• Home  
  • ಧರ್ಮಸ್ಥಳ ಸ್ವಸಹಾಯ ಸಂಘದ ಕುರಿತಾಗಿ ಅಪಪ್ರಚಾರ: ಕ್ರಮಕ್ಕೆ ಒತ್ತಾಯಿಸಿ ಡಿವೈಎಸ್ಪಿಗೆ ದೂರು (Dharmasthala swa sahaya team: Complaint to DYSP to demanding  action)
- ಅಪರಾಧ - ವ್ಯವಹಾರ

ಧರ್ಮಸ್ಥಳ ಸ್ವಸಹಾಯ ಸಂಘದ ಕುರಿತಾಗಿ ಅಪಪ್ರಚಾರ: ಕ್ರಮಕ್ಕೆ ಒತ್ತಾಯಿಸಿ ಡಿವೈಎಸ್ಪಿಗೆ ದೂರು (Dharmasthala swa sahaya team: Complaint to DYSP to demanding  action)

Share: ಧರ್ಮಸ್ಥಳ ಸ್ವಸಹಾಯ ಸಂಘದ ಕುರಿತಾಗಿ ಅಪಪ್ರಚಾರ: ಕ್ರಮಕ್ಕೆ ಒತ್ತಾಯಿಸಿ ಡಿವೈಎಸ್ಪಿಗೆ ದೂರು ಬಂಟ್ವಾಳ: ಧರ್ಮಸ್ಥಳ ಸ್ವಸಹಾಯ ಸಂಘದ ಕುರಿತಾಗಿ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರಗತಿಬಂಧು ಸ್ವಸಹಾಯ ಸಂಘಗಳು, ಕೇಂದ್ರ ಒಕ್ಕೂಟ ಬಂಟ್ವಾಳ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಇದರ ನೇತೃತ್ವದ ನಿಯೋಗ ಬಂಟ್ವಾಳ ಉಪ ವಿಭಾಗದ ಡಿ.ವೈ.ಎಸ್. ಪಿ ಅವರಿಗೆ ಮಂಗಳವಾರ ದೂರು ಸಲ್ಲಿಸಿತು. ಕಡಬ ತಾ. ನ ಬಂಟ್ರಾ ಗ್ರಾಮದ ಮರ್ದಾಳ ನಿವಾಸಿ ಸಂತೋಷ್, ಮುಡಿಪು ಬಾಕ್ರಬೈಲಿನ ರವೀಂದ್ರ […]

ಧರ್ಮಸ್ಥಳ ಸ್ವಸಹಾಯ ಸಂಘದ ಕುರಿತಾಗಿ ಅಪಪ್ರಚಾರ: ಕ್ರಮಕ್ಕೆ ಒತ್ತಾಯಿಸಿ ಡಿವೈಎಸ್ಪಿಗೆ ದೂರು

ಬಂಟ್ವಾಳ: ಧರ್ಮಸ್ಥಳ ಸ್ವಸಹಾಯ ಸಂಘದ ಕುರಿತಾಗಿ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರಗತಿಬಂಧು ಸ್ವಸಹಾಯ ಸಂಘಗಳು, ಕೇಂದ್ರ ಒಕ್ಕೂಟ ಬಂಟ್ವಾಳ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಇದರ ನೇತೃತ್ವದ ನಿಯೋಗ ಬಂಟ್ವಾಳ ಉಪ ವಿಭಾಗದ ಡಿ.ವೈ.ಎಸ್. ಪಿ ಅವರಿಗೆ ಮಂಗಳವಾರ ದೂರು ಸಲ್ಲಿಸಿತು.
 ಕಡಬ ತಾ. ನ ಬಂಟ್ರಾ ಗ್ರಾಮದ ಮರ್ದಾಳ ನಿವಾಸಿ ಸಂತೋಷ್, ಮುಡಿಪು ಬಾಕ್ರಬೈಲಿನ ರವೀಂದ್ರ ಶೆಟ್ಟಿ ಮತ್ತವರ ಸಹಚರರು ಯೂಟ್ಯೂಬ್ ಚಾನಲ್ ಮೂಲಕ ಸಂಘದ ಅಂತರಿಕ ವ್ಯವಹಾರ, ಚಟುವಟಿಕೆಯ ಬಗ್ಗೆ ಸದಸ್ಯರಿಗೆ ತಪ್ಪು ಮಾಹಿತಿ ನೀಡಿ ಗೊಂದಲವನ್ನು ಸೃಷ್ಟಿಸುವುದಲ್ಲದೆ, ದ್ವೇಷದ ಭಾವನೆಗಳನ್ನು ಹುಟ್ಟುಹಾಕಿ ಸಂಘದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದಾರೆ.

