ಪಡುಬಿದ್ರಿ ಪಾದೆಬೆಟ್ಟು: ಯುವಕ ನೇಣಿಗೆ ಶರಣು
(Padubidri) ಪಡುಬಿದ್ರಿ: ಪಡುಬಿದ್ರಿ ಪಾದೆಬೆಟ್ಟುವಿನಲ್ಲಿ ಯುವಕನೋರ್ವ ನೇಣಿಗೆ ಶರಣಾದ ಘಟನೆ ಗುರುವಾರ ರಾತ್ರಿ ಘಟಿಸಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಕೊರಳೊಡ್ಡಿದ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಪಾದೆಬೆಟ್ಟುವಿನ ನಿವಾಸಿ ರಿತೇಶ್(33) ಎಂದು ಗುರುತಿಸಲಾಗಿದೆ.
ಈತ ಪಾದೆಬೆಟ್ಟುವಿನಲ್ಲಿರುವ ತನ್ನ ಚಿಕ್ಕಮ್ಮನೊಂದಿಗೆ ವಾಸವಾಗಿದ್ದು, ಲೈನ್ ಸೇಲ್ ವೃತ್ತಿ ನಡೆಸುತ್ತಿದ್ದ. ಚಿಕ್ಕಮ್ಮ ಹಾಗೂ ಅವರ ಮಕ್ಕಳು ಹೊರ ಹೋಗಿದ್ದ ಸಂದರ್ಭ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಮಾಹಿತಿ ಸಿಕ್ಕ ತಕ್ಷಣ ರಿತೇಶನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

