ಧರ್ಮಸ್ಥಳ ಮೇಳದ ಯಕ್ಷಗಾನ ಕಲಾವಿದ ಕೋಟದಲ್ಲಿ ಹೃದಯಾಘಾತದಿಂದ ನಿಧನ
(Kota) ಕೋಟ: ಧರ್ಮಸ್ಥಳ ಮೇಳದ ಯಕ್ಷಗಾನ ಕಲಾವಿದ ಪುತ್ತೂರು ಗಂಗಾಧರ ಜೋಗಿ (59) ಹೃದಯಾಘಾತದಿಂದ ಮೃತ ಪಟ್ಟ ಘಟನೆ ಬುಧವಾರ ರಾತ್ರಿ ಕೋಟದಲ್ಲಿ ನಡೆದಿದೆ.
ಮೇ. 1 ರಂದು ರಾತ್ರಿ ಕೋಟದ ಚಿಂದನಂದ ಗೃಹಪ್ರವೇಶದ ಹಿನ್ನಲೆಯಲ್ಲಿ ಹಮ್ಮಿಕೊಂಡ ಧರ್ಮಸ್ಥಳ ಮೇಳದ ”ಧರ್ಮಸ್ಥಳ ಕ್ಷೇತ್ರ ಮಹಾತ್ಮೆ” ಯಕ್ಷಗಾನದಲ್ಲಿ ಪ್ರದರ್ಶನದಲ್ಲಿ ಪುತ್ತೂರು ಗಂಗಾಧರ ಜೋಗಿ ಅವರು ಕುಕ್ಕಿತ್ತಾಯ ವೇಷ ಮಾಡಿದ್ದರು. ನಂತರ ವೇಷ ಮುಗಿದ ಬಳಿಕ ಚೌಕಿಯಲ್ಲಿ ಬಣ್ಣ ತೆಗೆಯುತ್ತಿದ್ದಂತೆ ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಧರ್ಮಸ್ಥಳ ಮೇಳದಲ್ಲಿ 42 ವರ್ಷಗಳಿಂದ ನಿರಂತರ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು.
ಜೋಗಿಯವರ ಮೃತದೇಹವನ್ನು ಕುಂದಾಪುರ ಶವಗಾರಕ್ಕೆ ಸಾಗಿಸಲಾಗಿದೆ.

