• Home  
  • ಬಂಟ್ವಾಳ: ಸರಕಾರಿ ನೌಕರರ ಪ್ರತಿಭಟನೆ 7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹ (Bantwala : Govt employees protest and demand implementation of 7th pay commission report) 
- protest

ಬಂಟ್ವಾಳ: ಸರಕಾರಿ ನೌಕರರ ಪ್ರತಿಭಟನೆ 7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹ (Bantwala : Govt employees protest and demand implementation of 7th pay commission report) 

Share: ಬಂಟ್ವಾಳ: ಸರಕಾರಿ ನೌಕರರ ಪ್ರತಿಭಟನೆ 7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹ   ಬಂಟ್ವಾಳ: ರಾಜ್ಯದ ವಿವಿಧ ಇಲಾಖೆಗಳಲ್ಲಿ ಒಟ್ಟು 2.60 ಲಕ್ಷ ಹುದ್ದೆ ಖಾಲಿ ಇದ್ದರೂ, ಸರಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಜೊತೆಗೆ ಜಿಎಎಸ್‌ಟಿ ತೆರಿಗೆ ಸಂಗ್ರಹದಲ್ಲಿ ದೇಶಕ್ಕೆ ಮಾದರಿ ಎಂಬಂತೆ ದುಡಿಯುತ್ತಿರುವ 6 ಲಕ್ಷ ಸರಕಾರಿ ನೌಕರರಿಗೆ 7ನೇ ವೇತನ ಆಯೋಗ ವರದಿ ಯಥಾವತ್ತಾಗಿ ಕೂಡಲೇ ಜಾರಿಗೊಳಿಸಿ ಆದೇಶ ಹೊರಡಿಸಬೇಕು ಎಂದು ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ […]

ಬಂಟ್ವಾಳ: ಸರಕಾರಿ ನೌಕರರ ಪ್ರತಿಭಟನೆ 7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹ 

 ಬಂಟ್ವಾಳ: ರಾಜ್ಯದ ವಿವಿಧ ಇಲಾಖೆಗಳಲ್ಲಿ ಒಟ್ಟು 2.60 ಲಕ್ಷ ಹುದ್ದೆ ಖಾಲಿ ಇದ್ದರೂ, ಸರಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಜೊತೆಗೆ ಜಿಎಎಸ್‌ಟಿ ತೆರಿಗೆ ಸಂಗ್ರಹದಲ್ಲಿ ದೇಶಕ್ಕೆ ಮಾದರಿ ಎಂಬಂತೆ ದುಡಿಯುತ್ತಿರುವ 6 ಲಕ್ಷ ಸರಕಾರಿ ನೌಕರರಿಗೆ 7ನೇ ವೇತನ ಆಯೋಗ ವರದಿ ಯಥಾವತ್ತಾಗಿ ಕೂಡಲೇ ಜಾರಿಗೊಳಿಸಿ ಆದೇಶ ಹೊರಡಿಸಬೇಕು ಎಂದು ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಉಮಾನಾಥ ರೈ ಮೇರಾವು ಆಗ್ರಹಿಸಿದರು.
 ಸರಕಾರಿ ನೌಕರರ ಸಂಘ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಬಿ.ಸಿ.ರೋಡು ಆಡಳಿತಸೌಧ ಎದುರು ಶುಕ್ರವಾರ ಸಂಜೆ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

 ಫೆ. 27ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸುಮಾರು 2.50 ಲಕ್ಷ ಸರಕಾರಿ ನೌಕಕರ ಸಮ್ಮುಖದಲ್ಲಿ ಈ ಬಗ್ಗೆ ಭರವಸೆ ನೀಡಿದ್ದರೂ ಆದೇಶ ಜಾರಿಗೊಳಿಸಲು ವಿಳಂಬವಾಗುತ್ತಿದೆ.

 ರಾಜ್ಯದಲ್ಲಿ ಖಾಲಿ ಇರುವ ಒಟ್ಟು 2.60ಲಕ್ಷ ಹುದ್ದೆಗಳ ಹೆಚ್ಚುವರಿ ಕೆಲಸವನ್ನೂ ಹಾಲಿ ಸರಕಾರಿ ನೌಕರರು ನಿರ್ವಹಿಸುವ ಮೂಲಕ ಸುಮಾರು ರೂ 8500 ಕೋಟಿ ಮೊತ್ತ ಸರಕಾರಕ್ಕೆ ಉಳಿತಾಯವಾಗುತ್ತಿದೆ. ನೂತನ ಪಿಂಚಣಿ ಯೋಜನೆಗೆ ಬದಲಾಗಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಸರಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಯಡಿ ನಗದು ರಹಿತ ಚಿಕಿತ್ಸೆ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಆಗ್ರಹಿಸಿದರು.

 ನಿವೃತ್ತ ಪಿಂಚಣಿದಾರರ ಸಂಘದ ಅಧ್ಯಕ್ಷ ಲೋಕನಾಥ ಶೆಟ್ಟಿ, ಸಂಘದ ಕಾರ್ಯದರ್ಶಿಸಂತೋಷ್ ಕುಮಾರ್ ತುಂಬೆ, ಪ್ರಮುಖರಾದ ಜೋಯೆಲ್ ಲೋಬೋ, ಶಮಂತ್, ಮಂಜುನಾಥ್ ಕೆ., ಬಸಯ್ಯ ಆಲಿಮಟ್ಟಿ, ನೋಣಯ ನಾಯ್ಕ್, ರಾಜೇಂದ್ರ ರೈ, ಇಂದುಶೇಖರ್ ಮತ್ತಿತರರಿದ್ದರು.

ತಹಶೀಲ್ದಾರ್ ಅರ್ಚನಾ ಡಿ. ಭಟ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.