• Home  
  • 38 ವರ್ಷದಿಂದ ನಿಯಮ, ನಿಷ್ಠೆಯಿಂದ ಶಬರಿಮಲೆಗೆ  ಯಾತ್ರೆ ಕೈಗೊಂಡು ಅಪಾರ ಶಿಷ್ಯರನ್ನು ಪಡೆದ ಶ್ರೀ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ (Sri Chandrahasa Guruswamy Innanje, who has been making pilgrimages to Sabarimala with discipline and devotion for 38 years, has gained a large number of disciples)
- ಧಾರ್ಮಿಕ

38 ವರ್ಷದಿಂದ ನಿಯಮ, ನಿಷ್ಠೆಯಿಂದ ಶಬರಿಮಲೆಗೆ  ಯಾತ್ರೆ ಕೈಗೊಂಡು ಅಪಾರ ಶಿಷ್ಯರನ್ನು ಪಡೆದ ಶ್ರೀ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ (Sri Chandrahasa Guruswamy Innanje, who has been making pilgrimages to Sabarimala with discipline and devotion for 38 years, has gained a large number of disciples)

Share: 38 ವರ್ಷದಿಂದ ನಿಯಮ, ನಿಷ್ಠೆಯಿಂದ ಶಬರಿಮಲೆಗೆ  ಯಾತ್ರೆ ಕೈಗೊಂಡು ಅಪಾರ ಶಿಷ್ಯರನ್ನು ಪಡೆದ ಶ್ರೀ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ  (Udupi) ಉಡುಪಿ: ಶ್ರೀ ಚಂದ್ರಹಾಸ ಗುರುಸ್ವಾಮಿ ಇನ್ನಂಜೆಯವರು 38 ವರ್ಷದಿಂದ ನಿರಂತರ ತನ್ನ ಶಿಷ್ಯರನ್ನು ಸೇರಿಸಿ ನಿಯಮ ನಿಷ್ಠೆಯಿಂದ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. 6 ಬಾರಿ ಮುಂಬೈಯಿಂದ ಶಬರಿಮಲೆಗೆ ಪಾದಯಾತ್ರೆ  ಕೈಗೊಂಡು ಅಪಾರ ಶಿಷ್ಯ ವೃಂದವನ್ನು ಪಡೆದವರಲ್ಲಿ ಶ್ರೀ ಚಂದ್ರಹಾಸ ಗುರುಸ್ವಾಮಿಯೂ ಓರ್ವರು.  ಚಂದ್ರಹಾಸ ಗುರುಸ್ವಾಮಿಯವರನ್ನು ಮುಂಬೈ ಹಾಗೂ ಉಡುಪಿ ಪರಿಸರದ ಮಾಲಾಧಾರಿಗಳು  ಅರಿಯದವರು ವಿರಳ. […]

38 ವರ್ಷದಿಂದ ನಿಯಮ, ನಿಷ್ಠೆಯಿಂದ ಶಬರಿಮಲೆಗೆ  ಯಾತ್ರೆ ಕೈಗೊಂಡು ಅಪಾರ ಶಿಷ್ಯರನ್ನು ಪಡೆದ ಶ್ರೀ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ 

(Udupi) ಉಡುಪಿ: ಶ್ರೀ ಚಂದ್ರಹಾಸ ಗುರುಸ್ವಾಮಿ ಇನ್ನಂಜೆಯವರು 38 ವರ್ಷದಿಂದ ನಿರಂತರ ತನ್ನ ಶಿಷ್ಯರನ್ನು ಸೇರಿಸಿ ನಿಯಮ ನಿಷ್ಠೆಯಿಂದ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ.

6 ಬಾರಿ ಮುಂಬೈಯಿಂದ ಶಬರಿಮಲೆಗೆ ಪಾದಯಾತ್ರೆ  ಕೈಗೊಂಡು ಅಪಾರ ಶಿಷ್ಯ ವೃಂದವನ್ನು ಪಡೆದವರಲ್ಲಿ ಶ್ರೀ ಚಂದ್ರಹಾಸ ಗುರುಸ್ವಾಮಿಯೂ ಓರ್ವರು.  ಚಂದ್ರಹಾಸ ಗುರುಸ್ವಾಮಿಯವರನ್ನು ಮುಂಬೈ ಹಾಗೂ ಉಡುಪಿ ಪರಿಸರದ ಮಾಲಾಧಾರಿಗಳು  ಅರಿಯದವರು ವಿರಳ.

 ತನ್ನ ಇಡೀ ಜೀವನದಲ್ಲಿ ಸಸ್ಯಾಹಾರವನ್ನು ಸೇವಿಸಿ. ಕಾಲಿಗೆ ಪಾದರಕ್ಷೆಯನ್ನು ತ್ಯಜಿಸಿ ನಿತ್ಯ ಬ್ರಹ್ಮಚಾರಿಯಾಗಿ, ಅಯ್ಯಪ್ಪ ದೇವರ ಪ್ರತಿಮೆಯನ್ನು ಸದಾ ತನ್ನ ಬಳಿ ಇಟ್ಟುಕೊಂಡು ಸ್ವಾಮಿಯ ಸೇವೆಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ಮಹಾತಪಸ್ವಿ ಎಂದರೆ ತಪ್ಪಾಗಲಾರದು.

