• Home  
  • ಶಿರ್ವ ಹಿಂದೂ ಜೂನಿಯರ್ ಕಾಲೇಜು : ದುಬಾಯಿಯಲ್ಲಿ ಹಳೆ ವಿದ್ಯಾರ್ಥಿ  ಸಂಘದ ಸಮಾಲೋಚನಾ ಸಭೆ (Shirva Hindu Jr. College : Old Students Association Consultation meeting in Dubai)
- ಶಾಲಾ ಕಾಲೇಜು - ಸಂಘ, ಸಂಸ್ಥೆಗಳು

ಶಿರ್ವ ಹಿಂದೂ ಜೂನಿಯರ್ ಕಾಲೇಜು : ದುಬಾಯಿಯಲ್ಲಿ ಹಳೆ ವಿದ್ಯಾರ್ಥಿ  ಸಂಘದ ಸಮಾಲೋಚನಾ ಸಭೆ (Shirva Hindu Jr. College : Old Students Association Consultation meeting in Dubai)

Share: ಶಿರ್ವ ಹಿಂದೂ ಜೂನಿಯರ್ ಕಾಲೇಜು : ದುಬಾಯಿಯಲ್ಲಿ ಹಳೆ ವಿದ್ಯಾರ್ಥಿ  ಸಂಘದ ಸಮಾಲೋಚನಾ ಸಭೆ (Dubai) ದುಬಾಯಿ: ಶಿರ್ವ ಹಿಂದೂ ಜೂನಿಯರ್ ಕಾಲೇಜು ಇದರ ಹಳೆ ವಿದ್ಯಾರ್ಥಿ ಸಂಘದ ದಶಮಾನೋತ್ಸವ ಕಾರ್ಯಕ್ರಮ ಡಿಸೆಂಬರ್ 29ರಂದು ಜರಗಲಿದ್ದು, ಆಪ್ರಯುಕ್ತ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಮಾಲೋಚನಾ ಸಭೆ ದುಬೈಯ ಕರಾಮದ ಪ್ರೆಸಿಡೆಂಟ್ ಹೋಟೆಲ್‌ನ ಸಭಾಂಗಣದಲ್ಲಿ ನೆರವೇರಿತು.  ಸಭೆಯನ್ನು ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಸಂಘಟಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ   ಸರ್ವೋತ್ತಮ ಶೆಟ್ಟಿಯವರು ಜ್ಯೋತಿ […]

ಶಿರ್ವ ಹಿಂದೂ ಜೂನಿಯರ್ ಕಾಲೇಜು : ದುಬಾಯಿಯಲ್ಲಿ ಹಳೆ ವಿದ್ಯಾರ್ಥಿ  ಸಂಘದ ಸಮಾಲೋಚನಾ ಸಭೆ

(Dubai) ದುಬಾಯಿ: ಶಿರ್ವ ಹಿಂದೂ ಜೂನಿಯರ್ ಕಾಲೇಜು ಇದರ ಹಳೆ ವಿದ್ಯಾರ್ಥಿ ಸಂಘದ ದಶಮಾನೋತ್ಸವ ಕಾರ್ಯಕ್ರಮ ಡಿಸೆಂಬರ್ 29ರಂದು ಜರಗಲಿದ್ದು, ಆಪ್ರಯುಕ್ತ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಮಾಲೋಚನಾ ಸಭೆ ದುಬೈಯ ಕರಾಮದ ಪ್ರೆಸಿಡೆಂಟ್ ಹೋಟೆಲ್‌ನ ಸಭಾಂಗಣದಲ್ಲಿ ನೆರವೇರಿತು.

 ಸಭೆಯನ್ನು ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಸಂಘಟಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ   ಸರ್ವೋತ್ತಮ ಶೆಟ್ಟಿಯವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು.

