• Home  
  • ಎರ್ಮಾಳು ತೆಂಕ : ಕಿನಾರಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ  ಕ್ರೀಡಾಕೂಟ – 2024-25 (Yermal Kinara English medium School : Annual Sports meet 2024- 25)
- ಶಾಲಾ ಕಾಲೇಜು

ಎರ್ಮಾಳು ತೆಂಕ : ಕಿನಾರಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ  ಕ್ರೀಡಾಕೂಟ – 2024-25 (Yermal Kinara English medium School : Annual Sports meet 2024- 25)

Share: ಎರ್ಮಾಳು ತೆಂಕ : ಕಿನಾರಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ  ಕ್ರೀಡಾಕೂಟ – 2024-25 (Yermal) ಎರ್ಮಾಳು: ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ    ಇದರ ಆಡಳಿತಕ್ಕೆ  ಒಳಪಟ್ಟ ಕಿನಾರಾ ಆಂಗ್ಲ ಮಾಧ್ಯಮ   ಶಾಲೆಯ ವಾರ್ಷಿಕ ಕ್ರೀಡಾಕೂಟ ಇತ್ತೀಚೆಗೆ ನೆರವೇರಿತು.   ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ  ಆಗಮಿಸಿದ ಉದ್ಯಮಿ ಗಿರೀಶ್ ಎಸ್ ಕುಂದರ್‌ರವರು  ಧ್ವಜಾರೋಹಣ ಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಅತಿಥಿಯಾಗಿ  ಅಮಿತ್ ಪುತ್ರನ್ ಮುಂಬೈ, ದೀರೇಶ್ ಕೋಟ್ಯಾನ್ ಉಪಸ್ಥಿತರಿದ್ದರು.  ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ ಮುಂಬೈನ  ಅಧ್ಯಕ್ಷ […]

ಎರ್ಮಾಳು ತೆಂಕ : ಕಿನಾರಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ  ಕ್ರೀಡಾಕೂಟ – 2024-25

(Yermal) ಎರ್ಮಾಳು: ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ    ಇದರ ಆಡಳಿತಕ್ಕೆ  ಒಳಪಟ್ಟ ಕಿನಾರಾ ಆಂಗ್ಲ ಮಾಧ್ಯಮ   ಶಾಲೆಯ ವಾರ್ಷಿಕ ಕ್ರೀಡಾಕೂಟ ಇತ್ತೀಚೆಗೆ ನೆರವೇರಿತು.

  ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ  ಆಗಮಿಸಿದ ಉದ್ಯಮಿ ಗಿರೀಶ್ ಎಸ್ ಕುಂದರ್‌ರವರು  ಧ್ವಜಾರೋಹಣ ಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 ಅತಿಥಿಯಾಗಿ  ಅಮಿತ್ ಪುತ್ರನ್ ಮುಂಬೈ, ದೀರೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

 ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ ಮುಂಬೈನ  ಅಧ್ಯಕ್ಷ ಸುರೇಶ್ ಕುಂದರ್ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ ಅಧ್ಯಕ್ಷ ಕಿಶೋರ್ ಕುಮಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿಗಳ ವಿಶೇಷವಾದ ಬ್ಯಾಂಡ್ ಸೆಟ್ ಪ್ರದರ್ಶನ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು.

 ಕಾರ್ಯಕ್ರಮದಲ್ಲಿ  ಎರ್ಮಾಳು ತೆಂಕ  ಮೊಗವೀರ ಸಭಾದ ಅಧ್ಯಕ್ಷ ಲಿಂಗಪ್ಪ ಪುತ್ರನ್, ಮೊಗವೀರ ಸಭಾ ಮುಂಬೈನ ಉಪಾಧ್ಯಕ್ಷ ರವಿ ಪುತ್ರನ್, ಪ್ರಭಾಕರ್ ಪುತ್ರನ್, ಸುನಿಲ್ ಕುಮಾರ್ ಪೋಷಕರ ಪ್ರತಿನಿಧಿ ಮಹಮ್ಮದ್ ಸಲೀಂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರೀತಿ ಸುವರ್ಣ,  ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

  ಶ್ರೀಮತಿ ಪ್ರೀತಿ ಸುವರ್ಣ ಸ್ವಾಗತಿಸಿದರು. ಶ್ರೀಮತಿ ಸರಿತಾ ಸಂದೇಶ ವಂದಿಸಿದರು. ಶ್ರೀಮತಿ ಪ್ರತಿಮಾ ಹಾಗೂ ಕುಮಾರಿ ಅನುಷಾ  ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.