• Home  
  • ಓದುಗರನ್ನು ಆಕರ್ಷಿಸುವಲ್ಲಿ ಗ್ರಂಥಪಾಲಕರ ಪಾತ್ರ  ಮಹತ್ವದ್ದಾಗಿದೆ -ಕೆ.ಎಲ್. ಕುಂಡಂತಾಯ (The role of librarians in attracting readers is significant – K.L. Kundanthaya)
- ಸಂಘ, ಸಂಸ್ಥೆಗಳು

ಓದುಗರನ್ನು ಆಕರ್ಷಿಸುವಲ್ಲಿ ಗ್ರಂಥಪಾಲಕರ ಪಾತ್ರ  ಮಹತ್ವದ್ದಾಗಿದೆ -ಕೆ.ಎಲ್. ಕುಂಡಂತಾಯ (The role of librarians in attracting readers is significant – K.L. Kundanthaya)

Share:  ಓದುಗರನ್ನು ಆಕರ್ಷಿಸುವಲ್ಲಿ ಗ್ರಂಥಪಾಲಕರ ಪಾತ್ರ  ಮಹತ್ವದ್ದಾಗಿದೆ –ಕೆ.ಎಲ್. ಕುಂಡಂತಾಯ “ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ” ಆಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮ (Kaup) ಕಾಪು: ಕಾಪು ಪುರಸಭಾ ವ್ಯಾಪ್ತಿಯ ಗ್ರಂಥಾಲಯದಲ್ಲಿ ನಡೆದ “ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ” ಆಚರಣೆ ಕಾರ್ಯಕ್ರಮವನ್ನು ಹಿರಿಯ ಜಾನಪದ ವಿದ್ವಾಂಸ, ಸಾಹಿತಿ ಕೆ.ಎಲ್. ಕುಂಡಂತಾಯ ಉದ್ಘಾಟಿಸಿದರು. ಡಾ. ಎಸ್.ಆರ್. ರಂಗನಾಥನ್ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ  ಮಾತನಾಡಿದರು.  ಭಾರತವೇ ದೊಡ್ಡ ಗ್ರಂಥ ಭಂಡಾರ. ನಲಂದಾ, ತಕ್ಷಶಿಲಾ ಜಗತ್ತಿನ ಬಹು ದೊಡ್ಡ ಗ್ರಂಥಾಲಯಗಳಾಗಿದ್ದು, ಪರಕೀಯರು ಇಲ್ಲಿನ ಪುಸ್ತಕಗಳನ್ನು  […]

(Kaup) ಕಾಪು: ಕಾಪು ಪುರಸಭಾ ವ್ಯಾಪ್ತಿಯ ಗ್ರಂಥಾಲಯದಲ್ಲಿ ನಡೆದ “ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ” ಆಚರಣೆ ಕಾರ್ಯಕ್ರಮವನ್ನು ಹಿರಿಯ ಜಾನಪದ ವಿದ್ವಾಂಸ, ಸಾಹಿತಿ ಕೆ.ಎಲ್. ಕುಂಡಂತಾಯ ಉದ್ಘಾಟಿಸಿದರು.

ಡಾ. ಎಸ್.ಆರ್. ರಂಗನಾಥನ್ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ  ಮಾತನಾಡಿದರು.

 ಭಾರತವೇ ದೊಡ್ಡ ಗ್ರಂಥ ಭಂಡಾರ. ನಲಂದಾ, ತಕ್ಷಶಿಲಾ ಜಗತ್ತಿನ ಬಹು ದೊಡ್ಡ ಗ್ರಂಥಾಲಯಗಳಾಗಿದ್ದು, ಪರಕೀಯರು ಇಲ್ಲಿನ ಪುಸ್ತಕಗಳನ್ನು  ಕದ್ದು ಸಾಗಿಸಿದ್ದರಿಂದ ಅವರಿಗೆ  ಜ್ಞಾನ ಬೆಳೆಸಿ, ಅನೇಕ ಸಂಶೋಧನೆಗಳನ್ನು ನಡೆಸಲು ಸಾಧ್ಯವಾಯಿತು. ಗ್ರಂಥಾಲಯಗಳಿಂದ ವಿದ್ಯಾರ್ಥಿಗಳನ್ನು, ಸಾರ್ವಜನಿಕರನ್ನು ಕಟ್ಟುವ ಕೆಲಸ ಆಗಬೇಕು. ಓದುಗರನ್ನು ಆಕರ್ಷಿಸುವಲ್ಲಿ ಗ್ರಂಥಪಾಲಕರ ಪಾತ್ರ  ಮಹತ್ವದ್ದಾಗಿದೆ ಎಂದು ನುಡಿದರು.

    ಯಕ್ಷಗಾನ ಭಾಗವತರು ಹಾಗೂ ಗ್ರಂಥಕರ್ತರಾದ ಸುರೇಂದ್ರ ಪಣಿಯೂರು ಮಾತನಾಡಿ, ಬದುಕಿನ ಸಾರವನ್ನು ತಿಳಿಸುವ ಪುಸ್ತಕವೇ ಗ್ರಂಥ. ರಾಮಾಯಣ, ಮಹಾಭಾರತ ಗ್ರಂಥಗಳು ಜ್ಞಾನದ ವಿಕಾಸದ ಜೊತೆಗೆ ಭಾಷೆಯ ಪ್ರಭುದ್ಧತೆಯನ್ನು ಬೆಳೆಸಿವೆ. ಬುದ್ಧಿ ವಿಕಾಸಗೊಳಿಸಲು ಇರುವ ದೇವಾಲಯಗಳೇ  ಗ್ರಂಥಾಲಯ ಎಂದರು. ಓದಿನ ಮೂಲಕ ಜ್ಞಾನವನ್ನು ವೃದ್ದಿಸಿ ಎಂದರು.

  ಈ ಸಂದರ್ಭದಲ್ಲಿ “ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ”ದ ಅಂಗವಾಗಿ ಪುರಸಭಾ ವ್ಯಾಪ್ತಿಯ ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ  ವಿವಿಧ ಸ್ಫರ್ಧಾಗಳ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.

  ಉಳಿಯಾರಗೋಳಿ ಕೇಂದ್ರದ ಗ್ರಂಥಪಾಲಕಿ ಆಶಾ  ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.  ಬಹುಮಾನ ವಿಜೇತರ ಪಟ್ಟಿಯನ್ನು ಮಲ್ಲಾರು ಕೇಂದ್ರದ  ಗ್ರಂಥಪಾಲಕಿ  ನಸ್ರೀನ್ ಫಾತೀಮಾ ಓದಿದರು.  ಕಾಪು ಪುರಸಭಾ ಗ್ರಂಥಪಾಲಕಿ  ಪೂರ್ಣಿಮಾ ವಂದಿಸಿದರು. ನಿವೃತ್ತ ಶಿಕ್ಷಕ ಶಿವಣ್ಣ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.