• Home  
  • ಪಡುಬಿದ್ರಿ; ಯುವಕ ನೇಣಿಗೆ ಶರಣು (Padubidri ; Youth commits suicide)
- ಅಪರಾಧ

ಪಡುಬಿದ್ರಿ; ಯುವಕ ನೇಣಿಗೆ ಶರಣು (Padubidri ; Youth commits suicide)

Share: ಪಡುಬಿದ್ರಿ; ಯುವಕ ನೇಣಿಗೆ ಶರಣು  (Padubidri) ಪಡುಬಿದ್ರಿ : ಪಡುಬಿದ್ರಿ ಠಾಣಾ ವ್ಯಾಪ್ತಿಯ ನಂದಿಕೂರಿನಲ್ಲಿ ಯುವಕನೋರ್ವ ಮಂಗಳವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಘಟಿಸಿದೆ.  ಮೃತ ಯುವಕನನ್ನು ನಂದಿಕೂರು ಗ್ರಾಮದ ನಿವಾಸಿ ಪ್ರಜನ್ (22) ಎಂದು ಗುರುತಿಸಲಾಗಿದೆ. ಪ್ರಜನ್‌ ಸುಮಾರು 3 ತಿಂಗಳಿನಿಂದ ಯಾವುದೋ  ಕಾರಣದಿಂದ ಮಾನಸಿಕವಾಗಿ ನೊಂದಿದ್ದು, ಯಾರಲ್ಲೂ ಮಾತನಾಡದೆ ವಿಚಿತ್ರವಾಗಿ ವರ್ತಿಸುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಮೇಲ್ಚಾವಣಿಯ ಮರದ ಪಕ್ಕಾಸಿಗೆ ನೈಲಾನ್‌ ಹಗ್ಗವನ್ನು ಬಿಗಿದು ಕುತ್ತಿಗೆಗೆ  ನೇಣು ಹಾಕಿಕೊಂಡಿದ್ದ. […]

ಪಡುಬಿದ್ರಿ; ಯುವಕ ನೇಣಿಗೆ ಶರಣು

 (Padubidri) ಪಡುಬಿದ್ರಿ : ಪಡುಬಿದ್ರಿ ಠಾಣಾ ವ್ಯಾಪ್ತಿಯ ನಂದಿಕೂರಿನಲ್ಲಿ ಯುವಕನೋರ್ವ ಮಂಗಳವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಘಟಿಸಿದೆ.

 ಮೃತ ಯುವಕನನ್ನು ನಂದಿಕೂರು ಗ್ರಾಮದ ನಿವಾಸಿ ಪ್ರಜನ್ (22) ಎಂದು ಗುರುತಿಸಲಾಗಿದೆ.

ಪ್ರಜನ್‌ ಸುಮಾರು 3 ತಿಂಗಳಿನಿಂದ ಯಾವುದೋ  ಕಾರಣದಿಂದ ಮಾನಸಿಕವಾಗಿ ನೊಂದಿದ್ದು, ಯಾರಲ್ಲೂ ಮಾತನಾಡದೆ ವಿಚಿತ್ರವಾಗಿ ವರ್ತಿಸುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಮೇಲ್ಚಾವಣಿಯ ಮರದ ಪಕ್ಕಾಸಿಗೆ ನೈಲಾನ್‌ ಹಗ್ಗವನ್ನು ಬಿಗಿದು ಕುತ್ತಿಗೆಗೆ  ನೇಣು ಹಾಕಿಕೊಂಡಿದ್ದ.  

  ನೆರೆಮನೆಯ ಸಂಬಂಧಿ ರಾಮ ಎಂಬವರು ಇದನ್ನು ಕಂಡು ಹಗ್ಗವನ್ನು ತುಂಡರಿಸಿ, ಕೆಳಗೆ ಇಳಿಸಿ, ಮೃತನ ತಮ್ಮನೊಂದಿಗೆ ಪಡುಬಿದ್ರಿ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಸರಕಾರಿ  ಆಸ್ಪತ್ರೆಗೆ ಸಾಗಿಸುವಂತೆ ಸಲಹೆ ನೀಡಿದ್ದಾರೆ. ಅಲ್ಲಿಯ ವೈದ್ಯಾಧಿಕಾರಿಯವರು ಪರೀಕ್ಷಿಸಿ, ಪ್ರಜನ್‌ ಮೃತಪಟ್ಟ ಬಗ್ಗೆ ತಿಳಿಸಿದ್ದಾರೆ.

 ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. 

Leave a comment

Your email address will not be published. Required fields are marked *

eMedia Kannada  @2025. All Rights Reserved.