• Home  
  • ಸುರತ್ಕಲ್:‌ 12 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿದ ಶಾಸಕ ಡಾ. ಭರತ್ ಶೆಟ್ಟಿ(Surathkal: MLA Dr. Bharat Shetty distributed title deeds to 12 families)  
- social service - ರಾಜಕೀಯ

ಸುರತ್ಕಲ್:‌ 12 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿದ ಶಾಸಕ ಡಾ. ಭರತ್ ಶೆಟ್ಟಿ(Surathkal: MLA Dr. Bharat Shetty distributed title deeds to 12 families)  

Share:  ಸುರತ್ಕಲ್:‌ 12 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿದ ಶಾಸಕ ಡಾ. ಭರತ್ ಶೆಟ್ಟಿ   (Surathkal) ಸುರತ್ಕಲ್:‌ ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ವಾರ್ಡ್ ಸಂಖ್ಯೆ 2ರಲ್ಲಿ ಕಳೆದ 60 ವರ್ಷಗಳಿಂದ ವಾಸಿಸುತ್ತಿರುವ 12 ಕುಟುಂಬಗಳಿಗೆ ಶಾಸಕ ಡಾ. ಭರತ್ ಶೆಟ್ಟಿಯವರು ಅವರು ಹಕ್ಕು ಪತ್ರ ವಿತರಿಸಿದರು. ಖಾಸಗಿ ಜಮೀನಿನಲ್ಲಿ  ನೆಲೆಸಿದ್ದ ಈ ಕುಟುಂಬಗಳಿಗೆ ಪಾಲಿಕೆಯು ಜಮೀನು ಖರೀದಿಸಿ ಭೂಮಿಯ ಒಡೆತನವನ್ನು ನೀಡಿದೆ. ಹಕ್ಕು ಪತ್ರ ವಿತರಿಸಿ ಮಾತನಾಡಿದ ಶಾಸಕ  ಡಾ. ಭರತ್ ಶೆಟ್ಟಿ, ಪ್ರತಿಯೊಬ್ಬರಿಗೂ […]

 ಸುರತ್ಕಲ್:‌ 12 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿದ ಶಾಸಕ ಡಾ. ಭರತ್ ಶೆಟ್ಟಿ  

(Surathkal) ಸುರತ್ಕಲ್:‌ ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ವಾರ್ಡ್ ಸಂಖ್ಯೆ 2ರಲ್ಲಿ ಕಳೆದ 60 ವರ್ಷಗಳಿಂದ ವಾಸಿಸುತ್ತಿರುವ 12 ಕುಟುಂಬಗಳಿಗೆ ಶಾಸಕ ಡಾ. ಭರತ್ ಶೆಟ್ಟಿಯವರು ಅವರು ಹಕ್ಕು ಪತ್ರ ವಿತರಿಸಿದರು.

ಖಾಸಗಿ ಜಮೀನಿನಲ್ಲಿ  ನೆಲೆಸಿದ್ದ ಈ ಕುಟುಂಬಗಳಿಗೆ ಪಾಲಿಕೆಯು ಜಮೀನು ಖರೀದಿಸಿ ಭೂಮಿಯ ಒಡೆತನವನ್ನು ನೀಡಿದೆ.

ಹಕ್ಕು ಪತ್ರ ವಿತರಿಸಿ ಮಾತನಾಡಿದ ಶಾಸಕ  ಡಾ. ಭರತ್ ಶೆಟ್ಟಿ, ಪ್ರತಿಯೊಬ್ಬರಿಗೂ ಸ್ವಂತ ಸೂರು ಹೊಂದುವ ಆಕಾಂಕ್ಷೆ ಇರುತ್ತದೆ. ನಿಮ್ಮ ಸಮಸ್ಯೆ ಕುರಿತಾಗಿ  ಪಾಲಿಕೆ ಸದಸ್ಯರಲ್ಲಿ ತಿಳಿಸಿ ಹಕ್ಕು ಪತ್ರಕ್ಕೆ ಮನವಿ ಮಾಡಿದ ಮೇರೆಗೆ ಖಾಸಗೀ ಜಮೀನು ಖರೀದಿಸಲು ಸೂಚಿಸಿ ಅದರಂತೆ ನೀವು ವಾಸ ಮಾಡುತ್ತಿದ್ದ ಜಾಗ  ನಿಮ್ಮದಾಗಿದೆ. ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ನಿಮ್ಮ ಮುಂದಿನ ಜೀವನ ಉತ್ತಮವಾಗಿರಲಿ ಎಂದು ಹಾರೈಸಿದರು.

ಈ ಸಂದರ್ಭ ಮಂಗಳೂರು ಮೇಯರ್ ಮನೋಜ್ ಕುಮಾರ್, ವಿಪಕ್ಷ ನಾಯಕ ಅನಿಲ್ ಕುಮಾರ್ ಅವರು ಮಾತನಾಡಿದರು.

  ಉಪ ಮೇಯರ್ ಬಾನುಮತಿ, ಸ್ಥಾಯೀ ಸಮಿತಿ ಸದಸ್ಯರಾದ ವೀಣಾ ಮಂಗಳ, ಸುಮಿತ್ರ ಕರಿಯ, ಸರಿತ ಶಶಿಧರ್, ಶ್ವೇತ ಪೂಜಾರಿ, ನಯನ ಆರ್ ಕೋಟ್ಯಾನ್, ವೇದಾವತಿ, ಲಕ್ಷ್ಮೀ ಶೇಖರ್ ದೇವಾಡಿಗ, ವರುಣ್ ಚೌಟ, ಶೋಭಾ ರಾಜೇಶ್, ಪಾಲಿಕೆ ಅಧಿಕಾರಿಗಳಾದ ವಿಭಾಗೀಯ ಆಯುಕ್ತ ಗುರುಪ್ರಸಾದ್, ಚಿತ್ತರಂಜನ್, ಮಾಲಿನಿ ರೋಡ್ರಿಗಸ್, ಸುಲತ, ರೇಖಾ  ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.