ಕಾಪು ಎಸ್ಕೆಪಿಎ ವತಿಯಿಂದ ಗೋಶಾಲೆಯಲ್ಲಿ ಗೋಪೂಜೆ
ಗೋಶಾಲೆಗೆ ಗೋ ಗ್ರಾಸ ಹಾಗೂ ಹಿಂಡಿ ವಿತರಿಸಿದ ಸಂಸ್ಥೆಯ ಸದಸ್ಯರು
(Kaup) ಕಾಪು: ದೀಪಾವಳಿ ಹಬ್ಬದ ಪ್ರಯುಕ್ತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ಎಸ್ಕೆಪಿಎ) ಕಾಪು ವಲಯದ ವತಿಯಿಂದ ಕಾಪು ಶ್ರೀ ಜನಾರ್ದನ ದೇವಸ್ಥಾನದ ಬಳಿಯ ಗೋ ಶಾಲೆಯಲ್ಲಿ ಗೋಪೂಜೆ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.
ಎಸ್ಕೆಪಿಎ ವಲಯದ ಸದಸ್ಯರು ಕುಟುಂಬ ಸಮೇತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗೋಶಾಲೆಗೆ ಗೋ ಗ್ರಾಸ ಹಾಗೂ ಹಿಂಡಿಯನ್ನು ವಿತರಿಸುವ ಮೂಲಕ ಗೋ ಸೇವೆಯಲ್ಲಿ ತೊಡಗಿಸಿಕೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಎ ಮಾಜಿ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್, ಕಾಪು ವಲಯವು ಸಂಘಟನೆಯ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿಯೂ ನಿರಂತರವಾಗಿ ತೊಡಗಿಸಿಕೊಂಡು ಮಾದರಿ ಸಂಘಟನೆಯಾಗಿ ಬೆಳೆದಿದೆ. ದೀಪಾವಳಿಯ ಸಂದರ್ಭದಲ್ಲಿ ಗೋಶಾಲೆಗೆ ಅಗತ್ಯ ವಸ್ತುಗಳನ್ನು ಒದಗಿಸಿ, ಗೋಮಾತೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ವಲಯ ಅಧ್ಯಕ್ಷ ಸಂತೋಷ್ ಉಳಿಯಾರು, ಜಿಲ್ಲಾ ಛಾಯಾ ಕಾರ್ಯದರ್ಶಿ ರಾಜೇಶ್ ಶಂಕರಪುರ, ಕಾರ್ಯದರ್ಶಿ ಪ್ರಕಾಶ್ ಆಚಾರ್ಯ, ಉಪಾಧ್ಯಕ್ಷರಾದ ದೀಪಕ್ ಶೆಣೈ ಮತ್ತು ಸಂತೋಷ್ ಕಟಪಾಡಿ, ಕೋಶಾಧಿಕಾರಿ ಕಿರಣ್ ಕಾಪು, ಮಾಜಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಐತಾಳ್, ವಿರೇಂದ್ರ ಶಿರ್ವ, ವಿನೋದ್ ಕಾಂಚನ್, ಸಚಿನ್ ಉಚ್ಚಿಲ, ಪದಾಧಿಕಾರಿಗಳಾದ ಸುರೇಶ್ ಎರ್ಮಾಳು, ಯೋಗೀಶ್ ಕಾಪು, ವಿಶ್ವನಾಥ ಕಾಪು, ಸುಜಿತ್ ಮಡುಂಬು, ಸುರೇಶ್ ನಾಯ್ಕ ಉಪಸ್ಥಿತರಿದ್ದರು.

