• Home  
  • ಬಂಟಕಲ್ಲು: ದೇಗುಲದ ಆವರಣದಲ್ಲಿ ಸಾಮೂಹಿಕ ವಾಹನ ಪೂಜೆ, ಗೋ ಪೂಜೆ (Bandakallu: Mass vehicle worship, cow worship in the temple premises)
- ಸಾಂಸ್ಕೃತಿಕ - ಸೌಹಾರ್ಧ

ಬಂಟಕಲ್ಲು: ದೇಗುಲದ ಆವರಣದಲ್ಲಿ ಸಾಮೂಹಿಕ ವಾಹನ ಪೂಜೆ, ಗೋ ಪೂಜೆ (Bandakallu: Mass vehicle worship, cow worship in the temple premises)

Share: ಬಂಟಕಲ್ಲು: ದೇಗುಲದ ಆವರಣದಲ್ಲಿ ಸಾಮೂಹಿಕ ವಾಹನ ಪೂಜೆ, ಗೋ ಪೂಜೆ      ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಮಾಧವ ಕಾಮತ್  (Bantakal) ಬಂಟಕಲ್ಲು : ಬಂಟಕಲ್ಲು ರಾಜಪುರ ಸಾರಸ್ವತ ಸೇವಾ ವೃಂದದ ಆಶ್ರಯದಲ್ಲಿ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿದೇವಸ್ಥಾನದ ವಠಾರದಲ್ಲಿ  ಮಂಗಳವಾರ ಸಾಮೂಹಿಕ ವಾಹನ ಪೂಜೆ ಹಾಗೂಗೋ ಪೂಜೆ  ಸಂಪನ್ನಗೊಂಡಿತು.   ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ, ಉದ್ಯಮಿ ಮಾಧವ ಕಾಮತ್ ರವರು ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಿದರು. […]

 (Bantakal) ಬಂಟಕಲ್ಲು : ಬಂಟಕಲ್ಲು ರಾಜಪುರ ಸಾರಸ್ವತ ಸೇವಾ ವೃಂದದ ಆಶ್ರಯದಲ್ಲಿ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿದೇವಸ್ಥಾನದ ವಠಾರದಲ್ಲಿ  ಮಂಗಳವಾರ ಸಾಮೂಹಿಕ ವಾಹನ ಪೂಜೆ ಹಾಗೂಗೋ ಪೂಜೆ  ಸಂಪನ್ನಗೊಂಡಿತು.

  ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ, ಉದ್ಯಮಿ ಮಾಧವ ಕಾಮತ್ ರವರು ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಿದರು.

  ನಂತರ ಮಾತನಾಡಿದ ಅವರು, ವಾಹನ ಪೂಜೆಯಿಂದ ನಮ್ಮ ಶುಭ ಪ್ರಯಾಣಕ್ಕೆ ಶ್ರೀದೇವಿಯ ಅನುಗ್ರಹ ಪ್ರಾಪ್ತಿಯಾಗುವುದೆಂದು ತಿಳಿಸಿ ಎಲ್ಲರಿಗೂ ತಮ್ಮ ವಾಹನಗಳಲ್ಲಿ ದಿನಂಪ್ರತಿಯ  ಪ್ರಯಾಣವು ಶುಭದಾಯಕವಾಗಿರಲಿ, ಯಾವುದೇ ಅವಘಡಗಳು ಸಂಭವಿಸದಿರಲಿ ಎಂದು ಹಾರೖಸಿದರು.

  ಬಂಟಕಲ್ಲು ದೇವಸ್ಥಾನದ ಆಡಳಿತ ಮೊಕ್ತೇಸರರಾದ  ಜಯರಾಮ ಪ್ರಭು, ಅಧ್ಯಕ್ಷರಾದ ಉಮೇಶ್ ಪ್ರಭು ಗೋವಿಗೆ ಹೂ ಹಾರ, ಶಾಲು ಹೊದಿಸಿ ಗೊ ಪೂಜೆಗೆ ಚಾಲನೆ ನೀಡಿದರು.

  ಸರಸ್ವತಿ ಕಾಮತ್ ರವರು ಗೋವುಗಳಿಗೆ ಆರತಿ ಬೆಳಗಿದರು.

  ಸುಮಾರು 130 ವಾಹನಗಳಿಗೆ ವಾಹನ ಪೂಜೆಯು ಶ್ರೀ ದೇವಳದ ಅರ್ಚಕರಾದ ಶ್ರೀಕಾಂತ್ ಭಟ್ ರವರ ಪೌರೋಹಿತ್ಯದಲ್ಲಿ ನಡೆಯಿತು. ‌

  ಶ್ರೀ ದೇವಳದ ಅರ್ಚಕರಾದ ಮಂಜುನಾಥ್ ಭಟ್ ರವರು ಸಹಕರಿಸಿದರು.

  ಸೇವಾ ವೖಂದದ ಅಧ್ಯಕ್ಷ ಕೆ. ಆರ್ ಪಾಟ್ಕರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಬಗ್ಗೆ ತಿಳಿಸಿ ವಾಹನಗಳಲ್ಲಿ ಪ್ರಯಾಣಿಸುವ ಸಂದರ್ಭಗಳಲ್ಲಿ ಸಾರಿಗೆ ನಿಯಮಗಳನ್ನು ಚಾಚು ತಪ್ಪದೇ ಅನುಸರಿಸುವಂತೆ ತಿಳಿಸಿದರು.

  ದೇವಳದ ಆಡಳಿತ ಮಂಡಳಿಯ ರಾಮದಾಸ್ ಪ್ರಭು, ಶಶಿಧರ ವಾಗ್ಳೆ, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ  ಪುಂಡಲೀಕ ಮರಾಠೆ, ಗೋವಿಂದ ಕುಂದರ್ ಶಿರ್ವ, ನಿವೖತ್ತ ಶಿಕ್ಷಕ ಎಸ್. ಎಸ್ ಪ್ರಸಾದ್, ರಮಾನಾಥ ಪಾಟ್ಕರ್, ಸೇವಾ ವೃಂದದ ನಿಯೋಜಿತ ಅಧ್ಯಕ್ಷ ರಮೇಶ್ಚಂದ್ರ ನಾಯಕ್, ಶ್ರೀ ದುರ್ಗಾ ಮಹಿಳಾ ವೖಂದದ ಕಾರ್ಯದರ್ಶಿ ಮಂಜುಳಾ ಕಾಮತ್, ಅನಂತರಾಮ ವಾಗ್ಳೆ, ರಾಘವೇಂದ್ರ ನಾಯಕ್, ಪ್ರೀತಮ್ ಪ್ರಭು, ಅಭಿಷೇಕ್ ನಾಯಕ್, ವಿರೇಂದ್ರ ಪಾಟ್ಕರ್, ವಿಶ್ವನಾಥ್ ನಾಯಕ್, ರಾಜೇಂದ್ರ ಪಾಟ್ಕರ್, ಶ್ರೀನಿವಾಸ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.

 ಶಿಕ್ಷಕ ದೇವದಾಸ ಪಾಟ್ಕರ್ ನಿರೂಪಿಸಿದರು. ಕಾರ್ಯದರ್ಶಿ ವಿಶ್ವನಾಥ ನಾಯಕ್ ವಂದಿಸಿದರು.

 ಕಾರ್ಯಕ್ರಮದ ಬಳಿಕ ರಾಘವೇಂದ್ರ ಕಾಮತ್ ರವರ ಪ್ರಾಯೋಜಕತ್ವದಲ್ಲಿ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

Leave a comment

Your email address will not be published. Required fields are marked *

eMedia Kannada  @2025. All Rights Reserved.