• Home  
  •  ಉಡುಪಿ : ಸೆಕ್ಯೂರಿಟಿ ಗಾರ್ಡ್‌ನಿಂದ ಮ್ಯಾನೇಜರ್ ಗೆ ಚೂರಿ ಇರಿತ (Udupi: Manager stabbed by security guard) 
- Uncategorised

 ಉಡುಪಿ : ಸೆಕ್ಯೂರಿಟಿ ಗಾರ್ಡ್‌ನಿಂದ ಮ್ಯಾನೇಜರ್ ಗೆ ಚೂರಿ ಇರಿತ (Udupi: Manager stabbed by security guard) 

Share: ಉಡುಪಿ : ಸೆಕ್ಯೂರಿಟಿ ಗಾರ್ಡ್‌ನಿಂದ ಮ್ಯಾನೇಜರ್ ಗೆ ಚೂರಿ ಇರಿತ  ಚೂರಿ ಇರಿತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ (Udupi) ಉಡುಪಿ: ಉಡುಪಿಯ ಶೋರೂಂ  ಒಂದರ ಮ್ಯಾನೇಜರ್‌ಗೆ ಅದೇ ಶೋರೂಂನ ಸೆಕ್ಯೂರಿಟಿ ಗಾರ್ಡ್ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿದ ಘಟನೆ ಮಂಗಳವಾರ ಘಟಿಸಿದೆ.  ಸೆಕ್ಯೂರಿಟಿ ಗಾರ್ಡ್ ಕಾದು ನಿಂತು ಮೆನೇಜರ್‌ನನ್ನು ಬೆನ್ನಟ್ಟಿ ಚೂರಿಯಿಂದ ಇರಿದಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸರಿಯಾಗಿದೆ.  ಶೋರೂಂನ ಕ್ಲಸ್ಟರ್ ಮ್ಯಾನೇಜರ್  ರೋನ್ಸನ್ ಎವರೆಸ್ಟ್ (36) ಇರಿತಕ್ಕೊಳಗಾದವರು. ಅದೇ ಸಂಸ್ಥೆಯಲ್ಲಿ […]

ಉಡುಪಿ : ಸೆಕ್ಯೂರಿಟಿ ಗಾರ್ಡ್‌ನಿಂದ ಮ್ಯಾನೇಜರ್ ಗೆ ಚೂರಿ ಇರಿತ 

ಚೂರಿ ಇರಿತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

(Udupi) ಉಡುಪಿ: ಉಡುಪಿಯ ಶೋರೂಂ  ಒಂದರ ಮ್ಯಾನೇಜರ್‌ಗೆ ಅದೇ ಶೋರೂಂನ ಸೆಕ್ಯೂರಿಟಿ ಗಾರ್ಡ್ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿದ ಘಟನೆ ಮಂಗಳವಾರ ಘಟಿಸಿದೆ.

 ಸೆಕ್ಯೂರಿಟಿ ಗಾರ್ಡ್ ಕಾದು ನಿಂತು ಮೆನೇಜರ್‌ನನ್ನು ಬೆನ್ನಟ್ಟಿ ಚೂರಿಯಿಂದ ಇರಿದಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸರಿಯಾಗಿದೆ.

 ಶೋರೂಂನ ಕ್ಲಸ್ಟರ್ ಮ್ಯಾನೇಜರ್  ರೋನ್ಸನ್ ಎವರೆಸ್ಟ್ (36) ಇರಿತಕ್ಕೊಳಗಾದವರು. ಅದೇ ಸಂಸ್ಥೆಯಲ್ಲಿ  ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ಪ್ರಸಾದ್ ಚೂರಿಯಿಂದ ಇರಿದ ಆರೋಪಿ.

 ಕೆಲಸದಲ್ಲಿ ಅಶಿಸ್ತು ತೋರಿದ್ದಕ್ಕಾಗಿ ಪ್ರಸಾದ್ ಗೆ ವಾರ್ನಿಂಗ್ ನೀಡಲಾಗಿತ್ತು. ಕೆಲಸದಿಂದ ತೆಗೆಯದಂತೆ ರೋನ್ಸನ್ ಬಳಿ ಪ್ರಸಾದ್ ವಿನಂತಿಸಿದ್ದ ಎನ್ನಲಾಗಿದೆ. ಮರುದಿನ ಮೀಟಿಂಗ್ ನಲ್ಲಿ ಚರ್ಚಿಸುವುದಾಗಿ ಮ್ಯಾನೇಜರ್ ರೋನ್ಸನ್ ಹೇಳಿದ್ದರು. ಆದರೆ ಮಾತುಕತೆ ಬಳಿಕ ತಳ ಅಂತಸ್ತಿನಲ್ಲಿ ಕಾದು ಕುಳಿತಿದ್ದ ಆರೋಪಿ ಪ್ರಸಾದ್, ಕ್ಲಸ್ಟರ್ ಮ್ಯಾನೇಜರ್ ರೋನ್ಸನ್ ಬರುತ್ತಿದ್ದಂತೆ ಕಾದುನಿಂತು ಚೂರಿ ಇರಿದಿದ್ದಾನೆ.

ಪ್ರಾಣಾಪಾಯ ಅರಿತು ಓಟಕ್ಕಿತ್ತ ರೋನ್ಸನ್ ರನ್ನು ಆರೋಪಿ ಬೆನ್ನಟ್ಟಿ ಹೋಗಿ ಕೊಲೆಗೆ ಯತ್ನ ನಡೆಸಿದ್ದಾನೆ.

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.