Tag: padubidri police

PROBLEMS

ಹೆಜಮಾಡಿ : ಟಯರ್ ಪಂಕ್ಚರ್ ಅಂಗಡಿಯಲ್ಲಿ ಆಕಸ್ಮಿಕ ಅವಘಡ (Hejamadi: Accident at tire puncture shop)

ಹೆಜಮಾಡಿ : ಟಯರ್ ಪಂಕ್ಚರ್ ಅಂಗಡಿಯಲ್ಲಿ ಆಕಸ್ಮಿಕ ಅವಘಡ   ಬೆಂಕಿ ನಂದಿಸಲು ಟೋಲ್ ಸಿಬ್ಬಂದಿ, ಸ್ಥಳೀಯರಿಂದ  ಹರಸಾಹಸ  (Hejamady) ಹೆಜಮಾಡಿ : ಹೆಜಮಾಡಿ ಟೋಲ್ ಬಳಿ ಟಯರ್ ಪಂಕ್ಚರ್ ಅಂಗಡಿಯಲ್ಲಿ ಬೆಂಕಿ ಅವಘಡ  ಘಟನೆ ಘಟಿಸಿದ್ದು, ಅಂಗಡಿಯೊಘಗಿದ್ದ ಲಕ್ಷಾಂತರ ಮೌಲ್ಯದ ಟಯರ್‌ ಭಸ್ಮವಾದ ಘಟನೆ ಭಾನುವಾರ ಸಂಜೆ ಘಟಿಸಿದೆ.  ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿ ಪರಿಸರದ ತುಂಬಾ  ಹೊಗೆ ಆವರಿಸುತ್ತಿದ್ದಂತೆ ಸ್ಥಳೀಯರು ಹಾಗೂ ಟೋಲ್ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಲು ಹರ ಸಾಹಸ ಪಟ್ಟರು.   […]

ಅಪಘಾತ

ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್‌ ಟೆಂಪೋ ಮನೆಗೆ ಡಿಕ್ಕಿ : ಮನೆಯವರು ಪಾರು (Driver loses control of goods tempo, crashes into house; family escapes)

ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್‌ ಟೆಂಪೋ ಮನೆಗೆ ಡಿಕ್ಕಿ : ಮನೆಯವರು ಪಾರು ಕನ್ನಂಗಾರು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಬಳಿ ನಡೆದ ಘಟನೆ (Padubidri) ಪಡುಬಿದ್ರಿ : ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್‌ ಟೆಂಪೋವೊಂದು ಮನೆಗೆ ಡಿಕ್ಕಿಯಾದ ಘಟನೆ ಮಂಗಳವಾರ ಮದ್ಯಾಹ್ನ ಹೆಜಮಾಡಿ ರಾಹೆ ೬೬ರ ಕನ್ನಂಗಾರು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಬಳಿ ಘಟಿಸಿದೆ.     ಪಡುಬಿದ್ರಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಗೂಡ್ಸ್‌ ಟೆಂಪೋ, ಹೆಜಮಾಡಿಯಲ್ಲಿ ನಿಯಂತ್ರಣ ತಪ್ಪಿ ಇಸ್ಮಾಯಿಲ್‌ ಮಂಜತೋಟ ಎಂಬವರ […]

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಎರ್ಮಾಳು : ಕಚ್ಚೂರು ಶ್ರೀ ಮಾಲ್ದಿದೇವಿ ಅಂಬೋಡಿ ಕಳ ದೇವಸ್ಥಾನದ ವತಿಯಿಂದ ಪ್ರತಿಭಾ ಪುರಸ್ಕಾರ (Yermal: Talent award from Kachur Sri Maldidevi Ambodi Kala Temple)

ಎರ್ಮಾಳು : ಕಚ್ಚೂರು ಶ್ರೀ ಮಾಲ್ದಿದೇವಿ ಅಂಬೋಡಿ ಕಳ ದೇವಸ್ಥಾನದ ವತಿಯಿಂದ ಪ್ರತಿಭಾ ಪುರಸ್ಕಾರ (Yermal) ಎರ್ಮಾಳು : ಎರ್ಮಾಳು ಕಚ್ಚೂರು ಶ್ರೀ ಮಾಲ್ದಿದೇವಿ (ಮಹಾಲಕ್ಷ್ಮೀ) ಅಂಬೋಡಿ ಕಳ ದೇವಸ್ಥಾನದ ವತಿಯಿಂದ ಸ್ಥಳಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿತು.  ಪಡುಬಿದ್ರಿ ಪೊಲೀಸ್‌ ಠಾಣೆಯ ಪಿಎಸ್‌ಐ ಶಕ್ತಿವೇಲುರವರು ಆಗಮಿಸಿ ವಿದ್ಯಾರ್ಥಿ ವೇತನ ವಿತರಿಸಿ,  ಶುಭ ಹಾರೈಸಿದರು.  ಸಮಿತಿಯ ಅಧ್ಯಕ್ಷ ರಮೇಶ್ ಯು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ವೇದಿಕೆಯಲ್ಲಿ ಗೌರವಾಧ್ಯಕ್ಷ ಜಗನ್ನಾಥ್ ಕೆ ಅದಮಾರು, ಉಪಾಧ್ಯಕ್ಷ ಜಗನ್ನಾಥ್ ಉಚ್ಚಿಲ, ಕಾರ್ಯದರ್ಶಿ […]

