• Home  
  • ಉಡುಪಿ ಜಿಲ್ಲಾ ಎಸ್‌ವೈಎಸ್‌ ನಿಂದ 78 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರ ರಕ್ಷಾ ಸಂಗಮ (78th Indipendent Celebration for SYS Udupi)
- fastival

ಉಡುಪಿ ಜಿಲ್ಲಾ ಎಸ್‌ವೈಎಸ್‌ ನಿಂದ 78 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರ ರಕ್ಷಾ ಸಂಗಮ (78th Indipendent Celebration for SYS Udupi)

Share: ಉಡುಪಿ ಜಿಲ್ಲಾ ಎಸ್‌ವೈಎಸ್‌ ನಿಂದ 78 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರ ರಕ್ಷಾ ಸಂಗಮ (Udupi) ಉಡುಪಿ:  ಕೋಮುವಾದ ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗಿದ್ದು ಕೋಮವಾದವನ್ನು ಅಳಿಸಿ ಪ್ರೀತಿ ಬೆಳೆಸೋಣ ಎಂದು  ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಮುಶಾವರ ಸದಸ್ಯರಾದ ಶೆೃಖುನಾ ಅಲ್ ಹಾಜ್ ಉಸ್ಮಾನ್ ಫೆೃಝಿ ಹೇಳಿದರು. ಗುರುವಾರ 78 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಎಸ್ ವೈಎಸ್ ಆಯೋಜಿಸಿದ ರಾಷ್ಟ್ರ ರಕ್ಷಾ ಸಂಗಮವನ್ನು ಉದ್ಘಾಟಿಸಿ ಮಾತನಾಡಿದರು. ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶದ […]

ಉಡುಪಿ ಜಿಲ್ಲಾ ಎಸ್‌ವೈಎಸ್‌ ನಿಂದ 78 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರ ರಕ್ಷಾ ಸಂಗಮ

(Udupi) ಉಡುಪಿ:  ಕೋಮುವಾದ ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗಿದ್ದು ಕೋಮವಾದವನ್ನು ಅಳಿಸಿ ಪ್ರೀತಿ ಬೆಳೆಸೋಣ ಎಂದು  ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಮುಶಾವರ ಸದಸ್ಯರಾದ ಶೆೃಖುನಾ ಅಲ್ ಹಾಜ್ ಉಸ್ಮಾನ್ ಫೆೃಝಿ ಹೇಳಿದರು.

ಗುರುವಾರ 78 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಎಸ್ ವೈಎಸ್ ಆಯೋಜಿಸಿದ ರಾಷ್ಟ್ರ ರಕ್ಷಾ ಸಂಗಮವನ್ನು ಉದ್ಘಾಟಿಸಿ ಮಾತನಾಡಿದರು.

ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶದ ಭವ್ಯ ಪರಂಪರೆಯನ್ನು ಮುಂದಿನ ತಲೆ ಮಾರಿಗೆ  ತಲುಪಿಸುವ ಹೊಣೆಗಾರಿಕೆ ನಮ್ಮದಾಗಿದೆ ಎಂದು ಹೇಳಿದ ಫೆೃಝಿಯವರು, ಸಮಸ್ತವು ಈ ನಿಟ್ಟಿನಲ್ಲಿ ಸಮುದಾಯವನ್ನು ಮುನ್ನಡೆಸುತ್ತಿದೆ ಎಂದು ಹೇಳಿದರು.

ಎರ್ಮಾಳ್ ಜುಮಾ ಮಸೀದಿ ಧರ್ಮಗುರುಗಳಾದ ಮುಹಮ್ಮದ್ ಶಬೀರ್ ಫೆೃಝಿಯವರು ದುವಾದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ  ನೀಡಿದರು.

ಸೇಕ್ರ್ರೆಡ್ ಹಾರ್ಟ್ ಚರ್ಚ್ ಧರ್ಮಗುರುಗಳಾದ ಫಾದರ್ ಜೊಸ್ಸಿ ಫರ್ನಾಂಡೀಸ್ ದಿಕ್ಸೂಚಿ ಭಾಷಣ ಮಾಡಿದರು.

 ಎಸ್ ವೈಎಸ್ ಉಡುಪಿ ಜಿಲ್ಲಾಧ್ಯಕ್ಷ ಹಾಜಿ ಎಂ.ಪಿ ಮೊೃದಿನಬ್ಬ ಅಧ್ಯಕ್ಷತೆ ವಹಿಸಿದ್ದರು.

  ಎರ್ಮಾಳ್ ಮಸೀದಿ ಅಧ್ಯಕ್ಷ ಮಹಮ್ಮದ್ ಶರೀಫ್, ನಿಟ್ಟೆ ಕತೀಬ್ ಮಹಮ್ಮದ್ ಫಾರೂಕ್ ಹನೀಫಿ, ಫಲಿಮಾರು ಖತೀಬ್ ಅಬ್ದುಲ್ ಸಲಾಂ ತುಂಬೆ, ಉಡುಪಿ ರೇಂಜ್ ಮದ್ರಸ ಮನೇಜ್ ಮೆಂಟ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಕುಚ್ಚಿಕಾಡ್, ಹಾಜಿ ಹಮ್ಮಬ್ಬ ಮೊೃದೀನ್, ಹಾಜಿ ಅಬ್ದುಲ್ ರಹ್ಮಾನ್ ಕಣ್ಣಂಗಾರ್, ಹಾಜಿ ಸುಲೈಮಾನ್ ಸುರಭಿ, ಹಾಜಿ ಇಜ್ಜಬ್ಬ, ಬಶೀರ್ ಯೂಸುಫ ಮತ್ತಿತರರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.