ಅವರು ಮಾತನಾಡಿ, ಇದೊಂದು ಮಾದರಿ ಹಳೆ ವಿದ್ಯಾರ್ಥಿ ಸಂಘವಾಗಿದ್ದು, ಬೇರೆ ಶಾಲೆಗಳ ಹಳೆ ವಿದ್ಯಾರ್ಥಿ ಸಂಘಗಳಿಗೆ ಪ್ರೇರಣೆಯಾಗುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೀರಿ. ಡಿಸೆಂಬರ್‌ 29 ರಂದು   ನಡೆಯಲಿರುವ ಕಾರ್ಯಕ್ರಮದಲ್ಲಿ ನಾನೂ ಭಾಗವಹಿಸುತ್ತೇನೆ ಹಾಗೂ ನನ್ನ ಸಂಪೂರ್ಣ ಸಹಕಾರ ನಿಮಗಿದೆ ಎಂದು ಭರವಸೆ ನೀಡಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿಗಾರ್‌ರವರು ಅಧ್ಯಕ್ಷತೆಯನ್ನು ವಹಿಸಿದ್ದರು.  

 ನಿವೃತ್ತ ಪ್ರಾಂಶುಪಾಲ ರಾಜಗೋಪಾಲ್ ಕೆ. ಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಳೆ ವಿದ್ಯಾರ್ಥಿಗಳಿಗೆ ಡಿಸೆಂಬರ್‌ 29 ರ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿ, ಈ ಸುಸಂದರ್ಭದಲ್ಲಿ ಹಳೆವಿದ್ಯಾರ್ಥಿ ಸಂಘವು  ಸಂಸ್ಥೆಗೆ ಕೊಡಮಾಡುವ ಶಾಶ್ವತ ಕೊಡುಗೆಗಳಿಗೆ ಯಥಾ ಶಕ್ತಿ ಆರ್ಥಿಕ ಸಹಕಾರವನ್ನು ನೀಡುವಂತೆ ವಿನಂತಿಸಿದರು.

  ದಶಮಾನೋತ್ಸವ ಸಮಿತಿಯ ಸಂಚಾಲಕ ಖಾ೦ದೇಶ್ ಭಾಸ್ಕರ ಶೆಟ್ಟಿಯವರು ಸಂಘವು ನಡೆದುಬಂದ ಹಾದಿಯ ಕುರಿತು ವಿವರಿಸಿದರು.

ಸಮಿತಿಯ ದುಬೈ ಸಂಚಾಲಕರು ಹಾಗೂ ಸಂಘದ ಮಹಾ ಪೋಷಕರಾದ ಕೊಡು ದಿವಾಕರ ಶೆಟ್ಟಿ ಹಾಗೂ ಹಳೆ ವಿದ್ಯಾರ್ಥಿಗಳಾದ ರೋನಾಲ್ಡ್ ಅಂದ್ರಾದೆ, ಶ್ರೀಮತಿ ಸಂಗೀತ ಶೆಟ್ಟಿಯವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.  

ಸಮಿತಿಯ ಗೌರವ ಸಲಹೆಗಾರದಾರ ಕುತ್ಯಾರು ಕಿಶೋರ್ ಶೆಟ್ಟಿ ಮುಂಬೈಯವರು ಇಂದಿನ ಸಮಾಲೋಚನಾ ಸಭೆಯ ಸಂಪೂರ್ಣ ವ್ಯವಸ್ಥೆಯನ್ನು ಉಚಿತವಾಗಿ ಆಯೋಜಿಸಿದ ಅನಿವಾಸಿ ಉದ್ಯಮಿ ಪೆನಿನ್ಸುಲಾ ಗ್ರೂಪ್ ಆಫ್ ಹೋಟೆಲ್ಸ್ ಇದರ ಮಾಲಕರಾದ  ಕರುಣಾಕರ ಶೆಟ್ಟಿ ಹಾಗೂ ಸತೀಶ್ ಶೆಟ್ಟಿ ಸಹೋದರರನ್ನು ಅಬಿನಂದಿಸಿದರು.

  ಸ್ಮರಣ ಸಂಚಿಕೆ ಸಮಿತಿಯ ಪ್ರಧಾನ ಸಂಪಾದಕರಾದ ಕುತ್ಯಾರು ಪ್ರಸಾದ್ ಶೆಟ್ಟಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿಗಾರ್‌ರವರು ಸ್ವಾಗತಿಸಿದರು. ಶ್ರೀಮತಿ ಸುಜಯ ಶೆಟ್ಟಿಯವರು ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.