ನಿಧನ

ಹೆಜಮಾಡಿ: ಹೃದಯ ಸಂಬಂಧಿ ಖಾಯಿಲೆಗೆ ಬಾಲಕಿ ಬಲಿ (Hejamadi: Girl dies of heart-related illness)

ಹೆಜಮಾಡಿ: ಹೃದಯ ಸಂಬಂಧಿ ಖಾಯಿಲೆಗೆ ಬಾಲಕಿ ಬಲಿ (Padubidri) ಪಡುಬಿದ್ರಿ : ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಹೆಜಮಾಡಿಯಲ್ಲಿ ಘಟಿಸಿದೆ.  ಹೆಜಮಾಡಿ ಎಸ್ ಎಸ್ ರೋಡಿನ ನಿವಾಸಿ ಕಲಂದರ್ ಹಾಗೂ ಮುಮ್ತಾಜ್ ದಂಪತಿಯ ಪುತ್ರಿ ಫಾತಿಮಾ ಮಾಹಿರಾ (6) ಮೃತಪಟ್ಟ ಬಾಲಕಿ. ಮಾಹಿರಾಳನ್ನು ಬೆಂಗಳೂರಿನ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಹಿಂದೆಯೂ ಹೃದಯ ಸಂಬಂಧಿ ಖಾಯಿಲೆಗಾಗಿ ಅದೇ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು ಎನ್ನಲಾಗಿದೆ. […]

ಅಪರಾಧ

ಪಡುಬಿದ್ರಿ : ಅರಣ್ಯ ಇಲಾಖೆ ನೆಟ್ಟ ಗಿಡಗಳನ್ನು ಜೆಸಿಬಿಯಿಂದ ಕಿತ್ತೆಸೆದ  ಜಾಹೀರಾತು ಸಂಸ್ಥೆ, ದೂರು ದಾಖಲು (Padubidri: Advertising agency uses JCB to uproot trees planted by Forest Department, complaint filed)

ಪಡುಬಿದ್ರಿ : ಅರಣ್ಯ ಇಲಾಖೆ ನೆಟ್ಟ ಗಿಡಗಳನ್ನು ಜೆಸಿಬಿಯಿಂದ ಕಿತ್ತೆಸೆದ  ಜಾಹೀರಾತು ಸಂಸ್ಥೆ, ದೂರು ದಾಖಲು (Padubidri) ಪಡುಬಿದ್ರಿ : ಪಡುಬಿದ್ರಿಯ ಅಲಂಗಾರು ಎಂಬಲ್ಲಿ ರಾ. ಹೆ. 66ರ ಬದಿಯಲ್ಲಿ ಅರಣ್ಯ ಇಲಾಖೆ ಬೆಳೆದ ಗಿಡಗಳು  ಜಾಹೀರಾತು ಫಲಕಗಳಿಗೆ ಅಡ್ಡವಾಗುತ್ತದೆ ಎಂದು 42 ಗಿಡಗಳು ಹಾಗೂ ಅರಣ್ಯ ಇಲಾಖೆಯ ಬೋರ್ಡನ್ನು ಜಾಹೀರಾತು ಫಲಕ ಹಾಕುವ ವ್ಯಕ್ತಿ ಜೆಸಿಬಿಯಿಂದ ಕಿತ್ತೆಸೆದ ಘಟನೆ ಘಟಿಸಿದೆ.  2023 ನೇ ವರ್ಷದ ಜೂನ್‌ ತಿಂಗಳಲ್ಲಿ ಹೊಳೆ ದಾಸವಾಳ, ಮೇ ಪ್ಲವರ್‌, ನೇರಳೆ, ಕಕ್ಕೆ […]

ಅಪಘಾತ

ಬಡಾ ಎರ್ಮಾಳು : ರಸ್ತೆ ದಾಟುತ್ತಿದ್ದಾಗ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ವ್ಯಕ್ತಿ ಮೃತ್ಯು (Bada Yermal : Man dies after being hit by two-wheeler while crossing road)

