಿಸಲಾಗಿರುವ ಕಾಪು ಚಾರಿಟೇಬಲ್ ಟ್ರಸ್ಟ್ (ರಿ.) ಅನ್ನು ಬೆಂಗಳೂರಿನ ಎಂ.ಆರ್.ಜಿ. ಗ್ರೂಪ್ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ ಎಂದು ವಾಸುದೇವ ಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 ‘ಕಾಪುವಿನ ಅಮ್ಮನಿಗೊಂದು ಅಕ್ಷರ ನಮನ

  ನವದುರ್ಗಾ ಲೇಖನ ಯಜ್ಞ ಸಮಿತಿ ವತಿಯಿಂದ ಒಂಬತ್ತು ಗಣ್ಯರ ಸಮ್ಮುಖದಲ್ಲಿ ‘ಕಾಪುವಿನ ಅಮ್ಮನಿಗೊಂದು ಅಕ್ಷರ ನಮನ’ಮಹಾ ಅಭಿಯಾನಕ್ಕೆ ಚಾಲನೆ ನೀಡಲಾಗುವುದು.

  ಅಭಿಯಾನದಡಿ ಭಕ್ತರು ನವದುರ್ಗಾ ಲೇಖನ ಪುಸ್ತಕದಲ್ಲಿ ನವದುರ್ಗೆಯರ ನಾಮಗಳನ್ನು 9 ದಿನಗಳ ಕಾಲ ಭಕ್ತಿಯಿಂದ ಬರೆದು, ಶಾಶ್ವತ ಸೇವೆಯೊಂದಿಗೆ ಅಮ್ಮನಿಗೆ ಸಮರ್ಪಿಸಬಹುದಾಗಿದೆ. ಲೇಖನ ಪುಸ್ತಕ ಸಮರ್ಪಿಸುವ ಭಕ್ತರಿಗೆ ಅಮ್ಮನ ಅನುಗ್ರಹ ಪ್ರಸಾದದೊಂದಿಗೆ ‘ಅದೃಷ್ಟದ ಚೀಟಿ’ ನೀಡಲಾಗುವುದು. ಈ ಅವಕಾಶವು 99 ದಿನಗಳವರೆಗೆ ಮಾತ್ರ ಇರಲಿದೆ.

  ಅಮ್ಮನ ನಾಮ ಬರೆದ ಕೈಗಳಿಗೆ ಸ್ವರ್ಣದ ಸೌಭಾಗ್ಯ

  ನವದುರ್ಗೆಯರ ನಾಮಗಳನ್ನು ಭಕ್ತಿಯಿಂದ ಬರೆದು ಶಾಶ್ವತ ಸೇವೆಯೊಂದಿಗೆ ಸಮರ್ಪಿಸುವ ಭಕ್ತರ ಪೈಕಿ 9 ಅದೃಷ್ಟಶಾಲಿ ಭಕ್ತರಿಗೆ ತಲಾ 9 ಗ್ರಾಂ ತೂಕದ ಸ್ವರ್ಣ ಪದಕವನ್ನು ಕಾಪು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಮ್ಮನ ಪ್ರಸಾದ ರೂಪದಲ್ಲಿ ನೀಡಲಾಗುವುದು.

  ಒಬ್ಬರ ಹೆಸರಿನಲ್ಲಿ ಒಂದು ಲೇಖನ ಪುಸ್ತಕ ಬರೆಯಲು ಮಾತ್ರ ಅವಕಾಶವಿದೆ ಎಂದು ಅವರು ತಿಳಿಸಿದರು.

   ಮೂರು ವಿಧದ ಶಾಶ್ವತ ಸೇವೆ

  ನವದುರ್ಗಾ ಲೇಖನ ಯಜ್ಞದಡಿ ಭಕ್ತರಿಗೆ ಅಮ್ಮನ ಸೇವೆಯಲ್ಲಿ ಭಾಗಿಯಾಗಲು ಮೂರು ವಿಧದ ಶಾಶ್ವತ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ವಾಗ್ದೇವಿ ಶಾಶ್ವತ ಸೇವೆ – ₹99,999, ನವಶಕ್ತಿ ಶಾಶ್ವತ ಸೇವೆ – ₹9,999 ಮತ್ತು ಮಾ–ತಂಗಿ ಶಾಶ್ವತ ಸೇವೆ – ₹999 ಎಂದು ನಿಗದಿ ಪಡಿಸಲಾಗಿದೆ.

 ಮಾತೃಕಾ ಶಕ್ತಿ ಪೂಜೆಯ ಸಂಕಲ್ಪದಲ್ಲಿ ಭಾಗವಹಿಸಲು ಇಚ್ಛಿಸುವ ಮಹಿಳೆಯರು ಹಾಗೂ ಭಕ್ತರು ತಮ್ಮ ಹೆಸರುಗಳನ್ನು ಮುಂಗಡವಾಗಿ ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

  ಹೆಚ್ಚಿನ ಮಾಹಿತಿಗಾಗಿ 94815 50999 ಸಂಪರ್ಕಿಸಬಹುದು.

  ಸುದ್ದಿಗೋಷ್ಠಿಯಲ್ಲಿ ಶ್ರೀ ಹೊಸ ಮಾರಿಗುಡಿ  ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ಶೆಟ್ಟಿ, ಸಾವಿತ್ರಿ ಗಣೇಶ್ ಹಾಗೂ ಕಾರ್ಯದರ್ಶಿ ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.