• Home  
  • ಕೈಪುಂಜಾಲು ಗದ್ದಿಗೆಬೆಟ್ಟು ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನ : ಹಸಿರು ಹೊರೆ ಕಾಣಿಕೆ ಸಮರ್ಪಣೆ (Kaipunjalu Gaddige Bettu Babbu Swami Daivastana Horekanike)
- ದೈವ - ದೇವರು

ಕೈಪುಂಜಾಲು ಗದ್ದಿಗೆಬೆಟ್ಟು ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನ : ಹಸಿರು ಹೊರೆ ಕಾಣಿಕೆ ಸಮರ್ಪಣೆ (Kaipunjalu Gaddige Bettu Babbu Swami Daivastana Horekanike)

Share: ಕೈಪುಂಜಾಲು ಗದ್ದಿಗೆಬೆಟ್ಟು ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನ : ಹಸಿರು ಹೊರೆ ಕಾಣಿಕೆ ಸಮರ್ಪಣೆ ಕಾಪು, : ಸುಮಾರು 1.25 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ಧಾರಗೊಂಡಿರುವ ಕೈಪುಂಜಾಲು ಗದ್ದಿಗೆಬೆಟ್ಟು ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಜರಗಲಿರುವ ನೂತನ ಶಿಲಾಮಯ ಗರ್ಭಗುಡಿ ಸಮರ್ಪಣೆ, ದೈವಗಳ ಪುನರ್ ಪ್ರತಿಷ್ಠೆ, ಕುಂಭಾಭಿಷೇಕ ಹಾಗೂ ನೇಮೋತ್ಸವಕ್ಕೆ ಪೂರ್ವಭಾವಿಯಾಗಿ ಬೃಹತ್ ಹಸಿರು ಹೊರೆ ಕಾಣಿಕೆ ಸಮರ್ಪಿಸಲಾಯಿತು. ಮಹತೋಭಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಆಕರ್ಷಕ ಜಾನಪದ ಕಲಾತಂಡಗಳ ಪಾಲ್ಗೊಳ್ಳುವಿಕೆಯೊಂದಿಗೆ ವಿಜ್ರಂಭಣೆಯ ಹಸಿರು […]

ಕೈಪುಂಜಾಲು ಗದ್ದಿಗೆಬೆಟ್ಟು ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನ : ಹಸಿರು ಹೊರೆ ಕಾಣಿಕೆ ಸಮರ್ಪಣೆ

ಕಾಪು, : ಸುಮಾರು 1.25 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ಧಾರಗೊಂಡಿರುವ ಕೈಪುಂಜಾಲು ಗದ್ದಿಗೆಬೆಟ್ಟು ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಜರಗಲಿರುವ ನೂತನ ಶಿಲಾಮಯ ಗರ್ಭಗುಡಿ ಸಮರ್ಪಣೆ, ದೈವಗಳ ಪುನರ್ ಪ್ರತಿಷ್ಠೆ, ಕುಂಭಾಭಿಷೇಕ ಹಾಗೂ ನೇಮೋತ್ಸವಕ್ಕೆ ಪೂರ್ವಭಾವಿಯಾಗಿ ಬೃಹತ್ ಹಸಿರು ಹೊರೆ ಕಾಣಿಕೆ ಸಮರ್ಪಿಸಲಾಯಿತು.
 ಮಹತೋಭಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಆಕರ್ಷಕ ಜಾನಪದ ಕಲಾತಂಡಗಳ ಪಾಲ್ಗೊಳ್ಳುವಿಕೆಯೊಂದಿಗೆ ವಿಜ್ರಂಭಣೆಯ ಹಸಿರು ಹೊರೆ ಕಾಣಿಕೆ ಸಮರ್ಪಣಾ ಮೆರವಣಿಗೆ ನಡೆಯಿತು. ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ವಿವಿಧ ಭಜನಾ ತಂಡಗಳು, ಹುಲಿವೇಷ, ಡೋಲು ವಾದನ, ವಾದ್ಯ, ಬ್ಯಾಂಡ್, ವಿವಿಧ ವೇಷ ಭೂಷಣಗಳೊಂದಿಗೆ ದೈವಗಳ ನಗ ನಾಣ್ಯ ಪರಿಕರಗಳನ್ನು ಮೆರವಣಿಗೆಯ ಮೂಲಕವಾಗಿ ದೈವಸ್ಥಾನಕ್ಕೆ ತರಲಾಯಿತು.
  ಗದ್ದಿಗೆಬೆಟ್ಟು ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷರಾದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಗೌರವಾಧ್ಯಕ್ಷ ದೊಡ್ಡಣ್ಣ ಶೆಟ್ಟಿ ಬಾವುಗುತ್ತು, ಅಧ್ಯಕ್ಷ ಕಿರಣ್ ಆಳ್ವ ಬಾವುಗುತ್ತು, ಗೌರವ ಪ್ರಧಾನ ಕಾರ್ಯದರ್ಶಿಗಳಾದ ನಿತಿನ್ ಸಾಲಿಯಾನ್, ರಾಜ ಕೆ. ಸುವರ್ಣ, ಕೋಶಾಧಿಕಾರಿಗಳಾದ ಶೇಖರ್ ಶೆಟ್ಟಿ, ಜಯಕರ ಪೂಜಾರಿ, ಸದಾನಂದ ಕೈಪುಂಜಾಲು, ಗಣ್ಯರಾದ ಕಾಪು ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಗಣ್ಯರಾದ ಶ್ರೀಕರ ಶೆಟ್ಟಿ ಕಲ್ಯ, ಅರುಣ್ ಆಳ್ವ ಬಾವುಗುತ್ತು, ಮೋಹನ್ ಬಂಗೇರ ಕಾಪು, ರಘುರಾಮ ಶೆಟ್ಟಿ ಕೊಪ್ಪಲಂಗಡಿ, ಅನಿಲ್ ಕುಮಾರ್, ಪ್ರವೀಣ್ ಕುಂದರ್, ಪ್ರವೀಣ್ ಶ್ರೀಯಾನ್, ಸರ್ವೋತ್ತಮ ಕುಂದರ್, ರವಿ ಭಟ್ ಮಂದಾರ, ಚಂದ್ರಶೇಖರ್ ಅಮೀನ್, ದಯಾನಂದ ಶೆಟ್ಟಿ, ಹರೀಶ್ ಶೆಟ್ಟಿ, ಶಶಿಧರ್ ಸುವರ್ಣ, ಸೂರ್ಯನಾರಾಯಣ್, ರಮೇಶ್ ಪೂಜಾರಿ ಕೈಪುಂಜಾಲು, ಉಮೇಶ್ ಶೆಟ್ಟಿ ಕರಂದಾಡಿ, ಬಾಲಕೃಷ್ಣ ಕೋಟ್ಯಾನ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ಗುರಿಕಾರರು, ಹತ್ತು ಸಮಸ್ತರು ಹಾಗೂ ಸಮಾಜ ಭಾಂದವರು, ಊರ ಪರವೂರ ಭಗವದ್ಭಕ್ತರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.