• Home  
  • ಹಿಂದೂ ಧರ್ಮ ದೇಶಕ್ಕೆ ಅವಶ್ಯಕ : ಶಾಂತೇಶ್ವರ ಸಂಸ್ಥಾನದ  ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು (Hinduism is essential for the country: Shri Chandrashekar Shivacharya Mahaswamy of Shanteshwar Sansthan)
- ಧಾರ್ಮಿಕ

ಹಿಂದೂ ಧರ್ಮ ದೇಶಕ್ಕೆ ಅವಶ್ಯಕ : ಶಾಂತೇಶ್ವರ ಸಂಸ್ಥಾನದ  ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು (Hinduism is essential for the country: Shri Chandrashekar Shivacharya Mahaswamy of Shanteshwar Sansthan)

Share: ಹಿಂದೂ ಧರ್ಮ ದೇಶಕ್ಕೆ ಅವಶ್ಯಕ : ಶಾಂತೇಶ್ವರ ಸಂಸ್ಥಾನದ  ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು  (Kaup) ಕಾಪು : ಭಾರತದಲ್ಲಿ ಸಮುದಾಯಕ್ಕಿಂತ ಮೀರಿದ್ದು ಧರ್ಮ. ಹಿಂದು ಧರ್ಮ ದೇಶಕ್ಕೆ ಅವಶ್ಯಕ. ತಾಯಿ ಸ್ವರೂಪಿಯಾದ ಮಾರಿಯಮ್ಮ ದೊಡ್ಡ ಶಕ್ತಿ. ತಾಯಿಯನ್ನು ನೋಡಲು ಗರ್ಭ ಗುಡಿಗೆ ಪ್ರವೇಶ ಮಾಡಿ ಸಮೀಪದಿಂದ ನೋಡುವ ಭಾಗ್ಯ ಸಮಾನತೆಯ ಪ್ರತೀಕವಾಗಿದೆ ಎಂದು ಬೆಳಗಾವಿಯ ಹಿರೇಮಠ ಹುಕ್ಕೇರಿ ಶ್ರೀ ಗುರು ಶಾಂತೇಶ್ವರ ಸಂಸ್ಥಾನದ  ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಅವರು ಕಾಪು ಶ್ರೀ […]

ಹಿಂದೂ ಧರ್ಮ ದೇಶಕ್ಕೆ ಅವಶ್ಯಕ : ಶಾಂತೇಶ್ವರ ಸಂಸ್ಥಾನದ  ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು

 (Kaup) ಕಾಪು : ಭಾರತದಲ್ಲಿ ಸಮುದಾಯಕ್ಕಿಂತ ಮೀರಿದ್ದು ಧರ್ಮ. ಹಿಂದು ಧರ್ಮ ದೇಶಕ್ಕೆ ಅವಶ್ಯಕ. ತಾಯಿ ಸ್ವರೂಪಿಯಾದ ಮಾರಿಯಮ್ಮ ದೊಡ್ಡ ಶಕ್ತಿ. ತಾಯಿಯನ್ನು ನೋಡಲು ಗರ್ಭ ಗುಡಿಗೆ ಪ್ರವೇಶ ಮಾಡಿ ಸಮೀಪದಿಂದ ನೋಡುವ ಭಾಗ್ಯ ಸಮಾನತೆಯ ಪ್ರತೀಕವಾಗಿದೆ ಎಂದು ಬೆಳಗಾವಿಯ ಹಿರೇಮಠ ಹುಕ್ಕೇರಿ ಶ್ರೀ ಗುರು ಶಾಂತೇಶ್ವರ ಸಂಸ್ಥಾನದ  ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಅವರು ಕಾಪು ಶ್ರೀ ಹೊಸ ಮಾರಿಗುಡಿ ದೇವಳದ ಪ್ರತಿಷ್ಠಾ ಬ್ರಹ್ಮಲಕಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವದಿಸಿದರು.

 ವೇದಿಕೆಯಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಶಾಸಕ  ಲಾಲಾಜಿ ಆರ್ ಮೆಂಡನ್, ಉದ್ಯಮಿ ಉದಯ ಸುಂದರ ಶೆಟ್ಟಿ, ಉದ್ಯಮಿ ಎರ್ಮಾಳು ನಾರಾಯಣ ಶೆಟ್ಟಿ ಮುಂಬೈ, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷ ರವಿ ಶೆಟ್ಟಿಗಾರ್, ದೇವಳದ ಅಭಿವೃದ್ಧಿ ಸಮಿತಿ ಮಾಧವ ಆರ್ ಪಾಲನ್ ಉಪಸ್ಥಿತರಿದ್ದರು.

 ಯೋಗೀಶ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಅಶೋಕ್ ಪಕ್ಕಳ ಮುಂಬೈ, ದಾಮೋದರ ಶರ್ಮ  ನಿರೂಪಿಸಿದರು.

 ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಟೇಶ ನೃತ್ಯನಿಕೇತನ ಉಚ್ಚಿಲದ ವಿದುಷಿ ಮಂಗಳಾ ಕಿಶೋರ್ ದೇವಾಡಿಗ ಮತ್ತು ಬಳಗದವರಿಂದ ನೃತ್ಯ ವೈಭವ, ತೋನ್ಸೆ ಪುಷ್ಕಳ ಕುಮಾರ್ ಮತ್ತು ಬಳಗದವರಿಂದ ಭಕ್ತಿ ನಾಮಾಮೃತಂ, ಜಗದೀಶ್ ಪುತ್ತೂರು ಬಳಗದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಜರಗಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.