ಹೆಜಮಾಡಿಯಲ್ಲಿಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
ಎಳೆಯರಲ್ಲಿ ರಾಷ್ಟ್ರ ಭಕ್ತಿ, ಧರ್ಮ ಜಾಗೃತಿ ಬೆಳಸಲು ಪ್ರೋತ್ಸಾಹಿಸಿ: ಮಾಲಿನಿ ಜೆ.ಹೆಗ್ಡೆ
(Hejamady) ಹೆಜಮಾಡಿ: ಯುವ ಜನತೆ ದಾರಿ ತಪ್ಪದಂತೆ ಜಾಗ್ರತೆ ವಹಿಸುವ ಜವಬ್ದಾರಿ ಹಿರಿಯರ ಮೇಲಿದೆ. ಎಳೆಯರಲ್ಲಿ ರಾಷ್ಟೃಪ್ರೇಮ ಹಾಗೂ ಧರ್ಮ ಜಾಗೃತಿ ಬೆಳೆಸಲು ನಾವು ಪ್ರೋತ್ಸಾಹಿಸಬೇಕು ಎಂದು ಮಂಗಳೂರು ಸನಾತನ ಸಂಸ್ಥೆಯ ಸಾಧಕಿ ಮಾಲಿನಿ ಜೆ.ಹೆಗ್ಡೆ (Malini J Hegde) ಹೇಳಿದರು.
ಹೆಜಮಾಡಿ ಮಟ್ಟುಪಟ್ಣದ ಮಟ್ಟು ವಿದ್ಯಾದಾಯಿನಿ ಯುವಕ-ಯುವತಿ ವೃಂದದ ವತಿಯಿಂದ ಮಟ್ಟುಪಟ್ಣ ಶ್ರೀ ಪಾಂಡುರಂಗ ವೇದಿಕೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ದೇವನಹಳ್ಳಿ ಟೋಲ್ ಪ್ಲಾಝಾದ ಸಿ.ಎಮ್.ಡಿ. ಯಜ್ಞೇಶ್ ಕರ್ಕೇರ (Yajnesh Karkera)ಸಮಾರಂಭ ಉದ್ಘಾಟಿಸಿ ಶುಭ ಹಾರೈಸಿದರು.
ಸನ್ಮಾನ: ಸಮಾರಂಭದಲ್ಲಿ ಸಾಧಕರ ನೆಲೆಯಲ್ಲಿ ನಿವೃತ್ತ ಸೈನಿಕ ನಾರಾಯಣ ಕರ್ಕೇರ, ರಾಜ್ಯ ಯುವ ಪ್ರಶಸ್ತಿ ವಿಜೇತ ಶ್ರೇಯಸ್ ಸಾಲ್ಯಾನ್, ಸನಾತನ ಸಂಸ್ಥೆಯ ಸಾಧಕರಾದ ಮಾಲಿನಿ ಜೆ. ಹೆಗ್ಡೆ ಮತ್ತು ಗಣೇಶ್ ಸಾಲ್ಯಾನ್, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜ್ಮಾಡಿಯವರನ್ನು ವೃಂದದ ವತಿಯಿಂದ ಸನ್ಮಾನಿಸಲಾಯಿತು.
ದ್ವಿತೀಯ ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವೈಶಾಖ್ ಡಿ.ಕರ್ಕೇರರವರನ್ನು ಪ್ರತಿಭಾ ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಹತ್ತನೇ ತರಗತಿ ಸಾಧಕ ಗೌರವ್ ಪುತ್ರನ್ರವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಬಹುಮಾನ ವಿತರಣೆ: ಮಟ್ಟಪಟ್ಣ ಶ್ರೀ ಪಾಂಡುರಂಗ ಭಜನಾ ಮಂದಿರದ ೮೨ನೇ ವರ್ಷಿಕ ಮಂಗಲೋತ್ಸವ ಮತ್ತು ಮಟ್ಟು ವಿದ್ಯಾದಾಯಿನಿ ಯುವಕ-ಯುವತಿ ವೃಂದದ ೪೨ನೇ ವಾರ್ಷಿಕೋತ್ಸವ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮಟ್ಟು ವಿದ್ಯಾದಾಯಿನಿ ಯುವಕ ವೃಂದದ ಅಧ್ಯಕ್ಷ ಭರತೇಶ್ ಡಿ. ಹೆಜ್ಮಾಡಿ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಬೆಂಗಳೂರಿನ ಯುವ ಉದ್ಯಮಿ ಚೆನ್ನಕೇಶವ ಎನ್. ಮೆಂಡನ್, ಅನಿವಾಸಿ ಉದ್ಯಮಿ ಕೇಶವ ಎನ್. ಶ್ರೀಯಾನ್ ವೆಸ್ಟ್ ಆಫ್ರಿಕ, ಮಟ್ಟು ಮೊಗವೀರ ಸಭಾದ ಮಾಜಿ ಅಧ್ಯಕ್ಷ ಬಾಲಕೃಷ್ಣ ಎಲ್.ಸುವರ್ಣ, ಮಾಲಿನಿ ಜೆ.ಹೆಗ್ಡೆ, ಹರೀಶ್ ಹೆಜ್ಮಾಡಿ ಮುಖ್ಯ ಅತಿಥಿಗಳಾಗಿದ್ದರು.
ಮಟ್ಟು ಮೊಗವೀರ ಸಭಾದ ಗುರಿಕಾರರಾದ ನೀಲಯ ಗುರಿಕಾರ ಮತ್ತು ಜಯರಾಮ ಗುರಿಕಾರ, ಗೌರವಾಧ್ಯಕ್ಷ ನಾರಾಯಣ ಕೆ. ಮೆಂಡನ್, ಅಧ್ಯಕ್ಷ ರಘುವೀರ ಎಲ್. ಸುವರ್ಣ, ಮಹಿಳಾ ಸಭಾ ಅಧ್ಯಕ್ಷೆ ನೂತನ್ ಮನೋಹರ್, ವಿದ್ಯಾದಾಯಿನಿ ಯುವತಿ ವೃಂದದ ಅಧ್ಯಕ್ಷೆ ಶೋಭಿತಾ ಹರೀಶ್, ಪಾಂಡುರಂಗ ಭಜನಾ ಮಂದಿರದ ಅರ್ಚಕ ವಿಜಯ ಕೆ. ಕೋಟ್ಯಾನ್, ಪುರಂದರ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲಿಖಿತ್ ಜಿ. ಕರ್ಕೇರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಿತಿನ್ ವಿ. ಹೆಜ್ಮಾಡಿ ವರದಿ ವಾಚಿಸಿದರು. ಶರಣ್ ಕುಮಾರ್ ಮಟ್ಟು ಕಾರ್ಯಕ್ರಮ ನಿರ್ವಹಿಸಿದರು. ಪವಿತ್ರಾ ಗಿರೀಶ್ ವಂದಿಸಿದರು.

