ಹೆಜಮಾಡಿ : ಕರಾವಳಿ ಯುವಕ, ಯುವತಿ ವೃಂದದಿಂದ 78ನೇ ಸ್ವಾತಂತ್ರ್ಯ ದಿನಾಚರಣೆ, ಬೀಚ್ ಸ್ವಚ್ಛತಾ ಅಭಿಯಾನ
(Hejamdi) ಹೆಜಮಾಡಿ: ಕರಾವಳಿ ಯುವಕ -ಯುವತಿ ವೃಂದದ ಹೆಜಮಾಡಿಯ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಹೆಜಮಾಡಿ ಗ್ರಾಮ ಪಂಚಾಯತ್ ಸಹಯೋಗ ದೊಂದಿಗೆ ನಡೆದ “ಸ್ವಚ್ಛ ಕಡಲ ಕಿನಾರೆ” ಬೃಹತ್ ಬೀಚ್ ಸ್ವಚ್ಛತಾ ಅಭಿಯಾನ ಗುರುವಾರ ಯಶಸ್ವಿಯಾಗಿ ನೆರವೇರಿತು.
ಧ್ವಜಾರೋಹಣವನ್ನು ಮಸ್ಕತ್ನ ಉದ್ಯಮಿ ಹರೀಶ್ ಮಸ್ಕತ್ ನೆರವೇರಿಸಿದರು.
ಸ್ವಚ್ಛತಾ ಅಭಿಯಾನಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೇಷ್ಮಾ ಎ ಮೆಂಡನ್ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ಪಂಚಾಯತ್ ಉಪಾಧ್ಯಕ್ಷ ಮೋಹನ್ ಸುವರ್ಣ, ಪಂಚಾಯತ್ ಅಭಿವೃದ್ಧಿ ಇನಾಯತ್ ಉಲ್ಲಾಬೇಗ್, ಹೇಮಾನಂದ ಕೆ ಪುತ್ರನ್, ಲಾಲಾಜಿ ಎಸ್ ಸುವರ್ಣ, ಮಾಧವ ಸನಿಲ್, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಫರೀಧಾ, ಸಂಧರ್ಭೋಚಿತವಾಗಿ ಮಾತಾಡಿದರು.
ಅಧ್ಯಕ್ಷತೆಯನ್ನು ಯುವಕ ವೃಂದದ ಅಧ್ಯಕ್ಷರಾದ ಶ್ರೀ ಎಸ್ ದಿವಾಕರ ಹೆಜ್ಮಾಡಿ ಯವರು ವಹಿಸಿದ್ದರು..
ವೇದಿಕೆಯಲ್ಲಿ ಯುವತಿ ವೃಂದದ ಅಧ್ಯಕ್ಷೆ ಶ್ರೀಮತಿ ರೂಪಾ ಹೇಮಾನಂದ ಪುತ್ರನ್, ಸಂಸ್ಥೆಯ ಗೌರವಾಧ್ಯಕ್ಷರಾದ ದಿನೇಶ್ ಸುವರ್ಣ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಸಂಪತ್ ಸನಿಲ್ ನಿರೂಪಿಸಿದರು. ಜೊತೆ ಕಾರ್ಯದರ್ಶಿ ರಂಜನ್ ಕೋಟ್ಯಾನ್ ವಂದಿಸಿದರು.