ಹಾಗೆಯೇ ಸಾಲಗಳ ಕಂತನ್ನು ಕಟ್ಟದಂತೆ ಪ್ರಚೋದನೆಗೈದು, ಯೂಟ್ಯೂಬ್ ಚಾನಲ್, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಸಮಾಜದಲ್ಲಿ ಶಾಂತಿಯನ್ನು ಕದಡುವ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
  ಆರೋಪಿಗಳು ರಾತ್ರಿ ಹೊತ್ತಿನಲ್ಲಿ ಸದಸ್ಯರ ಮನೆಗೆ ತೆರಳಿ ತಪ್ಪು ಹೇಳಿಕೆ ನೀಡುವಂತೆ ಪೀಡಿಸುತ್ತಿದ್ದು, ಬಳಿಕ ಚಿತ್ರೀಕರಣಗೊಳಿಸಿ ಯುಟ್ಯೂಬ್ ನಲ್ಲಿ ಹರಿಯಬಿಡುತ್ತಿದ್ದಾರೆ. ಈ ಬಗ್ಗೆ ವಿವಿಧ ಠಾಣೆಗಳಲ್ಲಿ ದೂರು ದಾಖಲಿಸಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಂಟ್ವಾಳ ತಾಲೂಕಿನಲ್ಲಿ ಶ್ರೀ  ಕ್ಷೇ. ಧ. ಗ್ರಾ ಯೋಜನೆ ಪ್ರಾಯೋಜಿತ ಸ್ವ ಸಹಾಯ ಸಂಘ ಕಳೆದ 20 ವರ್ಷದಿಂದ ನಡೆಯುತ್ಿದ್ದು, 2755 ಸಂಘಗಳಿದ್ದು, 22841 ಪಾಲುದಾರ ಸದಸ್ಯರಿದ್ದಾರೆ. ಇದಕ್ಕೆ ಪೂರಕವಾಗಿ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟವಿದ್ದು, 71 ಒಕ್ಕೂಟಗಳು ತಾಲೂಕಿನಲ್ಲಿ ಕಾರ್ಯಾಚರಿಸುತ್ತದೆ. ಇದರ ಮೂಲಕ ಶಿಸ್ತುಬದ್ದವಾದ ವ್ಯವಹಾರ ನಡೆಸಿ ಯೋಜನೆ ಹಾಗೂ ಸರಕಾರದ ವಿವಿಧ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಲಾಗುತ್ತಿದೆ. ಸಂಘದ ಸದಸ್ಯರ ಆರ್ಥಿಕ ಅಭಿವೃದ್ಧಿಗಾಗಿ ಸಂಘಗಳಿಗೆ ಸಾಲ ಸೌಲಭ್ಯ ಪಡೆಯಲು ಅವಕಾಶ ನೀಡುತ್ತಿದೆಯಲ್ಲದೆ, ಸಂಘ ಕೂಡ ಶಿಸ್ತು ಬದ್ದವಾಗಿ ವ್ಯವಹಾರ ನಡೆಸುತ್ತಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಇದಕ್ಕೂ ಮೊದಲು ಸಂಘಗಳ ಪದಾಧಿಕಾರಿಗಳು ಬಿ.ಸಿ. ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು‌ ಜನಜಾಗೃತಿ ವೇದಿಕೆ ಅಧ್ಯಕ್ಷ ರೋನಾಲ್ಡ್ ಡಿಸೋಜ, ಒಕ್ಕೂಟದ ಪದಾಧಿಕಾರಿಗಳಾದ ಸದಾನಂದ ಗೌಡ ನಾವೂರ, ರಾಜೇಶ್ ಪಂಜಿಕಲ್ಲು, ಶೇಖರ ಸಾಮಾನಿ, ಕೃಷ್ಣ ಅಲ್ಲಿಪಾದೆ, ಆನಂದ ಪಂಜಿಕಲ್ಲು, ವಸಂತ ಮೂಲ್ಯ ಟೈಲರ್, ಮಹಮ್ಮದ್ ಶರೀಫ್, ಸರಸ್ವತಿ ಆಳ್ವ ಅರಳ, ವಸಂತಿ ಮೆಲ್ಕಾರ್, ನಮೃತಾ ಪುಂಜಾಲಕಟ್ಟೆ, ವಿಜಯ ನಾವೂರ, ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಬಂಟ್ವಾಳ ತಾ. ಯೋಜನಾಧಿಕಾರಿ ಬಾಲಕೃಷ್ಣ ಮೊದಲಾದವರಿದ್ದರು.
ಡಿವೈಎಸ್ಪಿ ವಿಜಯಪ್ರಸಾದ್ ಅವರ ಗೈರು ಹಾಜರಾತಿಯಲ್ಲಿ ಹೆಡ್ ಕಾನ್ಸ್ ಟೇಬಲ್ ಜಗನ್ನಾಥ ಶೆಟ್ಟಿ ಅವರು ದೂರನ್ನು ಸ್ವೀಕರಿಸಿದರು.

ಈ ಸಂದರ್ಭ ದೂರವಾಣಿ ಮೂಲಕ ಸಂಘದ ಪದಾಧಿಕಾರಿಗಳ ಜೊತೆ ಮಾತನಾಡಿದ ಡಿವೈಎಸ್ಪಿಯವರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.