ಬಡಾ ಎರ್ಮಾಳು : ರಸ್ತೆ ದಾಟುತ್ತಿದ್ದಾಗ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ವ್ಯಕ್ತಿ ಮೃತ್ಯು (Padubidri) ಪಡುಬಿದ್ರಿ : ರಸ್ತೆ ದಾಟುತ್ತಿದ್ದಾಗ ದ್ವಿಚಕ್ರ ವಾಹನವೊಂದು ಡಿಕ್ಕಿಯಾದ ರಭಸಕ್ಕೆ ವ್ಯಕ್ತಿಯೋರ್ವ ಮೃತಪಟ್ಟು, ದ್ವಿಚಕ್ರ ವಾಹನದ ಸವಾರ ಮತ್ತು ಸಹ ಸವಾರ ಗಾಯಗೊಂಡ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಬಡಾ ಎರ್ಮಾಳು ರಾಹೆ ೬೬ರ ಅಪೂರ್ವ ಬಾರ್ ಎದುರು ಘಟಿಸಿದೆ.  ಮೃತ ವ್ಯಕ್ತಿಯನ್ನು ನಾಗೇಂದ್ರ ಸಿಂಗ್‌ (25) ಎಂದು ಗುರುತಿಸಲಾಗಿದೆ.  ನಾಗೇಂದ್ರ ಸಿಂಗ್‌ರವರ ತಲೆಗೆ ಹಾಗೂ ಮೈ, ಕೈಗೆ  ತೀವ್ರ […]

ಅಪಘಾತ

ಉಚ್ಚಿಲ : ಮಿನಿ ಲಾರಿ ಪಲ್ಟಿ, ಚಾಲಕನಿಗೆ ಗಾಯ (Uchila: Mini lorry overturns, driver injured)

 ಉಚ್ಚಿಲ : ಮಿನಿ ಲಾರಿ ಪಲ್ಟಿ, ಚಾಲಕನಿಗೆ ಗಾಯ  (Uchila) ಉಚ್ಚಿಲ: ಉಚ್ಚಿಲ ರಾಹೆ 66 ರ ರಿಕ್ಷಾ ನಿಲ್ದಾಣದ ಎದುರು ಚಾಲಕರ ನಿಯಂತ್ರಣ ತಪ್ಪಿ ಮಿನಿ ಲಾರಿಯೊಂದು ಮುಗುಚಿ ಬಿದ್ದ ಘಟನೆ  ಶನಿವಾರ ಮುಂಜಾನೆ 3:00 ಸುಮಾರಿಗೆ ಘಟಿಸಿದೆ. ಬಿಜಾಪುರದಿಂದ ಮಂಗಳೂರಿಗೆ ದ್ರಾಕ್ಷಿ ಹಣ್ಣನ್ನು ಹೇರಿಕೊಂಡು ಸಾಗುತ್ತಿದ್ದಾಗ ಮಿಲಿ ಲಾರಿ, ಉಚ್ಚಿಲ  ರಾಹೆ 66 ರಲ್ಲಿ ವೇಗ ತಡೆಗೆ ಇರಿಸಲಾದ ಕಬ್ಬಿಣದ ಡ್ರಮ್ಮಿಗೆ   ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ, ಚಾಲಕನ ನಿಯಂತ್ರಣ ತಪ್ಪಿದ ಮಿನಿಲಾರಿ, […]

ಅಪರಾಧ

ಮುದರಂಗಡಿ: ಅಕ್ರಮ ಮರಳು ಸಾಗಾಟ, 2 ಟಿಪ್ಪರ್ ವಶಕ್ಕೆ, ಚಾಲಕರು ಪರಾರಿ (Mudarangadi: Illegal sand transportation, 2 tippers seized, drivers abscond)

ಮುದರಂಗಡಿ: ಅಕ್ರಮ ಮರಳು ಸಾಗಾಟ, 2 ಟಿಪ್ಪರ್ ವಶಕ್ಕೆ, ಚಾಲಕರು ಪರಾರಿ (Padubidri) ಪಡುಬಿದ್ರಿ : ಪಡುಬಿದ್ರಿ ಠಾಣಾ ವ್ಯಾಪ್ತಿಯ ‌ಸಾಂತೂರು ಗ್ರಾಮದ ಮುದರಂಗಡಿ ರಸ್ತೆಯಲ್ಲಿ ತಲಾ 10 ಸಾವಿರ ಮೌಲ್ಯದ 3 ಯುನಿಟ್ ತೂಕದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಟಿಪ್ಪರನ್ನು ಪಡುಬಿದ್ರಿ ಪೋಲಿಸರು ವಶ ಪಡೆದುಕೊಂಡ ‌ಘಟನೆ ಬುಧವಾರ ತಡ ರಾತ್ರಿ ಸಂಭವಿಸಿದೆ.  ಸಾಂತೂರು ಗ್ರಾಮದಲ್ಲಿ ಪಡುಬಿದ್ರಿ ಠಾಣಾ ಹೆಡ್ ಕಾನ್ಸ್ಟೇಬಲ್ ಉದಯಕುಮಾರ್‌ ಶೆಟ್ಟಿ ಗಸ್ತಿನಲ್ಲಿರುವಾಗ ಸಾಂತೂರು ಸುಬ್ರಹ್ಮಣ್ಯ ದೇವಸ್ಥಾನ ಕಡೆಯಿಂದ ಮುದರಂಗಡಿ ಕಡೆಗೆ […]

