• Home  
  •  ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ವಿದ್ಯುತ್ ಚಾಲಿತ ವಾಹನ ಹಸ್ತಾಂತರ (Handover of electric buggy vehicle to Uchila Sri Mahalaxmi Temple)
- social service - ವಿಡಿಯೋ

 ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ವಿದ್ಯುತ್ ಚಾಲಿತ ವಾಹನ ಹಸ್ತಾಂತರ (Handover of electric buggy vehicle to Uchila Sri Mahalaxmi Temple)

Share: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ವಿದ್ಯುತ್ ಚಾಲಿತ ವಾಹನ ಹಸ್ತಾಂತರ (Uchila) ಉಚ್ಚಿಲ : ಕರ್ನಾಟಕ ಬ್ಯಾಂಕಿನ ಸಿ.ಎಸ್.ಆರ್ ಅನುದಾನದಿಂದ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ  ಸುಮಾರು 5,20,750 ಮೊತ್ತದ 6 ಆಸನಗಳ ವಿದ್ಯುತ್ ಚಾಲಿತ ವಾಹನವನ್ನು ಗುರುವಾರ ಸಂಜೆ ದೇವಸ್ಥಾನಕ್ಕೆ ಹಸ್ತಾಂತರಿಸಿದರು. ಮೊಗವೀರ ಮುಂದಾಳು, ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರದ ರುವಾರಿ ನಾಡೋಜಾ ಡಾ. ಜಿ ಶಂಕರ್‌ರವರಿಗೆ ಕರ್ನಾಟಕ ಬ್ಯಾಂಕಿನ ಉಡುಪಿ ರೀಜನಲ್ ಹೆಡ್  ವಾದಿರಾಜ ಭಟ್‌ರವರು ವಾಹನದ ಕೀಲಿಕೈಯನ್ನು ಹಸ್ತಾಂತರಿಸಿದರು.  ಮೊದಲಿಗೆ ದೇವಳದ ಅರ್ಚಕ ವೇದಮೂರ್ತಿ […]

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ವಿದ್ಯುತ್ ಚಾಲಿತ ವಾಹನ ಹಸ್ತಾಂತರ

(Uchila) ಉಚ್ಚಿಲ : ಕರ್ನಾಟಕ ಬ್ಯಾಂಕಿನ ಸಿ.ಎಸ್.ಆರ್ ಅನುದಾನದಿಂದ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ  ಸುಮಾರು 5,20,750 ಮೊತ್ತದ 6 ಆಸನಗಳ ವಿದ್ಯುತ್ ಚಾಲಿತ ವಾಹನವನ್ನು ಗುರುವಾರ ಸಂಜೆ ದೇವಸ್ಥಾನಕ್ಕೆ ಹಸ್ತಾಂತರಿಸಿದರು.

ಮೊಗವೀರ ಮುಂದಾಳು, ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರದ ರುವಾರಿ ನಾಡೋಜಾ ಡಾ. ಜಿ ಶಂಕರ್‌ರವರಿಗೆ ಕರ್ನಾಟಕ ಬ್ಯಾಂಕಿನ ಉಡುಪಿ ರೀಜನಲ್ ಹೆಡ್  ವಾದಿರಾಜ ಭಟ್‌ರವರು ವಾಹನದ ಕೀಲಿಕೈಯನ್ನು ಹಸ್ತಾಂತರಿಸಿದರು.

 ಮೊದಲಿಗೆ ದೇವಳದ ಅರ್ಚಕ ವೇದಮೂರ್ತಿ ವಿಷ್ಣುಮೂರ್ತಿ ಭಟ್‌ರವರು ವಾಹನದ ಪೂಜಾ ವಿಧಿವಿಧಾನ ನೆರವೇರಿಸಿದರು.

ಈ ಸಂದರ್ಭ ನಾಡೋಜಾ ಡಾ. ಜಿ ಶಂಕರ್‌ ಮಾತನಾಡಿ, ಮುಂದಿನ ಉಚ್ಚಿಲ ದಸರಾ ಸಂದರ್ಭ ೬೦ ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈ ವಾಹನವು ಉಪಕಾರಿ ಆಗಲಿದೆ. ಕರ್ನಟಕ ಬ್ಯಾಂಕಿನ ಸಂಬಂಧವು ಮಹಾಲಕ್ಷ್ಮೀ ದೇವಸ್ಥಾನದೊಂದಿಗೆ ಉತ್ತಮವಾಗಿದ್ದು, ಇಂತಹಾ ಕಾರ್ಯಗಳಿಂದ ಸಂಬಂಧ ಇನ್ನಷ್ಟು ಹೆಚ್ಚಾಗಲಿ ಎಂದರು.

 ಕರ್ನಾಟಕ ಬ್ಯಾಂಕಿನ ವಾದಿರಾಜ ಭಟ್‌ ಮಾತನಾಡಿ, ನಮ್ಮ ಬ್ಯಾಂಕಿನ ಸಿಎಸ್‌ಆರ್‌ ಯೋಜನೆಯಡಿ ನಾವು 6 ಆಸನಗಳ ವಿದ್ಯುತ್ ಚಾಲಿತ ವಾಹನವನ್ನು ಹಸ್ತಾಂತರಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಕಾರ ನೀಡಲಿದ್ದೇವೆ ಎಂದರು.

 ಈ ಸಂದರ್ಭ ನಾಡೋಜ ಡಾ. ಜಿ. ಶಂಕರ್, ಗುಂಡು ಬಿ. ಅಮೀನ್, ವಿನಯ್ ಕರ್ಕೇರ, ಗಿರಿಧರ ಸುವರ್ಣ, ಮೋಹನ್ ಬೇಂಗ್ರೆ, ಶರಣ್ ಮಟ್ಟು, ಸುಧಾಕರ ಕುಂದರ್, ಸುಭಾಶ್ಚಂದ್ರ ಕಾಂಚನ್, ನಾರಾಯಣ ಕರ್ಕೇರ, ಸುಜಿತ್ ಸಾಲ್ಯಾನ್ ಮೂಲ್ಕಿ, ಪುಂಡಲೀಕ ಹೊಸಬೆಟ್ಟು, ರವೀಂದ್ರ ಶ್ರೀಯಾನ್, ನಾರಾಯಣ ಕುಂದರ್ ಕಲ್ಮಾಡಿ, ಮೋಹನ್ ಬಂಗೇರ ಕಾಪು, ವಿಠಲ ಕರ್ಕೇರಾ, ಸುಧಾಕರ ಸುವರ್ಣ ಉಚ್ಚಿಲ, ಸುಗುಣಾ ಕರ್ಕೇರ,  ಕರ್ನಾಟಕ ಬ್ಯಾಂಕಿನ ಮಹಾ‌ಪ್ರಬಂಧಕ ಮನೋಜ್‌ ಕೋಟ್ಯಾನ್, ಅಂಬಾಗಿಲು ಶಾಖಾ ಪ್ರಬಂಧಕ‌ ಶಶಿಕಾಂತ್ ಬಂಗೇರ, ದೇವಳದ ಮನೇಜರ್‌ ಸತೀಷ್‌ ಅಮೀನ್‌ ಪಡುಕೆರೆ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.