ಇವರು ಉಡುಪಿ ತಾಲೂಕಿನ ಶಂಕರಪುರದಲ್ಲಿ ಮತ್ತು ಮುಂಬೈಯ ಅಂಧೇರಿಯಲ್ಲಿ ತಮ್ಮದೇ ನೇತೃತ್ವದ ಅಯ್ಯಪ್ಪ ಶಿಬಿರವನ್ನು ಸ್ಥಾಪಿಸಿ ಸಾವಿರಾರು ಭಕ್ತರಿಗೆ  ಮಾರ್ಗದರ್ಶನ ನೀಡಿ, ಅಯ್ಯಪ್ಪ ಸ್ವಾಮಿಯ ಸನ್ನಿಧಿಗೆ ತೆರಳಿ ಅಯ್ಯಪ್ಪನ ದರ್ಶನ ಭಾಗ್ಯವನ್ನು ಕರುಣಿಸಿದ ಮಹಾನುಭಾವ.

ಯಾರೊಂದಿಗೂ ಹಣಕ್ಕೆ ಕೈಚಾಚದೆ, ಅನುಕೂಲಕ್ಕೆ ತಕ್ಕಂತೆ ವಿಜೃಂಭಣೆಯಿಂದ ಮಹಾಪೂಜೆ ನೆರವೇರಿಸಿ,  ಹಲವಾರು ವರ್ಷದಿಂದ ನಿರಂತರ ಸಾರ್ವಜನಿಕ ಅನ್ನದಾನ ಸೇವೆ ಸಲ್ಲಿಸಿ ಅಯ್ಯಪ್ಪ ದೇವರ ಕೃಪೆಗೆ ಪಾತ್ರರಾಗಿದ್ದಾರೆ.

ಅಲ್ಲದೆ ಪರಿಸರದಲ್ಲಿ ಸಮಾಜ ಮುಖಿ ಕೆಲಸಗಳಿಂದ ತನ್ನನ್ನು ತಾನು ತೊಡಗಿಸಿಕೊಂಡವರು.

  ಇನ್ನಂಜೆಯ ಗ್ರಾಮ ದೇವರಾದ  ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದಲ್ಲಿ ಬಹು ದೊಡ್ಡ ಪಾತ್ರವಹಿಸಿದ್ದು ನಾವು ಮರೆಯಲಾರದ ಸಂಗತಿ.   

ಚಂದ್ರಹಾಸ ಗುರುಸ್ವಾಮಿಯವರು ಮಹಾಪೂಜೆಯಂದು ಅಯ್ಯಪ್ಪ ಸ್ವಾಮಿಗೆ ಎತ್ತುವ ಆರತಿ. ಆರತಿ ಮಾಡುವ ಶೈಲಿ ಭಕ್ತರನ್ನು ಮಂತ್ರ ಮುಗ್ಧಗೊಳಿಸುತ್ತದೆ. ಅವರಿದ್ದೆಡೆ ಆ ಅಯ್ಯಪ್ಪ ಸ್ವಾಮಿಯೇ ಇದ್ದಾರೆ ಎನ್ನುವ ಧನಾತ್ಮಕ ಸಂಚಲನ ಅಯ್ಯಪ್ಪನ ಇರುವಿಕೆಯನ್ನು ಕಣ್ಣಾರೆ ಕಂಡವರು ಎಷ್ಟೋ ಜನ ಈಗಲೂ ಇದ್ದಾರೆ.

  ಒಬ್ಬ ಗುರುಸ್ವಾಮಿಯಾದವನು ತನ್ನ ಶಿಷ್ಯರು ಮಾಡಿದ ತಪ್ಪುಗಳನ್ನು ತನ್ನ ಮೇಲೆ ಹೊತ್ತು ಅವರಿಗೆ ಸಿಗುವ ಶಿಕ್ಷೆಯನ್ನೆಲ್ಲ ತಾನು ಸಹಿಸಿ ಶಿಷ್ಯರಿಗೆ ಯಾವುದೇ ತೊಂದರೆಯಾಗದಂತೆ ಆ ಅಯ್ಯಪ್ಪನ ದರುಶನ ಭಾಗ್ಯ ಕರುಣಿಸುವುದೇ ನಿಜವಾದ ಗುರುವಾದವನ ಕರ್ತವ್ಯ. ಇಂತಹಾ ಕೆಲಸ ಇವರಿಂದ ಖಂಡಿತವಾಗಿಯೂ ನಡೆದಿದೆ ನಡೆಯುತ್ತಿದೆ.

