• Home  
  •    ಉಡುಪಿ: ಕರಾವಳಿಯಲ್ಲಿ ಸಾಂಪ್ರದಾಯಕ ನಡೆಸುವ ಕೈರಂಪಣಿ ಮೀನುಗಾರರಿಗೆ ಬಂಪರ್ ಮೀನು (Udupi: Bumper fish for traditional fishermen on the coast)
- ಪ್ರಚಲಿತ - ವಿಡಿಯೋ

   ಉಡುಪಿ: ಕರಾವಳಿಯಲ್ಲಿ ಸಾಂಪ್ರದಾಯಕ ನಡೆಸುವ ಕೈರಂಪಣಿ ಮೀನುಗಾರರಿಗೆ ಬಂಪರ್ ಮೀನು (Udupi: Bumper fish for traditional fishermen on the coast)

Share:    (Udupi) ಉಡುಪಿ: ಕರಾವಳಿಯಲ್ಲಿ ಸಾಂಪ್ರದಾಯಕ ನಡೆಸುವ ಕೈರಂಪಣಿ ಮೀನುಗಾರರಿಗೆ ಬಂಪರ್ ಮೀನು ಉಡುಪಿ: ಕರಾವಳಿಯಲ್ಲಿ ಸಾಂಪ್ರದಾಯಕವಾಗಿ ನಡೆಸುವ ಕೈರಂಪಣಿ ಫಂಡು ಮೀನುಗಾರರಿಗೆ ಬಂಪರ್ ಮೀನಿನ ಫಸಲು ದೊರೆತಿದೆ. ಉಡುಪಿಯ ಪಡುಕೆರೆಯಲ್ಲಿ ಭರಪೂರ ಬೂತಾಯಿ ಮೀನುಗಳು ಬಲೆಗೆ ಬಿದ್ದಿವೆ. ಲಕ್ಷಾಂತರ ರೂಪಾಯಿಯ ಭೂತಾಯಿ ಮೀನು ಬಲೆಗೆ ಬಿದ್ದು, ಬಡಮೀನುಗಾರರಿಗೆ ಲಾಟರಿ ಹೊಡೆದಂತಾಗಿದೆ.  ಸಾಮಾನ್ಯ ವಾಗಿ ಕೈರಂಪಣಿ ಮೀನುಗಾರಿಕೆ ನಡೆಸುವ ಬಡ ಮೀನುಗಾರರು , ಕಾರ್ಮಿಕರು 10 ರಿಂದ 15 ಜನರ ತಂಡ ಕಟ್ಟಿಕೊಂಡು ಮೀನುಗಾರಿಕೆಯನ್ನು ನಡೆಸುತ್ತಾರೆ. […]

   (Udupi) ಉಡುಪಿ: ಕರಾವಳಿಯಲ್ಲಿ ಸಾಂಪ್ರದಾಯಕ ನಡೆಸುವ ಕೈರಂಪಣಿ ಮೀನುಗಾರರಿಗೆ ಬಂಪರ್ ಮೀನು

ಉಡುಪಿ: ಕರಾವಳಿಯಲ್ಲಿ ಸಾಂಪ್ರದಾಯಕವಾಗಿ ನಡೆಸುವ ಕೈರಂಪಣಿ ಫಂಡು ಮೀನುಗಾರರಿಗೆ ಬಂಪರ್ ಮೀನಿನ ಫಸಲು ದೊರೆತಿದೆ.

ಉಡುಪಿಯ ಪಡುಕೆರೆಯಲ್ಲಿ ಭರಪೂರ ಬೂತಾಯಿ ಮೀನುಗಳು ಬಲೆಗೆ ಬಿದ್ದಿವೆ. ಲಕ್ಷಾಂತರ ರೂಪಾಯಿಯ ಭೂತಾಯಿ ಮೀನು ಬಲೆಗೆ ಬಿದ್ದು, ಬಡಮೀನುಗಾರರಿಗೆ ಲಾಟರಿ ಹೊಡೆದಂತಾಗಿದೆ.

 ಸಾಮಾನ್ಯ ವಾಗಿ ಕೈರಂಪಣಿ ಮೀನುಗಾರಿಕೆ ನಡೆಸುವ ಬಡ ಮೀನುಗಾರರು , ಕಾರ್ಮಿಕರು 10 ರಿಂದ 15 ಜನರ ತಂಡ ಕಟ್ಟಿಕೊಂಡು ಮೀನುಗಾರಿಕೆಯನ್ನು ನಡೆಸುತ್ತಾರೆ. ಸಮುದ್ರ ತೀರದಿಂದ 2 ರಿಂದ 3 ನಾಟಿಕಲ್ ದೂರವರೆಗೆ ಕೈರಂಪಣಿ ಬಲೆ ಹಾಕಿ ಮೀನುಗಾರಿಕೆಯನ್ನು ನಡೆಸುತ್ತಾರೆ ಸಣ್ಣ ದೋಣಿಗಳ ಮೂಲಕ ಸಾಗಿ ಬಲೆ ಬೀಸಿ ಕೆಲವು ಗಂಟೆಗಳ ನಂತರ ದಡದಿಂದಲೇ ಬಲೆಯನ್ನು ಎಳೆಯುತ್ತಾರೆ. ಅದರೆ ಶ್ರಮಕ್ಕೆ ತಕ್ಕ ಪ್ರತಿಫಲದೊರಕುವುದು ಅಪರೂಪ .

  ಮಲ್ಪೆಯ ಪಡುಕೆರೆ ಬೀಚ್ ನಲ್ಲಿ ಕೈರಂಪಣಿ ಬಲೆ ಬೀಸಿದ ಮೀನುಗಾರರ ಅದೃಷ್ಟ ಕುಲಾಯಿಸಿದೆ. ಬೂತಾಯಿ ಮೀನುಗಳ ಗುಂಪು ಕೈರಂಪಣಿ ಬಲೆ ಬಿದ್ದಿದೆ. ಕೈರಂಪಣಿ ಮೀನುಗಾರಿಗೆ ಒಂದು ದಿನದ ಮಟ್ಟಿಗೆ ಜೇಬು ತುಂಬವ ಸಂಪಾದನೆ ಯಾದ್ರೆ, ತಾಜಾ ಮೀನು ತಿನ್ನ ಬೇಕು ಅನ್ನೊ ಮೀನು ಪ್ರಿಯರಿಗೆ ರುಚಿ ರುಚಿಯಾದ ತಾಜಾ ಬೂತಾಯಿ ಮೀನು ದೊರಕಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.