ಅಪರಾಧ

ಪಡುಬಿದ್ರಿ: ಪಲಿಮಾರು ರೈಲು ಹಳಿಯ ಬಳಿ ಕಬ್ಬಿಣದ ಕ್ಲಿಪ್ ಹೆಕ್ಕಿದ ಆರೋಪ: ಬಾಲಕರಿಬ್ಬರಿಗೆ ಥಳಿಸಿದ ರೈಲ್ವೆ ನೌಕರನ ಮೇಲೆ ಪ್ರಕರಣ ದಾಖಲು (Padubidri: Case registered against railway employee who beat up two boys on charges of stealing iron clips near Palimaru railway tracks)

ಪಡುಬಿದ್ರಿ: ಪಲಿಮಾರು ರೈಲು ಹಳಿಯ ಬಳಿ ಕಬ್ಬಿಣದ ಕ್ಲಿಪ್ ಹೆಕ್ಕಿದ ಆರೋಪ: ಬಾಲಕರಿಬ್ಬರಿಗೆ ಥಳಿಸಿದ ರೈಲ್ವೆ ನೌಕರನ ಮೇಲೆ ಪ್ರಕರಣ ದಾಖಲು (Padubidri) ಪಡುಬಿದ್ರಿ, ಫೆ.17: ಪಲಿಮಾರು ಅವರಾಲಿನಲ್ಲಿ ರೈಲು ಹಳಿಯ ಬಳಿ ಕಬ್ಬಿಣದ ಕ್ಲಿಪ್‌ ಹೆಕ್ಕಿದ ಆರೋಪದಲ್ಲಿ ಶಾಲಾ ಬಾಲಕರಿಬ್ಬರಿಗೆ ಹಲ್ಲೆ ನಡೆಸಿ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವೈರಲ್ ಮಾಡಿರುವ ಕೊಂಕಣ ರೈಲ್ವೇ ನೌಕರನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕನೋರ್ವನ ತಂದೆ ಹೆಜಮಾಡಿಯ ಅಬ್ದುಲ್ ಖಾದರ್ ಈ ಕುರಿತು ಪೊಲೀಸರಿಗೆ […]

ಅಪರಾಧ

ಪಡುಬಿದ್ರಿ : ಬೈಕ್ ಕಳವು ಪ್ರಕರಣ, ಅಂತರ್ ಜಿಲ್ಲಾ ಬೈಕ್ ಕಳ್ಳರಿಬ್ಬರ ಬಂಧನ (Padubidri: Bike theft case, two inter-district bike thieves arrested)

ಪಡುಬಿದ್ರಿ : ಬೈಕ್ ಕಳವು ಪ್ರಕರಣ, ಅಂತರ್ ಜಿಲ್ಲಾ ಬೈಕ್ ಕಳ್ಳರಿಬ್ಬರ ಬಂಧನ (Padubidri) ಪಡುಬಿದ್ರಿ : ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ಜಿಲ್ಲಾ ಬೈಕ್ ಕಳ್ಳರಿಬ್ಬರನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.  ಬoಧಿತರನ್ನು ಶಿವಮೊಗ್ಗದ ಸೂಳೆಬೈಲು ನಿವಾಸಿ ಮೊಹಮದ್ ರುಹಾನ್, ಶಿವಮೊಗ್ಗದ ಗೋಪಾಲ ನಿವಾಸಿ ತಾಜುದ್ದೀನ್ ಪಿ ಕೆ ಎಂದು ಗುರುತಿಸಲಾಗಿದೆ.  2025ರ ಜನವರಿ 21 ರಂದು ರಾತ್ರಿ ಕಾರ್ಕಳ ತಾಲೂಕಿನ ಮುಂಡ್ಕೂರಿನಲ್ಲಿ ಘಟನೆ ನಡೆದಿತ್ತು. ಪರೀಕ್ಷಿತ್ ಶೆಟ್ಟಿ ಎಂಬವರು ಪಡುಬಿದ್ರಿ ಪೇಟೆಯಲ್ಲಿ ತನ್ನ ಬುಲೆಟ್ […]

eMedia Kannada  @2025. All Rights Reserved.