ಉಡುಪಿ: ಸೈಂಟ್ ಮೇರಿಸ್ ಹೈಸ್ಕೂಲ್ ಇಂಟರಾಕ್ಟ್ ಪದಗ್ರಹಣ
ಉಡುಪಿ: ಉಡುಪಿ ರೋಟರಿ ಕ್ಲಬ್ ಪ್ರಾಯೋಜಿತ ಸೈಂಟ್ ಮೇರಿಸ್ ಇಂಟರಾಕ್ಟ್ ಕ್ಲಬ್ನ ಪದಗ್ರಹಣ ಸಮಾರಂಭ ಶಾಲಾ ವಠಾರದಲ್ಲಿ ನೆರವೇರಿತು.
ಮಾಜಿ ಅಸಿಸ್ಟೆಂಟ್ ಗವರ್ನರ್ ರೋ. ಡಾ. ಸುರೇಶ್ ಶೆಣೈಯವರು ಇಂಟರಾಕ್ಟ್ ಅಧ್ಯಕ್ಷ ರಚನ್ ಮತ್ತು ಕಾರ್ಯದರ್ಶಿ ನಾಗರಾಜ್ ಅವರಿಗೆ ಪದಪ್ರಧಾನ ನೆರೆವೆರಿಸಿ ಶುಭ ಹಾರೈಸಿದರು.
ರೋ. ಡಾ. ಸುರೇಶ್ ಶೆಣೈ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷೆಯ ಬಗ್ಗೆ ಮಾಹಿತಿ ನೀಡಿದರು.
ರೋಟರಿ ಅಧ್ಯಕ್ಷ ರೋ. ಗುರುರಾಜ ಭಟ್, ಇಂಟರಾಕ್ಟ್ ಸಭಾಪತಿ ರೋ. ಸಾಧನಾ ಮುಂಡ್ಕೂರ್, ಶುಭ ಹಾರೈಸಿದರು.
ಇಂಟರಾಕ್ಟ್ ಶಿಕ್ಷಕ, ಸಂಯೋಜಕ ಜಯಪ್ರಕಾಶ್ ಶೆಟ್ಟಿ ಯವರು ಕಾರ್ಯಕ್ರಮ ಸಂಯೋಜಿಸಿದ್ದರು.
ರೋ. ರಾಮಚಂದ್ರ ಉಪಾಧ್ಯಾಯ, ಕಾರ್ಯದರ್ಶಿ ರೋ. ವೈಷ್ಣವಿ ಆಚಾರ್ಯ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಜೋಯ್ಸ್ ಡೇಸಾ ಸ್ವಾಗತಿಸಿದರು. ಶಾಲಾ ಶಿಕ್ಷಕಿ ಪ್ರತಿಮಾ ವಂದಿಸಿದರು.

