# Tags
#Uncategorised #ಸಂಘ, ಸಂಸ್ಥೆಗಳು

ಸುರತ್ಕಲ್: ಯಕ್ಷಗಾನದ ಸಂಭ್ರಮಾಚರಣೆ – “ಯಕ್ಷದ್ಯುತಿ” ಆಮಂತ್ರಣ ಬಿಡುಗಡೆ (Surathkal : Yakshagana Celebration – “Yakshadhyuthi: Invitation released)

ಸುರತ್ಕಲ್: ಯಕ್ಷಗಾನದ ಸಂಭ್ರಮಾಚರಣೆ: “ಯಕ್ಷದ್ಯುತಿ” ಆಮಂತ್ರಣ ಬಿಡುಗಡೆ

(Surathkal) ಸುರತ್ಕಲ್: ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ  ಪೂರ್ಣಿಮಾ ಯತೀಶ್ ರೈ ಅವರ 35 ವರುಷಗಳ ಯಕ್ಷಯಾನದ ಸಂಭ್ರಮಾಚರಣೆ “ಯಕ್ಷದ್ಯುತಿ”ಯ ಆಮಂತ್ರಣ ಪತ್ರಿಕೆಯನ್ನು‌ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸುರತ್ಕಲ್ ನಲ್ಲಿ  ಶಕುಂತಲಾ ರಮಾನಂದ ಭಟ್ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಕಾರಿಂಜೇಶ್ವರ ದೇವಸ್ಥಾನ, ಕಾರಿಂಜದ ಅರ್ಚಕರಾದ ಮಿಥುನ್ ರಾಜ್ ನಾವಡ, ಯಕ್ಷಪೂರ್ಣಿಮಾ ಬಿರುದಾಂಕಿತೆ ಪೂರ್ಣಿಮಾ ಯತೀಶ್ ರೈ , ಯಕ್ಷದ್ಯುತಿ ಅಭಿನಂದನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಭಟ್, ಉಪಾಧ್ಯಕ್ಷರುಗಳಾದ ಲೀಲಾಧರ್ ಶೆಟ್ಟಿ ಕಟ್ಲ, ಗಂಗಾಧರ ಪೂಜಾರಿ ಚೇಳಾರು, ಸಂಚಾಲಕರಾದ ಸಾಯಿಸುಮಾ ನಾವಡ, ಕಾರ್ಯದರ್ಶಿ ಅನಂತಮೂರ್ತಿ,  ಕೋಶಾಧಿಕಾರಿ ಪೂರ್ಣಿಮಾ ಶಾಸ್ತ್ರಿ, ಜೊತೆ ಕಾರ್ಯದರ್ಶಿಗಳಾದ ಸಹನಾ ರಾಜೇಶ್ ರೈ, ರೇವತಿ ನವೀನ್ ಮೊದಲಾದವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2