 38 ವರ್ಷ ದಿಂದ ನಡೆಯದ ಒಂದು ಘಟನೆ ಇತ್ತೀಚೆಗೆ ಘಟಿಸಿದೆ. ಅಯ್ಯಪ್ಪನಿಗೆ ಆರತಿ ಎತ್ತುವ ಸಂದರ್ಭ ಆರತಿಯೇ ಅವರ ಮೈ ಮೇಲೆ ಬಿದ್ದು ಪ್ರಮಾದ ಸೃಷ್ಠಿಯಾಗಿದೆ. ಅವರ ಪ್ರಾಮಾಣಿಕತೆ, ನಿಷ್ಠೆಗೆ ಹಾಗೂ ನಿಷ್ಕಳಂಕ ಭಕ್ತಿಗೆ ಅಪಚಾರ ಎಸಗುವ ಕೆಲಸ ಆ ಘಟನೆಯ ನಂತರ ನಡೆಯುತ್ತಿದೆ.

 ಕೆಲವೊಂದು ಪ್ರತಿಷ್ಠಿತ ದೇವಸ್ಥಾನಗಳ ಧ್ವಜಾರೋಹಣ ಸಂದರ್ಭ ದೇವರ ಮೂರ್ತಿಬಿದ್ದ ಘಟನೆ ಘಟಿಸಿದೆ.   ಉತ್ಸವದಲ್ಲಿ ದೇವರ ಬಲಿ ಮೂರ್ತಿ ಬಲಿ ಸೇವೆ ಸಂದರ್ಭ    ಶಿರದಿಂದ ಕೆಳಗೆ ಜಾರಿ ಬಿದ್ದ ಘಟನೆಯೂ ಘಟಿಸಿದೆ.  ದೇವರ ಮೆರವಣಿಗೆ ಸಂದರ್ಭ ರಥವೇ ಮುಗುಚಿ ಬಿದ್ದು,  ದಿಗ್ಬ್ರಮೆಗೊಳಿಸಿ ಪ್ರಾಣಹಾನಿ ಆಗಿರುವುದು ನಮ್ಮ ಕಣ್ಣ ಮುಂದಿದೆ. ರಥೋತ್ಸವದ ಸಂದರ್ಭ ಹತ್ತು ಹಲವು ಬಾರಿ ವಿಘ್ನ ಸಂಭವಿಸಿದ್ದನ್ನು ನಾವು ಕಂಡಿದ್ದೇವೆ.

  ದೇವರನ್ನು ಸ್ವಾಗತಿಸುವ ಆನೆಯೂ ಕಾಲು ಜಾರಿ ಬೀಳುವುದು, ಬಿಸಿಯ ತಾಪ ಹೆಚ್ಚಾಗಿ ಆರತಿ ತಟ್ಟೆಯೇ  ಕೈ ಜಾರಿ ಕೆಳಗೆ ಬೀಳುವುದು ಸಹಜ. ಇದೆಲ್ಲ ದೈವಲೀಲೆ. ಇದು ದೈಹಿಕ ಮತ್ತು ಅಧ್ಯಾತ್ಮಿಕ ವಿಚಾರ ಚಿಂತನೆ ವಿಮರ್ಶೆಗಳು ಇರುತ್ತದೆಯೇ ಹೊರತು ಇದರ ಮಧ್ಯೆ ರಾಜಕೀಯವನ್ನು ಎಳೆದು ತರುವುದು ಸಲ್ಲದು.   

 ಮಹಾರಾಷ್ಟ್ರದಂತಹ ಮಹಾಭೂಮಿಯಲ್ಲಿ ಸನಾತನ ಹಿಂದೂಗಳ ಆರಾಧ್ಯ ದೇವರಾದ ಅಯ್ಯಪ್ಪ ಸ್ವಾಮಿಯನ್ನು ಅಲ್ಲಿನ ಜನರಿಗೆ ಪರಿಚಯಿಸಿದ ಹಲವಾರು ತುಳುವ ಗುರುಸ್ವಾಮಿಗಳಲ್ಲಿ ಚಂದ್ರಹಾಸ ಗುರುಸ್ವಾಮಿಯವರ ಬಹು ದೊಡ್ಡ ಪಾತ್ರ ಇರುವುದನ್ನು ನಾವು ಮರೆಯಬಾರದು.

 ಚಂದ್ರಹಾಸ ಗುರುಸ್ವಾಮಿಯವರಿಗೆ ನಾವು  ಆತ್ಮಸ್ಥೈರ್ಯ ತುಂಬಿ, ಅವರಿಂದ ಇನ್ನಷ್ಟು ಕಾಲ ಅಯ್ಯಪ್ಪ ಮಹಾ ಸ್ವಾಮಿಯ ಸೇವೆ ನಡೆಯುವಂತಾಗಲಿ ಎಂದು ಹೃದಯ ತುಂಬಿ ಹಾರೈಸೋಣ.

Leave a comment

Your email address will not be published. Required fields are marked *

eMedia Kannada  @2025. All Rights Reserved.