• Home  
  •  ಉಚ್ಚಿಲ ಸರಸ್ವತಿ ಮಂದಿರ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ (World Envirvonment day Celebration at Uchila Sarasvathi Mandira School Campus)
- social service - ವಿಡಿಯೋ - ಶಾಲಾ ಕಾಲೇಜು

 ಉಚ್ಚಿಲ ಸರಸ್ವತಿ ಮಂದಿರ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ (World Envirvonment day Celebration at Uchila Sarasvathi Mandira School Campus)

Share: ಉಚ್ಚಿಲ ಸರಸ್ವತಿ ಮಂದಿರ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ (Uchila) ಉಚ್ಚಿಲ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬುಧವಾರ  ಉಚ್ಚಿಲ ಸರಸ್ವತಿ ಮಂದಿರ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಆಚರಿಸಲಾಯಿತು.   ಪರಿಸರ ಪ್ರೇಮಿ ಹಾಗೂ ಖ್ಯಾತ ಕಲಾವಿದೆ ಪಡುಬಿದ್ರಿಯ ಶ್ರೀಮತಿ ರೂಪ ವಸುಂದರಾ ಆಚಾರ್ಯ ರವರು ಸಸಿಗಳನ್ನು ನಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು. ಈ ಸಂದರ್ಭ ರೂಪ ವಸುಂದರಾ ಆಚಾರ್ಯ ರವರು ಮಾತನಾಡಿ, ಪರಿಸರದ ಸಮತೋಲನಕ್ಕೆ ಮರಗಿಡಗಳು […]

ಉಚ್ಚಿಲ ಸರಸ್ವತಿ ಮಂದಿರ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ

(Uchila) ಉಚ್ಚಿಲ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬುಧವಾರ  ಉಚ್ಚಿಲ ಸರಸ್ವತಿ ಮಂದಿರ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಆಚರಿಸಲಾಯಿತು.  

ಪರಿಸರ ಪ್ರೇಮಿ ಹಾಗೂ ಖ್ಯಾತ ಕಲಾವಿದೆ ಪಡುಬಿದ್ರಿಯ ಶ್ರೀಮತಿ ರೂಪ ವಸುಂದರಾ ಆಚಾರ್ಯ ರವರು ಸಸಿಗಳನ್ನು ನಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.

ಈ ಸಂದರ್ಭ ರೂಪ ವಸುಂದರಾ ಆಚಾರ್ಯ ರವರು ಮಾತನಾಡಿ, ಪರಿಸರದ ಸಮತೋಲನಕ್ಕೆ ಮರಗಿಡಗಳು ಸಹಕಾರಿ. ವಿದ್ಯಾರ್ಥಿಗಳು ತಮ್ಮ ಮನೆಯಂಗಳದಲ್ಲಿ ಗಿಡ ನಡುವ ಅಭ್ಯಾಸ ಮಾಡಬೇಕೆಂದ ಅವರು, ವಿಶ್ವ ಪರಿಸರ ದಿನಾಚರಣೆಗೆ ಶುಭ ಹಾರೈಸಿದರು.

ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯರಾದ ಬಾಬುರಾಯ ಆಚಾರ್ಯ, ಪ್ರಾಥಮಿಕ ಶಾಲಾ ಸಂಚಾಲಕ ಮೋಹನದಾಸ ಶೆಟ್ಟಿ, ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಗೀತಾ ವೈ, ಪ್ರೌಡ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಆಶಾ ದಿನೇಶ್‌ ಸುವರ್ಣ, ಪ್ರಾಥಮಿಕ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಕಲಾವತಿ ಆಚಾರ್ಯ, ಸಹ ಶಿಕ್ಷಕರು,  

ಶಾಲಾ ಮುಖ್ಯೋಪಾಧ್ಯಾಯ ಬಾಬುರಾಯ ಆಚಾರ್ಯ ಪ್ರಾಸ್ತಾವಿವಾಗಿ ಮಾತನಾಡಿ ಸ್ವಾಗತಿಸಿದರು.

ಶಿಕ್ಷಕಿ ಶ್ರೀಮತಿ ಜ್ಯೋತಿ ನಿರೂಪಿಸಿದರು. ಮಮತಾ  ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.