• Home  
  • ಕರ್ನಾಟಕ ಬ್ಯಾಂಕ್ – ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ (Karnataka Bank – Handover of Clean Drinking Water Unit)
- social service

ಕರ್ನಾಟಕ ಬ್ಯಾಂಕ್ – ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ (Karnataka Bank – Handover of Clean Drinking Water Unit)

Share: ಕರ್ನಾಟಕ ಬ್ಯಾಂಕ್ – ಶುದ್ದ ಕುಡಿಯುವ ನೀರಿನ ಘಟಕ ಹಸ್ತಾಂತರ (Udupi) ಉಡುಪಿ: ಕರ್ನಾಟಕ ಬ್ಯಾಂಕ್ ತನ್ನ ಶತಮಾನೋತ್ಸವ ಸಂಭ್ರಮದ ಸಮಾಜ ಸೇವಾ ಚಟುವಟಿಕೆಗಳ ಅಂಗವಾಗಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್‌ನ ಬ್ರಾಹ್ಮಿ ಸಭಾಭವನದಲ್ಲಿ ಸಾರ್ವಜನಿಕ ಬಳಕೆಗಾಗಿ ಉತ್ಕೃಷ್ಟ ಗುಣಮಟ್ಟದ ಶುದ್ಧೀಕರಣ ಸಾಮರ್ಥ್ಯವನ್ನು ಹೊಂದಿರುವ ಯು.ವಿ. ಫಿಲ್ಟರೇಷನ್ ತಂತ್ರಜ್ಞಾನದ ಎರಡು ಘಟಕಗಳನ್ನು ಹಸ್ತಾಂತರಿಸಿದರು.  ಕಲ್ಕೂರ ರೆಫ್ರಿಜರೇಶನ್ ಮತ್ತು ಕಿಚನ್ ಇಕ್ವಿಪ್ಮೆಂಟ್ ನಿರ್ಮಿತ  ಶುದ್ದ ಬಿಸಿನೀರು, ಸಾಮಾನ್ಯ ಹಾಗೂ ತಣ್ಣೀರಿನ ಆಯ್ಕೆಗಳ ಮೂರು ನಳಿಕೆಗಳನ್ನು ಹೊಂದಿರುವ […]

ಕರ್ನಾಟಕ ಬ್ಯಾಂಕ್ – ಶುದ್ದ ಕುಡಿಯುವ ನೀರಿನ ಘಟಕ ಹಸ್ತಾಂತರ

(Udupi) ಉಡುಪಿ: ಕರ್ನಾಟಕ ಬ್ಯಾಂಕ್ ತನ್ನ ಶತಮಾನೋತ್ಸವ ಸಂಭ್ರಮದ ಸಮಾಜ ಸೇವಾ ಚಟುವಟಿಕೆಗಳ ಅಂಗವಾಗಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್‌ನ ಬ್ರಾಹ್ಮಿ ಸಭಾಭವನದಲ್ಲಿ ಸಾರ್ವಜನಿಕ ಬಳಕೆಗಾಗಿ ಉತ್ಕೃಷ್ಟ ಗುಣಮಟ್ಟದ ಶುದ್ಧೀಕರಣ ಸಾಮರ್ಥ್ಯವನ್ನು ಹೊಂದಿರುವ ಯು.ವಿ. ಫಿಲ್ಟರೇಷನ್ ತಂತ್ರಜ್ಞಾನದ ಎರಡು ಘಟಕಗಳನ್ನು ಹಸ್ತಾಂತರಿಸಿದರು.

 ಕಲ್ಕೂರ ರೆಫ್ರಿಜರೇಶನ್ ಮತ್ತು ಕಿಚನ್ ಇಕ್ವಿಪ್ಮೆಂಟ್ ನಿರ್ಮಿತ  ಶುದ್ದ ಬಿಸಿನೀರು, ಸಾಮಾನ್ಯ ಹಾಗೂ ತಣ್ಣೀರಿನ ಆಯ್ಕೆಗಳ ಮೂರು ನಳಿಕೆಗಳನ್ನು ಹೊಂದಿರುವ ಶುದ್ಧ ಕುಡಿಯುವ ನೀರಿನ ಎರಡು ಘಟಕಗಳನ್ನು ಕರ್ನಾಟಕ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀ ವಾದಿರಾಜ ಭಟ್ ರವರು ಯುವ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷರಾದ ಚಂದ್ರಕಾಂತ ಕೆ. ಎನ್. ರವರಿಗೆ ಹಸ್ತಾಂತರಿಸುವ ಮೂಲಕ ಲೋಕಾರ್ಪಣೆ ಗೊಳಿಸಿದರು.

ಈ ವಾಟರ್ ಕೂಲರ್‌ಗಳ ವಾರ್ಷಿಕ ನಿರ್ವಹಣೆಯನ್ನು ಕಲ್ಕೂರ ರೆಪ್ರಿಜಿರೇಶನ್ ಸಂಸ್ಥೆ ನಿಶುಲ್ಕವಾಗಿ ನಿರ್ವಹಿಸುತ್ತದೆ ಎಂದು ಸಂಸ್ಥೆಯ ಮಾಲಕರಾದ  ರಂಜನ್ ಕಲ್ಕೂರರವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್ ಉಡುಪಿ ರಥಬೀದಿ ಶಾಖೆಯ ಸೀನಿಯರ್ ಮ್ಯಾನೇಜರ್ ಪ್ರಶಾಂತ್ ರಾವ್, ಕುಂಜಿಬೆಟ್ಟು ಶಾಖೆಯ ಶ್ರೀಮತಿ ರಾಧಿಕಾ ಚಂದ್ರಕಾಂತ್, ಯುವ ಬ್ರಾಹ್ಮಣ ಪರಿಷತ್ತಿನ ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಪೂರ್ವಾಧ್ಯಕ್ಷರಾದ ರಂಜನ್ ಕಲ್ಕೂರ, ಉಪಾಧ್ಯಕ್ಷ ರಘುಪತಿ ರಾವ್, ಸಮಿತಿಯ ಸದಸ್ಯರಾದ ರಂಗನಾಥ್ ಸರಳಾಯ, ನಾರಾಯಣ ಭಟ್, ಕಲ್ಕೂರ ಬಿಲ್ಡರ್ಸ್ ಮತ್ತು ಡೆವಲಪರ್ಸ್ ನ ಪಾಲುದಾರ ರಾಹುಲ್ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.

ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಚೈತನ್ಯ ಎಂ. ಜಿ.  ಪ್ರಸ್ತಾವಿಸಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.