• Home  
  • ಐಕಳ : ಕಾಂತಾ ಬಾರೆ ಬೂದಾ ಬಾರೆ ಫ್ರೆಂಡ್ಸ್ ವತಿಯಿಂದ ವಾಲಿಬಾಲ್ ಪಂದ್ಯಾಟ – 2024 (Ailka : Volleyball Tournment -2024 by Kantabaare Budaabaare Friends)
- ಕ್ರೀಡೆ

ಐಕಳ : ಕಾಂತಾ ಬಾರೆ ಬೂದಾ ಬಾರೆ ಫ್ರೆಂಡ್ಸ್ ವತಿಯಿಂದ ವಾಲಿಬಾಲ್ ಪಂದ್ಯಾಟ – 2024 (Ailka : Volleyball Tournment -2024 by Kantabaare Budaabaare Friends)

Share: ಐಕಳ : ಕಾಂತಾ ಬಾರೆ ಬೂದಾ ಬಾರೆ ಫ್ರೆಂಡ್ಸ್ ವತಿಯಿಂದ ವಾಲಿಬಾಲ್ ಪಂದ್ಯಾಟ – 2024   ಕ್ರೀಡೆಯ ಜೊತೆಗೆ ಶಿಕ್ಷಣ ಹಾಗೂ ಅಸಹಾಯಕರಿಗೆ ಸಹಾಯ ಹಸ್ತ ಅಭಿನಂದನೀಯ-ಅಶೋಕ್ ಕುಮಾರ್ ಶೆಟ್ಟಿ (Kinnigoli) : ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಐಕಳ ಕಾಂತಾ ಬಾರೆ ಬೂದಾ ಬಾರೆ ಫ್ರೆಂಡ್ಸ್ ವತಿಯಿಂದ ಸಾರ್ವಜನಿಕ ಸೇವಾ ಚಟುವಟಿಕೆಗಳ ಸಹಾಯಾರ್ಥ ವಾಲಿಬಾಲ್ ಪಂದ್ಯಾಟ 2024 ಐಕಳ ಕಂಬಳದ ಮಂಜೊಟ್ಟಿ ಗದ್ದೆಯ ಬಳಿ ಮೈದಾನದಲ್ಲಿ ನಡೆಯಿತು. ಕ್ರೀಡಾಕೂಟವನ್ನು ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷ […]

ಐಕಳ : ಕಾಂತಾ ಬಾರೆ ಬೂದಾ ಬಾರೆ ಫ್ರೆಂಡ್ಸ್ ವತಿಯಿಂದ ವಾಲಿಬಾಲ್ ಪಂದ್ಯಾಟ – 2024

  ಕ್ರೀಡೆಯ ಜೊತೆಗೆ ಶಿಕ್ಷಣ ಹಾಗೂ ಅಸಹಾಯಕರಿಗೆ ಸಹಾಯ ಹಸ್ತ ಅಭಿನಂದನೀಯ-ಅಶೋಕ್ ಕುಮಾರ್ ಶೆಟ್ಟಿ

(Kinnigoli) : ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಐಕಳ ಕಾಂತಾ ಬಾರೆ ಬೂದಾ ಬಾರೆ ಫ್ರೆಂಡ್ಸ್ ವತಿಯಿಂದ ಸಾರ್ವಜನಿಕ ಸೇವಾ ಚಟುವಟಿಕೆಗಳ ಸಹಾಯಾರ್ಥ ವಾಲಿಬಾಲ್ ಪಂದ್ಯಾಟ 2024 ಐಕಳ ಕಂಬಳದ ಮಂಜೊಟ್ಟಿ ಗದ್ದೆಯ ಬಳಿ ಮೈದಾನದಲ್ಲಿ ನಡೆಯಿತು.

ಕ್ರೀಡಾಕೂಟವನ್ನು ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಚೌಟ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.

 ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ದನ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಗಣೇಶ್ ಭಟ್ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ವಹಿಸಿ  ಮಾತನಾಡಿ, ಸೇವಾ ಸಂಸ್ಥೆಗಳು ಕ್ರೀಡೆಯ ಜೊತೆಗೆ ಶೈಕ್ಷಣಿಕ ಹಾಗೂ ಅಸಹಾಯಕರಿಗೆ ಪ್ರೋತ್ಸಾಹ ಅಭಿನಂದನೀಯವಾಗಿದ್ದು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಐಕಳ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಲಕ್ಷ್ಮಿ ಪೂಜಾರಿ, ಮಾಜಿ ಅಧ್ಯಕ್ಷೆ ಸುಗುಣಾ ಪೂಜಾರಿ, ಸದಸ್ಯೆ ಅನಿತಾ ಡಿ. ಕಾಸ್ತಾ, ದಯೇಶ್ ಕೋಟ್ಯಾನ್, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ಕಿನ್ನಿಗೋಳಿ, ಐಕಳ ಬಾವ ದಯಾನಂದ ಶೆಟ್ಟಿ, ಸ್ವರಾಜ್ ಶೆಟ್ಟಿ ಮುಂಡ್ಕೂರು ದೊಡ್ಡಮನೆ, ಐಕಳ ಕಾಂತಾ ಬಾರೆ ಬೂದಾ ಬಾರೆ ಫ್ರೆಂಡ್ಸ್ ಅಧ್ಯಕ್ಷ ತಾರಾನಾಥ ಶೆಟ್ಟಿ, ಸದಸ್ಯರಾದ ಶ್ರೀಶ ಸರಾಫ್ ಐಕಳ, ಚೇತನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಫ್ರೆಂಡ್ಸ್ ಕ್ಲಬ್ ಸದಸ್ಯ ಚೇತನ್ ಶೆಟ್ಟಿ ಸ್ವಾಗತಿಸಿದರು. ಶ್ರೀಶ  ನಿರೂಪಿಸಿದರು.

ಬಳಿಕ ವಾಲಿಬಾಲ್ ಪಂದ್ಯಾಟ ನಡೆಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.